ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ನಿವೇದಿತಾ ಗೌಡ ಇಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋರಲ್ಲಿ ಒಬ್ಬರು. ಇವರು ಒಂದು ವಿಡಿಯೋ ಪೋಸ್ಟ್ ಮಾಡಿದರೆ, ಸಾವಿರಾರು ನೆಗಟಿವ್ ಕಾಮೆಂಟ್ಸ್, ಕೆಟ್ಟ ಕಾಮೆಂಟ್ಸ್ ಗಳು ಬರುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ನಿವೇದಿತಾ ಗೌಡ ತಲೆಕೆಡಿಸಿಕೊಳ್ಳುವುದೇ ಇಲ್ಲ. ಯಾವುದೇ ಕಾರಣಕ್ಕೆ ವಿಡಿಯೋ ಪೋಸ್ಟ್ ಮಾಡೋದನ್ನ ಬಿಡದ ನಿವೇದಿತಾ, ಇನ್ಸ್ಟಾಗ್ರಾಮ್ ನಲ್ಲಿ ದಿನಕ್ಕೊಂದು ರೀಲ್ಸ್ ಹಾಕುತ್ತಲೇ ಇರುತ್ತಾರೆ. ಇವರಿಗೆ ಬರುವ ನೆಗಟಿವ್ ಕಾಮೆಂಟ್ಸ್ ಗಳನ್ನು ಓದಿದರೆ ಎಂಥವರಿಗು ಯಪ್ಪಾ ಇದೆಲ್ಲಾ ಬೇಕಾ ಎಂದು ಅನ್ನಿಸದೆ ಇರದು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಿವೇದಿತಾ. ಇದೀಗ ಕೆಟ್ಟ ಕಾಮೆಂಟ್ ಗಳಿಗೆ ಖಡಕ್ ಆಗಿ ರಿಯಾಕ್ಟ್ ಮಾಡಿದ್ದಾರೆ. ಅದು ಅವರ ಹೊಸ ಪಾರ್ಟ್ನರ್ ಜೊತೆಗೆ. ಯಾರಪ್ಪಾ ಈ ಹೊಸ ಪಾರ್ಟ್ನರ್ ಎಂದು ಯೋಚಿಸುತ್ತಿದ್ದೀರಾ? ತಿಳಿಸುತ್ತೇವೆ ನೋಡಿ..
ಈ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದಾಗಿನಿಂದ ಜನರು ಎಲ್ಲರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಕಾಮೆಂಟ್ಸ್ ಬರೆಯುವುದು ಕೂಡ ಜಾಸ್ತಿಯೇ ಆಗಿದೆ. ಅದು ಸೆಲೆಬ್ರಿಟಿಯೇ ಆಗಿರಲಿ, ಅಥವಾ ಕಿರುತೆರೆಯಲ್ಲಿ ಗುರುತಿಸಿಕೊಂಡವರೆ ಆಗಿರಲಿ, ಅವರ ಬಗ್ಗೆ ಪಾಸಿಟಿವ್ ಗಿಂತ ನೆಗಟಿವ್ ಕಾಮೆಂಟ್ ಗಳು ಬರುವುದೇ ಜಾಸ್ತಿ. ಕೆಲವರು ಇದರ ಬಗ್ಗೆ ತಲೆಕೆಡಿಸಿಕೊಂಡು ಕೂತರೆ, ಇನ್ನು ಕೆಲವರು ತಮ್ಮ ಮನಸ್ಸಿಗೆ ಬಂದಿದ್ದನ್ನು ಮಾಡುತ್ತಾರೆ. ಅದೇ ವರ್ಗಕ್ಕೆ ಸೇರಿದವರು, ಇದುವರೆಗೂ ಎಷ್ಟೇ ನೆಗಟಿವ್ ಕಾಮೆಂಟ್ಸ್ ಗಳು ಬಂದಿದ್ದರು ಸಹ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ನಿವೇದಿತಾ ಗೌಡ ಕಾಮೆಂಟ್ಸ್ ಗಳಿಗೆ ರಿಪ್ಲೈ ಮಾಡಿದ್ದಾರೆ. ಈ ಬಾರಿ ಅವರು ಕಾಮೆಂಟ್ ಗೆ ರಿಪ್ಲೈ ಮಾಡಿರುವುದೇ ಬೇರೆ ರೀತಿ..
