ಪ್ರತಿಯೊಬ್ಬ ವ್ಯಕ್ತಿಯು 28 ,30 ವರ್ಷದ ನಂತರದವರನ್ನೇ ವಿವಾಹವಾಗಿರುತ್ತಾರೆ. ಆದರೆ ಕೆಲವರು ಈಗಿನ ಜೀವನಕ್ಕೆ ನೋಡಿದರೆ ವೇಗವಾಗಿ ಮದುವೆಯಾಗುವುದು ಸರ್ವೆ ಸಾಮಾನ್ಯ. ಅವರ ಪ್ರಕೃತಿ ಅಥವಾ ಕಲ್ಚರ್ ಬೇರೆ ಬೇರೆ ರೀತಿ ಆಗಿರುತ್ತದೆ .ಅವರು ಬೆಳೆದಿರುವ ಸನ್ನಿವೇಶಗಳು ಬೇರೆ ಇರುತ್ತದೆ. ಅವರ ಮನೆಯಲ್ಲಿ ಮನೆಯಲ್ಲಿರುವಂತಹ ದೈನಂದಿನ ಎಲ್ಲ ಯೋಚನೆ ,ಯೋಜನೆಗಳು ವಿಭಿನ್ನವಾಗಿ ಇರುತ್ತದೆ. ಅಪರೂಪದ ಮನೆಯಲ್ಲಿ ಅವರ ಆಹಾರ ಪದ್ಧತಿ ,ಆಹಾರದ ಕಾಲಕ್ರಮೇಣಗಳು ವಿಧವಿಧವಾಗಿರುತ್ತದೆ.ಅದನ್ನು ಹೀಯಾಳಿಸುವ ಬದಲು ಹೊಂದಿಕೊಂಡು ಹೋಗುವುದು ಸೂಕ್ತ.
ಈ ಹ್ಯಾಬಿಟ್ಸ್ ಗಳನ್ನು ಬದಲಾಯಿಸುವುದು ಸುಲಭ ಆದರೆ ಅವರದ್ದೆ ಆದ ಟೈಮ್ ತೆಗೆದುಕೊಳ್ಳುತ್ತದೆ. ಸಂಬಂಧಗಳಲ್ಲಿ ಟೈಟಲ್ ಕೊಡುವಂತಹದ್ದನ್ನು ಮಾಡಬಾರದು. ಸನ್ನಿವೇಶದ ಬಗ್ಗೆ ಮಾತನಾಡಬೇಕೆಂದು ಹೊರತು ಮೂದಲಿಕೆಯ ಮಾತು ಹೀಗೆ ಹೇಳಿಕೆಗಳನ್ನು ಮಾಡಬಾರದು. ಕೆಲವು ಸಂದರ್ಭ ದಲ್ಲಿ ಈ ಹೀಯಾಳಿಕೆ ಬದಲಾಗಿ ಬೇರೆ ಏನಾದರೂ ಮಾಡಬಹುದು. ಎಂಬುದನ್ನು ಯೋಚಿಸಬೇಕು. ಅಲ್ಲದೇ ಅವರೊಂದು ಹೇಳಿದರು , ಇವರೊಂದು ಹೇಳಿದರು ಎಂದು ದೂರುವುದು ತಪ್ಪು.
ಇದೇ ರೀತಿ ಆರೋಪಗಳ ಪಟ್ಟಿ ಮಾಡುವುದರಿಂದ ಸಂಸಾರದಲ್ಲಿ ಸುಖ ಕಾಣೋದಿಲ್ಲ. ಕೆಲವೊಂದು ಸಂದರ್ಭದಲ್ಲಿ ಸಮಾಧಾನ ತಿಳಿಸಿ ವಿವರಿಸುವುದರಿಂದ ಅವರಿಗೆ ಮನದಟ್ಟಾಗುತ್ತದೆ. ಈ ದಾಂಪತ್ಯ ಜೀವನದಲ್ಲಿ ನಾವಾಡುವ ಪದಗಳು ಯಾವ ರೀತಿಯಾಗಿ ಯಾರನ್ನು ಯಾವಾಗ ನೋಯಿಸುತ್ತೆ, ಅಂತಕಂತದ್ದನ್ನು ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ .ಇಂತಹ ಪದ ಬಳಕೆಗಳು ಆಳವಾಗಿ ಕೂತುಬಿಡುತ್ತದೆ ಪದಗಳ ಬಳಕೆ ಸಂದರ್ಭದಲ್ಲಿ ಕೇರ್ ಫುಲ್ ಆಗಿರಬೇಕು. ಗಂಡ ಹೆಂಡತಿ ಇಬ್ಬರೂ ಯಾವುದೋ ಬೇರೆ ರೀತಿಯ ಕ್ಷೇತ್ರಗಳಲ್ಲಿ ದುಡಿಯುತ್ತಿರುತ್ತಾರೆ .ಆ ಸಂದರ್ಭದಲ್ಲಿ ತುಂಬಾ ಹೇಳಿಸುವ ರೀತಿ ಮಾತನಾಡುವುದು ಅವರ ಮನಸ್ಸಿಗೆ ಗಾಯವನ್ನುಂಟು ಮಾಡಬಹುದು.
ನಾವು ಯಾರನ್ನು ಪಾರ್ಟ್ನರ್ಸ್ ಆಗಿ ಪಡೆದು ಬಂದಿ ಬಂದಾಗ ಅವರಿಗೆ ಈ ರೀತಿಯಲ್ಲಿ ನೋವು ಕೊಡುವುದು ತಪ್ಪು .ಗಂಡ ಹೆಂಡತಿ ಎನ್ನುವುದರ ಬದಲು ಸಂಗಾತಿ ಅನ್ನುವುದು ಉತ್ತಮ ಕೆಲವು ವಿಷಯದಲ್ಲಿ ಅವನು ಅವಳಿಗೆ ಅವಳು ಅವನಿಗೆ ಕೈಜೋಡಿಸುತ್ತಿರುತ್ತಾರೆ. ಅಷ್ಟೇ ಜೀವನ ಅನ್ನುವುದು ಮೂದಲಿಸಲು ಹೀಯಾಳಿಸುವುದರಿಸಲು ಪದಗಳು ಬಳಕೆಗೆ ಮದುವೆಯ ಅವಶ್ಯಕತೆ ಇರುವುದಿಲ್ಲ. ಹೊರಗಿನವರಿಗೂ ಹೇಳಬಾರದು ಆದರೆ ನಾವು ಆ ತಪ್ಪನ್ನು ಮಾಡುವುದಿಲ್ಲ ನಮ್ಮವರೇ ಅಂತ ಬಂದಾಗ ಈ ಮಾತುಗಳು ಸಲೀಸಾಗಿ ಬರುತ್ತದೆ. ಅದನ್ನು ನಿಲ್ಲಿಸಬೇಕು ಇಂತಹದಕ್ಕೆ ಯಾವುದೇ ರೀತಿಯ ಅಧಿಕಾರವಿರುವುದಿಲ್ಲ.



