ಅಂಗೈಯಲ್ಲಿ ಜಗತ್ತು ತೋರಿಸುವ ಸ್ಮಾರ್ಟ್ಫೋನ್ ಮನುಷ್ಯ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಪ್ರಸ್ತುತ ನೂರಾರು ಮೊಬೈಲ್ ಕಂಪೆನಿಗಳು ವಿವಿಧ ಮಾದರಿಯ ಸ್ಮಾರ್ಟ್ಫೋನ್ ಗಳನ್ನು ಲಾಂಚ್ ಮಾಡುತ್ತಿವೆ. ಹೆಚ್ಚಿನವರು ತಡೆರಹಿತ ಉಪಯೋಗ ಹಾಗೂ ಗೇಮಿಂಗ್ ಉದ್ದೇಶದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಧಿಕ RAM ಇರುವ ಸ್ಮಾರ್ಟ್ಫೋನ್ ಗಳನ್ನು ಬಯಸುತ್ತಿದ್ದಾರೆ. ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ 10GB,12GB ಹಾಗೂ 16GB RAM ಇರುವ ಮೊಬೈಲುಗಳು ಬಂದಿವೆ ಆದರೆ ಅವೆಲ್ಲವುಗಳನ್ನೂ ಮೀರಿ ಬರೊಬ್ಬರಿ RAM 24GB ಇರುವ ಸ್ಮಾರ್ಟ್ಫೋನ್ ಒಂದು ಮಾರುಕಟ್ಟೆಗೆ ಬರಲು ಸಜ್ಜಾಗಿದೆ.

ಹೌದು, ಗೇಮಿಂಗ್ ಸ್ಮಾರ್ಟ್ಫೋನ್ ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ನುಬಿಯಾ ಸಂಸ್ಥೆಯು ಇದೀಗ 24GB RAM ಇರುವ ‘ರೆಡ್ ಮ್ಯಾಜಿಕ್ 8S ಫ್ರೋ’ ಹೆಸರಿನ ಮೊಬೈಲ್ ಲಾಂಚ್ ಮಾಡಲು ಸಜ್ಜಾಗಿದೆ. ಸಾಮನ್ಯವಾಗಿ ಗೇಮಿಂಗ್ ಮೊಬೈಲ್ ಗಳ RAM 8GB, 12GB ಅಥವಾ 16GB ಇರುತ್ತದೆ. ಆದರೆ ಈಗ ಬರಲಿರುವ ಸ್ಮಾರ್ಟ್ಫೋನ್ ಬರೋಬ್ಬರಿ 24GB RAM ಹೊಂದಿರಲಿದ್ದು, ಜುಲೈ 5ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಜೊತೆಗೆ ಸ್ನ್ಯಾಪ್ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 6000mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಈ ಸ್ಮಾರ್ಟ್ಫೋನ್ ನಲ್ಲಿ ಲಭ್ಯವಿರಲಿದೆ.
ಈ ಸ್ಮಾರ್ಟ್ಫೋನ್ ನಲ್ಲಿ 6.8 ಇಂಚಿನ ಪೂರ್ಣ ಹೆಚ್ಡಿ+ ಓಎಲ್ಇಡಿ ಡಿಸ್ಪ್ಲೇ ಲಭ್ಯವಿದ್ದು, ಈ ಡಿಸ್ಪ್ಲೇಯು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ ಎನ್ನಲಾಗಿದೆ. ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದ್ದು, ಫ್ರಂಟ್ ಕ್ಯಾಮೆರಾ ಅಂಡರ್ ಡಿಸ್ಪ್ಲೇ ಮಾದರಿಯ ರಚನೆ ಲಭ್ಯವಿರಲಿದೆ.