ನಿವೇದಿತಾ ಗೌಡ ತಮ್ಮ ಬೆಸ್ಟ್ ಫ್ರೆಂಡ್ ವಾಣಿಶ್ರೀ ಜೊತೆಗೆ ಕೂತು ಎಲ್ಲಾ ಕಾಮೆಂಟ್ಸ್ ಗಳನ್ನು ಓದಿದ್ದಾರೆ. ಅದರಲ್ಲಿ ಹಲವು ಕಾಮೆಂಟ್ಸ್ ಗಳಿಗೆ ವಿಡಿಯೋ ಮೂಲಕವೇ ರಿಪ್ಲೈ ಮಾಡಿದ್ದಾರೆ. ಇತ್ತೀಚೆಗೆ ನಿವೇದಿತಾ ಗೌಡ ಹಾಕಿದ್ದ ಒಂದು ವಿಡಿಯೋಗೆ, ಆವರೇಜ್ ಬಾರ್ ಡ್ಯಾನ್ಸರ್ ಥರ ಕಾಣಿಸುತ್ತೀಯಾ ಎಂದು ಕಾಮೆಂಟ್ ಬಂದಿತ್ತು, ಆ ಕಾಮೆಂಟ್ ಅನ್ನು ನಿವೇದಿತಾ ಗೌಡ ಓದಿದ ತಕ್ಷಣವೇ, ಅವರ ಫ್ರೆಂಡ್ ವಾಣಿಶ್ರೀ, ಆವರೇಜ್ ಅಲ್ಲ ಬೆಸ್ಟ್ ಬಾಲಿವುಡ್ ಡ್ಯಾನ್ಸರ್ ಎಂದು ರಿಪ್ಲೈ ಮಾಡಿದ್ದಾರೆ. ಈ ರೀತಿಯಾಗಿ ಬಾರ್ ಡ್ಯಾನ್ಸರ್ ಅಂದವರಿಗೆ ಖಡಕ್ ಉತ್ತರ ನೀಡಿದ್ದಾರೆ ನಿವೇದಿತಾ. ಇನ್ನೊಬ್ಬರು ಈ ಥರ ಡ್ಯಾನ್ಸ್ ಮಾಡೋಕೆ ನಾಚಿಕೆ ಅನ್ನಿಸೋದಿಲ್ವಾ ಎಂದು ಮತ್ತೊಂದು, ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಫ್ರೆಂಡ್, ಇಲ್ಲ ಎಂದಿದ್ದಾರೆ, ನಿವೇದಿತಾ ಕೂಡ ಮಾತಾನಾಡಿ, ನೋ, ವೈ ಯಾಕೆ ಎಂದು ಹೇಳಿದ್ದಾರೆ.

