ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ತೆಲುಗಿನ ಖ್ಯಾತ ಹಿರಿಯನಟ ನರೇಶ್ ಅವರ ಜೊತೆಗೆ ಲಿವಿನ್ ರಿಲೇಶನ್ಷಿಪ್ ನಲ್ಲಿ ಇದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಇವರಿಬ್ಬರು ಆಗಾಗ ಮಾಧ್ಯಮದ ಎದುರು ಕಾಣಿಸಿಕೊಳ್ಳುತ್ತಾರೆ. ನಿನ್ನೆಯಷ್ಟೇ ನಡೆದ ನರೇಶ್ ಅವರ 65ನೇ ಹುಟ್ಟುಹಬ್ಬದಂದು ಇವರಿಬ್ಬರು ಪ್ರೆಸ್ ಮೀಟ್ ಕರೆಸಿ, ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ. ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪವಿತ್ರಾ ಲೋಕೇಶ್ ಅವರು ನರೇಶ್ ಅವರ ಬಗ್ಗೆ ಹೇಳಿರುವ ಕೆಲವು ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಹಳ ಟ್ರೋಲ್ ಆಗುತ್ತಿದೆ.
ಪವಿತ್ರಾ ಲೋಕೇಶ್ ಅವರು ನರೇಶ್ ಅವರ ಜೊತೆಗೆ ಕೆಲ ವರ್ಷಗಳಿಂದ ರಿಲೇಶನ್ಷಿಪ್ ನಲ್ಲಿ ಇದ್ದಾರೆ ಎಂದು ಗೊತ್ತೇ ಇದೆ. ಇವರಿಬ್ಬರ ವಿಚಾರದಲ್ಲಿ ಸಿಕ್ಕಾಪಟ್ಟೆ ವಿವಾದ, ಗೊಂದಲ, ಜಗಳ ಇದೆಲ್ಲವು ನಡೆದಿದ್ದು ಗೊತ್ತೇ ಇದೆ. ಇಬ್ಬರು ಜೊತೆಯಾಗಿ ಸಿನಿಮಾ ಕೂಡ ಮಾಡಿದರು. ಪವಿತ್ರಾ ನರೇಶ್ ಅವರು ಏನೇ ನಡೆದರು, ಬಿಟ್ಟುಕೊಡದೇ, ತಲೆಕೆಡಿಸಿಕೊಳ್ಳದೇ ಜೊತೆಯಲ್ಲಿದ್ದಾರೆ. ಇವರಿಬ್ಬರು ಸಿಕ್ಕಾಪಟ್ಟೆ ಟ್ರೋಲ್ ಆಗುವುದು ಉಂಟು. ಇದೀಗ ಇವರು ಮಾಧ್ಯಮದವರ ಎದುರು ಹೇಳಿರುವ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

ಹುಟ್ಟುಹಬ್ಬದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ನಟ ನರೇಶ್ ಅವರು ತಮ್ಮ ತಾಯಿಯವರನ್ನು ನೆನಪು ಮಾಡಿಕೊಂಡಿದ್ದಾರೆ. ಹಾಗೆಯೇ ತಮ್ಮ ಕೆರಿಯರ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದು, ಈ ವರೆಗು ಅವರು ಅನೇಕ ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸಿದ್ದು, ನಪುಂಸಕ ಪಾತ್ರದಲ್ಲಿ ಇದುವರೆಗೂ ನಟಿಸಿಲ್ಲ, ಆ ಪಾತ್ರದಲ್ಲಿ ನಟಿಸುವ ಕನಸು ಇದೆ ಎಂದು ಹೇಳಿದ್ದಾರೆ. ಹಾಗೆಯೇ ಪವಿತ್ರಾ ಲೋಕೇಶ್ ಅವರು ಸಹ ನರೇಶ್ ಅವರ ಬಗ್ಗೆ ಮಾತನಾಡಿದ್ದು, ನರೇಶ್ ಅವರಿಗೆ ತುಂಬಾ ಎನರ್ಜಿ ಇದೆ, ಬೆಳಗ್ಗೆ ಇಂದ ರಾತ್ರಿ ವರೆಗು ಕೆಲಸ ಮಾಡುತ್ತಾರೆ, ಹೊರಗಡೆ ಹೋಗಿ ಕೆಲಸ ಮಾಡಿ ಬರುತ್ತಾರೆ.
