ಇಷ್ಟು ದಿನ ನಾವು ನೀವು ಕೆಲ ಕಾ’ಮುಕ ಶಿಕ್ಷಕರು ತಮ್ಮ ಶಾಲೆಯ ವಿಧ್ಯಾರ್ಥಿನಿರಿಗೆ ಲೈಂ’ಗಿಕ ಕಿರುಕುಳ ನೀಡುವುದನ್ನು, ಅ’ಶ್ಲೀಲ ಮೆಸೆಜ್ ಮಾಡುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಾ’ಮುಖ ಶಿಕ್ಷಕ ತನ್ನ ವಿದ್ಯಾರ್ಥಿಯ ತಾಯಿಗೆ ಅಶ್ಲೀಲ ಮೂಲ ಮೆಸೆಜ್ ಹಾಗೂ ಲೈಂ’ಗಿಕ ಕಿರುಕುಳ ನೀಡಿ ಪೊಲೀಸರ ಅಥಿತಿಯಾಗಿದ್ದಾನೆ. ವಿದ್ಯಾರ್ಥಿಗಳನ್ನು ತಿದ್ದಬೇಕಾದ ಶಿಕ್ಷಕನೇ ಸೆಗಣಿ ತಿನ್ನುವ ಕೆಲಸ ಮಾಡಿದ್ದು, ಆತನ ಕಾ’ಮಪುರಾಣದ ವಿವರ ಇಲ್ಲಿದೆ ನೋಡಿ.

ನೋಡಲು ದುಂಡುದುಂಡಾಗಿ ಒಳ್ಳೆ ಹಲಸಿನಕಾಯಿಯಂತಿರುವ ಈ ಕಚಡಾ ಮೇಷ್ಟ್ರು ತುಮಕೂರು ಜಿಲ್ಲೆಯ ಮಠವೊಂದಕ್ಕೆ ಸೇರಿದ ಶಾಲೆಯ ಶಿಕ್ಷಕ. ಈತನ ಹೆಸರು ಮಲ್ಲಾರಾಧ್ಯ. ಈತ ವಿದ್ಯಾರ್ಥಿಯೊಬ್ಬನ ತಾಯಿಯನ್ನೇ ತನ್ನ ಕಾ’ಮಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದು, ಈತನ ಮೇಲೆ ಇದೀಗ ಲೈಂ’ಗಿಕ ಕಿ’ರುಕುಳದ ಗಂಭೀರ ಆರೋಪ ಕೇಳಿ ಬಂದಿದೆ. ಜೊತೆಗೆ ಈ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದಾಳೆ.
ಮಕ್ಕಳ ವಿದ್ಯಾಭ್ಯಾಸದ ಕಾರಣದಿಂದ ಕೆಲವು ಶಾಲೆಗಳಲ್ಲಿ ಪೋಷಕರ ಮೊಬೈಲ್ ನಂಬರ್ ಪಡೆದುಕೊಳ್ಳುವುದು ಸಾಮಾನ್ಯ.ಆದರೆ ಈ ಮಲ್ಲಾರಾಧ್ಯ ಇದನ್ನೇ ಬಂಡವಾಳವಾಗಿಸಿಕೊಂಡು ವಿದ್ಯಾರ್ಥಿಯೊಬ್ಬನ ತಾಯಿಯನ್ನು ಕಬಳಿಸಲು ಪ್ರಯತ್ನಿಸಿದ್ದಾನೆ. ಮೊದ ಮೊದಲು ಈ ಮಹಿಳೆಯೊಂದಿಗೆ ಮಗನ ವಿದ್ಯಾಭ್ಯಾಸದ ವಿಚಾರವಾಗಿ ಚರ್ಚಿಸುತ್ತಿದ್ದ ಈತ ದಿನ ಕಳೆದಂತೆ ತಾಯಿಯೊಂದಿಗೆ ಸರಸದ ಪಾಠ ಆರಂಭಿಸಿದ್ದಾನೆ. ಇಷ್ಟೇ ಅಲ್ಲದೇ ನನ್ನ ಇಷ್ಟದಂತೆ ನನಗೆ ಸಹಕರಿಸದಿದ್ದರೆ ನಿನ್ನ ಮಗನನ್ನು ಪರೀಕ್ಷೆಯಲ್ಲಿ ಪೇಲ್ ಮಾಡಿ ಆತನ ಭವಿಷ್ಯ ಹಾಳು ಮಾಡುತ್ತೇನೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾನೆ.
ಮೊದ ಮೊದಲು ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದ ವಿದ್ಯಾರ್ಥಿಯ ತಾಯಿ, ಈ ಕಾ’ಮುಕನ ಕಿ’ರುಕುಳ ಮಿತಿ ಮೀರುತ್ತಿದ್ದಂತೆ ಪೊಲೀಸ ಠಾಣೆಗೆ ತೆರಳಿ ಆತನ ಮಾನ ಹರಾಜು ಹಾಕಿದ್ದಾಳೆ. ಸದ್ಯ, ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಮಲ್ಲರಾದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಮೇಲೆ ಎಪ್.ಐ.ಆರ್ ದಾಖಲಿಸಿದ್ದಾರೆ. ಆದರೆ ಶಿಕ್ಷಣ ಕಲಿಸಬೇಕಾದ ಶಿಕ್ಷಕರೇ ಈ ರೀತಿ ಹಾದಿ ತಪ್ಪಿ ಅನಾಚಾರ ಮಾಡುತ್ತಿರುವುದು ಶಿಕ್ಷಿತ ಸಮಾಜಕ್ಕೆ ಬಹುದೊಡ್ಡ ಅವಮಾನವೇ ಸರಿ.