ಇದು ಇಷ್ಟಕ್ಕೆ ಮುಗಿಯದೇ, ವಿಡಿಯೋ ಇಷ್ಟಕ್ಕೆ ಮುಗಿಯದೇ ಇನ್ನು ಕೂಡ ಮುಂದುವರೆದಿದ್ದು, ಇನ್ನಷ್ಟು ಕಾಮೆಂಟ್ಸ್ ಗಳನ್ನು ಕೂಡ ಓದಿದ್ದಾರೆ. ಮತ್ತೊಬ್ಬರು ನಿನ್ನಂಥ ಸಂಗಾತಿ ನನಗೆ ಬೇಕು, ನೀನು ಬೇಕೇ ಬೇಕು ಎಂದು ಕಾಮೆಂಟ್ ಬರೆದಿದ್ದಾರೆ, ಅದಕ್ಕೆ ಫ್ರೆಂಡ್ ಉತ್ತರ ಕೊಡೋಕೆ ಬಿಡದ ನಿವೇದಿತಾ, ಇವಳು ನನ್ನ ಪಾರ್ಟ್ನರ್ ಇವಳನ್ನ ನನ್ನಿಂದ ಯಾರು ಕೂಡ ಕದಿಯೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಉತ್ತರ ಕೇಳಿದ ನೆಟ್ಟಿಗರು, ಏನಪ್ಪಾ ನಿವೇದಿತಾ ಗೌಡ ಅವರಿಗೆ ಅಷ್ಟು ಬೇಗ ಹೊಸ ಪಾರ್ಟ್ನರ್ ಸಿಕ್ಕಿಬಿಟ್ರ, ಆ ಹೊಸ ಪಾರ್ಟ್ನರ್ ಹುಡುಗಿನಾ ಎಂದು ಮತ್ತೊಂದು ಹೊಸ ಚರ್ಚೆ ಶುರು ಮಾಡಿದ್ದಾರೆ. ಒಟ್ಟಿನಲ್ಲಿ ಇವರುಗಳು ಏನೇ ಮಾಡಿದರು ಕೂಡ ನೆಟ್ಟಿಗರು ಇವರ ಬಗ್ಗೆ ಮಾತನಾಡೋದನ್ನ ನಿಲ್ಲಿಸೋದಿಲ್ಲ. ಇವರುಗಳು ಈ ರೀತಿ ಡ್ಯಾನ್ಸ್ ಮಾಡುವ ವಿಡಿಯೋ ಹಾಕೋದನ್ನ ಬಿಡೋದಿಲ್ಲ.
ಇನ್ನು ನಿವೇದಿತಾ ಗೌಡ ಬಿಗ್ ಬಾಸ್ ಇಂದ ತಕ್ಕಮಟ್ಟಿಗೆ ಫೇಮಸ್ ಆದರೂ ಸಹ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು, ಎಲ್ಲರ ಬಾಯಲ್ಲಿ ಅವರ ಹೆಸರು ಬರೋದಕ್ಕೆ ಶುರುವಾಗಿದ್ದು ಚಂದನ್ ಶೆಟ್ಟಿ ಅವರೊಡನೆ ಮದುವೆಯಾದ ಬಳಿಕ. ಇವರಿಬ್ಬರು ಬಿಗ್ ಬಾಸ್ ನಲ್ಲಿ ಪರಿಚಿತರಾಗಿ, ಫ್ರೆಂಡ್ಶಿಪ್ ಶುರುವಾಗಿ, ಲವ್ ಆಗಿ, ಕೊನೆಗೆ ಮದುವೆಯಾದರು. ಮದುವೆ ನಂತರ ಚೆನ್ನಾಗಿಯೇ ಇದ್ದ ಜೋಡಿಗೆ ಇದ್ದಕ್ಕಿದ್ದಂತೆ ಏನಾಯ್ತು ಗೊತ್ತಿಲ್ಲ, ಕಳೆದ ವರ್ಷ ಇಬ್ಬರೂ ಜೊತೆಯಾಗೆ ಕೋರ್ಟ್ ಗೆ ಬಂದು ವಿಚ್ಛೇದನ ಪಡೆದರು. ಇಬ್ಬರು ದೂರವಾದ ನಂತರ ನಿವೇದಿತಾ ಗಡ ಮೊದಲಿಗಿಂತಲು ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಇವರು ಏನೇ ಪೋಸ್ಟ್ ಮಾಡಿದರು ನೆಗಟಿವ್ ಕಾಮೆಂಟ್ ಗಳು ಬರುತ್ತಲೇ ಇರುತ್ತವೆ. ಇದೇ ಮೊದಲ ಸಾರಿ ಅದೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ ನಿವೇದಿತಾ ಗೌಡ.