ಸೊಶಿಯಲ್ ಮೀಡಿಯಾಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತವರ. ಫನ್ನಿ ಸರ್ಪ್ರೈಸ್, ಟ್ರಾಜಿಡಿಯಂತಹ ವಿವಿಧ ಭಾವನೆಗಳಿರುವ ದೃಶ್ಯಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಸದ್ಯ ಮದುವೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕಲ್ಯಾಣ ಮಂಟಪಕ್ಕೆ ಸಂಬಂಧಿಸಿದ್ದು. ವರನಿಗೆ ವಧು ತಕ್ಕ ಪಾಠ ಕಲಿಸಿದಳು. ವೈರಲ್ ಆದ ವಿಡಿಯೋದಲ್ಲಿ ವರ ಗುಟ್ಕಾ ತಿನ್ನುತ್ತಾ ಮದುವೆ ಮಂಟಪಕ್ಕೆ ಬಂದಿದ್ದು ಎಲ್ಲರಲ್ಲೂ ಅಚ್ಚರಿಗೆ ಒಳಪಡಿಸಿದೆ.

https://www.instagram.com/reel/CTBIEQEpMhf/?utm_source=ig_web_copy_link&igshid=MzRlODBiNWFlZA==
ತಾಳಿ ಕಟ್ಟ ಬೇಕಿದ್ದ ವರ ಗುಟ್ಕಾ ತಿನ್ನುತ್ತಿರುವುದನ್ನು ಕಂಡು ಕೋಪಗೊಂಡ ವಧು ಎಲ್ಲರ ಮುಂದೆ ವರನ ಕೆನ್ನೆಗೆ ಬಾರಿಸಿದ್ದಾಳೆ. ವಧು-ವರರ ಮುಂದೆ ಕುಳಿತ ವ್ಯಕ್ತಿ ವಧುವಿಗೆ ಏನನ್ನೋ ಹೇಳುತ್ತಿದ್ದಾನೆ. ಅಷ್ಟೇ… ವರನ ಕಡೆಗೆ ವಧು ತಿರುಗಿ ನೋಡಿದಳು.. ತನ್ನ ಭಾವೀ ಗಂಡ ಗುಟ್ಕಾ ತಿನ್ನುತ್ತಿರುವುದು ಕಂಡುಬಂದಿದೆ. ಅಷ್ಟೇ ಮುಂದೆ ಅಲ್ಲಿ ನಡೆದಿದ್ದೆಲ್ಲಾ ವೈರಲ್ ಆಗುತ್ತಿದೆ. ವಧು ನೋಡನೋಡುತ್ತಿದ್ದಂತೆ ಎಲ್ಲರ ಮುಂದೆ ಅಲ್ಲಿದ್ದ ಇಬ್ಬರ ಕೆನ್ನೆಗೆ ಬಾರಿಸಿರುವ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ‘ಗಲಾಟೆ ಮದುವೆಯ’ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಕಂಡಿರುವ ನೆಟ್ಟಿಗರಲ್ಲಿ ಒಬ್ಬ, ‘ಗುಟ್ಕಾ ತಿನ್ನುತ್ತಿರುವ ವರ ಅಜಯ್ ದೇವಗನ್ ಗೆಳೆಯನಿರಬೇಕು’ ಎಂದರೆ, ಮತ್ತೊಬ್ಬ ‘ಗುಟ್ಕಾ ತಿನ್ನುವುದು ಆರೊಗ್ಯಕ್ಕೆ ಹಾನಿಕಾರಕ, ಅದರಲ್ಲೂ ಮದುವೆ ಮನೆಯಲ್ಲಿ ತಿನ್ನುವುದು ಕಪಾಳಕ್ಕೆ ಮಾರಕ’ ಎಂದು ಬರೆದುಕೊಂಡಿದ್ದಾನೆ. ಇದೊಂದಿಗೆ ಮದುಮಗಳ ಧೈರ್ಯವನ್ನು ಕೂಡ ನೆಟ್ಟಿಗರು ಕೊಂಡಾಡಿದ್ದಾರೆ.