ನಾನು ಹಾಗೂ ನರೇಶ್ ಅವರ ಜೊತೆಯಲ್ಲಿ ಇರುವವರು ಎಲ್ಲರಿಗೂ ಕೂಡ ಮನೆಗೆ ಬಂದ ಮೇಲೆ ಸುಸ್ತಾಗುತ್ತದೆ, ನಾವೆಲ್ಲರೂ ಸುಸ್ತಾಗಿರುತ್ತೇವೆ. ಆದರೆ ನರೇಶ್ ಅವರು ಕೆಲಸ ಮಾಡಿ ಬಂದಮೇಲು ಎನರ್ಜಿ ಇಂದ ಇರುತ್ತಾರೆ, 10 ಜನರಿಗೆ ಇರುವಷ್ಟು ಶಕ್ತಿ ಅವರಿಗೆ ಇದೆ. ಆಮೇಲು ಏನಾದರೂ ಕೆಲಸ ಇದೆ ಅಂದರೆ ಮಾಡ್ತಾರೆ, ಆದರೆ ನನಗೆ ರಾತ್ರಿ ಆಗೋ ಹೊತ್ತಿಗೆ ಸುಸ್ತಾಗಿ ಬಿಟ್ಟಿರುತ್ತದೆ ಎಂದು ಹೇಳಿದ್ದಾರೆ ನಟಿ ಪವಿತ್ರಾ ಲೋಕೇಶ್. ಇವರು ಹೇಳಿರೋದು ನರೇಶ್ ಅವರ ಕೆಲಸದ ಬಗ್ಗೆಯೇ ಇರಬಹುದು. ಆದರೆ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ.
ನೆಟ್ಟಿಗರು ಪವಿತ್ರಾ ಲೋಕೇಶ್ ಅವರ ಮಾತಿಗೆ ಡಬಲ್ ಮೀನಿಂಗ್ ಹುಡುಕುತ್ತಾ ಹೊಸ ಅರ್ಥವನ್ನೇ ಕೊಟ್ಟು, ಇಬ್ಬರನ್ನು ಟ್ರೋಲ್ ಮಾಡುತ್ತಿದ್ದಾರೆ. ಇವರಿಬ್ಬನ್ನು ಎಷ್ಟೇ ಟ್ರೋಲ್ ಮಾಡಿದರೂ ಸಹ, ಜನರು ಏನೇ ಅಂದರು ಸಹ ಇವರಿಬ್ಬರು ಕೂಡ ದೂರ ಅಂತೂ ಆಗುವುದಿಲ್ಲ. ಇವರಿಬ್ಬರ ರಿಲೇಶನ್ಷಿಪ್ ಬಗ್ಗೆ ಸುದ್ದಿಗಳು ಹೊರ ಬಂದಾಗಲೇ ಇಬ್ಬರು ಬಹಳ ಟ್ರೋಲ್ ಆಗಿದ್ದರು. ನರೇಶ್ ಅವರ ಪತ್ನಿ ಜಗಳ ಆಡಿದ್ದರು, ಮಾಧ್ಯಮದವರ ಎದುರು ಬಂದಿದ್ದರು. ಆದರೆ ಅವರು ಏನೇ ಮಾಡಿದರೂ, ನರೇಶ್ ಅವರಿಂದ ಪವಿತ್ರಾ ಅವರನ್ನು ದೂರ ಮಾಡಲು ಸಾಧ್ಯ ಆಗಲಿಲ್ಲ. ಇವರಿಬ್ಬರು ಇನ್ನು ಕೂಡ ಚೆನ್ನಾಗಿಯೇ ಇದ್ದಾರೆ.