ಭಾರತ ಸೇರಿದಂತೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಏಕದಿನ ವಿಶ್ವಕಪ್ ವೇಳಾ ಪಟ್ಟಿ ಕೊನೆಗೂ ಪ್ರಕಟಗೊಂಡಿದೆ.ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೂ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ ಎಂದು ತಿಳಿಸಿದೆ. ಜೊತೆಗೆ ವಿಶ್ವಕಪ್ ನಲ್ಲಿ ನಡೆಯುವ ಪಂದ್ಯಾಟಗಳ ವೇಳಾಪಟ್ಟಿಯನ್ನು ಕೂಡ ಹಂಚಿಕೊಂಡಿದೆ.

ಈ ಬಾರಿಯ ಏಕದಿನ ವಿಶ್ವಕಪ್ ಪಂದ್ಯಾಟಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ ಎಂದು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಜೊತೆಗೆ ಈ ಬಾರಿಯ ODI ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಾಟ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸೆಮಿಫೈನಲ್ಸ್ ಪಂದ್ಯಾಟಗಳು ವಾಂಖಡೆ ಹಾಗೂ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಟೀಂ ಇಂಡಿಯಾದ ಪಂದ್ಯಾಟಗಳ ವಿವರ:
ಅಕ್ಟೋಬರ್-8 ಆಸ್ಟ್ರೇಲಿಯಾ ವಿರುದ್ಧ (ಚೆನ್ನೈ)
ಅಕ್ಟೋಬರ್-11 ಅಫ್ಘಾನಿಸ್ತಾನ ವಿರುದ್ಧ (ದೆಹಲಿ)
ಅಕ್ಟೋಬರ್-15 ಪಾಕಿಸ್ತಾನದ ವಿರುದ್ಧ (ಅಹಮದಾಬಾದ್)
ಅಕ್ಟೋಬರ್-19 ಬಾಂಗ್ಲಾದೇಶದ ವಿರುದ್ಧ (ಪುಣೆ)
ಅಕ್ಟೋಬರ್-22 ನ್ಯೂಜಿಲೆಂಡ್ ವಿರುದ್ಧ (ಧರ್ಮಶಾಲಾ)

ಅಕ್ಟೋಬರ್-29 ಇಂಗ್ಲೆಂಡ್ ವಿರುದ್ಧ (ಲಕ್ನೋ)
ನವೆಂಬರ್-2 ಕ್ವಾಲಿಫೈಯರ್ ವಿರುದ್ಧ (ಮುಂಬೈ)
ನವೆಂಬರ್-5 ದಕ್ಷಿಣ ಆಫ್ರಿಕಾ ವಿರುದ್ಧ (ಕೊಲ್ಕತ್ತಾ)
ನವೆಂಬರ್-11 ಕ್ವಾಲಿಫೈಯರ್ ವಿರುದ್ಧ (ಬೆಂಗಳೂರು)