ಹಣೆ ಬರಹ ಹಾಗೂ ಲಕ್ ಎಂಬುವ ವಿಚಾರ ಎಷ್ಟರ ಮಟ್ಟಿಗೆ ಸತ್ಯ ಎಂದು ನಂಬಲು ನಮ್ಮಲ್ಲಿ ಸಾಕಷ್ಟು ಉಧಾಹರಣೆಗಳಿವೆ.ಇನ್ನು ಈ ವಿಚಾರದಲ್ಲಿ ಬಹಳ ಪ್ರಸಿದ್ದಿ ಪಡೆದಿರುವ ವ್ಯಕ್ತಿ ಎಂದರೆ ಅದು “ನಿವೇದಿತಾ ಗೌಡ”. ಈಕೆ ತನ್ನ ಬೆಳವಣಿಗೆಯ ಗ್ರಾಫ್ ನೋಡುತ್ತಿದ್ದಂತೆ ಎಲ್ಲರಲ್ಲೂ ಅಚ್ಚರಿಯ ಜೊತೆಗೆ ಖುಷಿ ಕೂಡ ಆಗುತ್ತದೆ.ಮೈಸೂರಿನಲ್ಲಿ ಒಂದು ಮೂಲೆಯಲ್ಲಿ ಸಾಮಾನ್ಯ ಹೆಣ್ಣುಮಗುವಾಗಿ ರೀಲ್ಸ್ ಮಾಡುತ್ತಿದ್ದ ಒಬ್ಬ ಹುಡುಗಿ. ತನ್ನ ವಿಭಿನ್ನತೆಯ ಮೂಲಕ ಬಿಗ್ ಬಾಸ್ ಸೀಸನ್ 5 ಪ್ರವೇಶ ಪಡೆದುಕೊಳ್ಳುತ್ತಾರೆ.

ತನಗೆ ಸಿಕ್ಕ ಅವಕಾಶವನ್ನು ದುಪಾಟ್ಟಾಗಿಯೇ ಬಳಸಿಕೊಂಡು ಇದೀಗ ಕಲರ್ಸ್ ಕನ್ನಡದ ಕಾಣ್ತಿನ್ಯೂಟಿ ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 5ರ ಮುಕಾಂತರ ಜನರಿಗೆ ಪರಿಚಯಿಸಿಕೊಂಡು ತನ್ನ ಮನೋರಂಜನೆಯ ಮೂಲಕ ಎಲ್ಲರನ್ನು ರಂಜಿಸುತ್ತ ಸೀಸನ್ 5ರ ಫೈನಾಲೆಯಲ್ಲಿ ಟಾಪ್ 5 ಸ್ಪರ್ದಿಗಳಾಗಿದ್ದರು. ಆ ನಂತರ ಬಿಗ್ ಬಾಸ್ ನ ತನ್ನ ಪ್ರತಿ ಸ್ಪರ್ದಿ ಹಾಗೂ ಸ್ನೇಹಿತನಾಗಿದ್ದ “ಚಂದನ್ ಶೆಟ್ಟಿ” ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಆದರೆ ಚಂದನ್ ಅವರನ್ನು ಮದುವೆಯಾದ ನಂತರ ಇವರ ಜೀವನದಲ್ಲಿ ಕೊಂಚ ಏರು ಪೇರು ಶುರುವಾಯಿತು. ಈ ಜೋಡಿಯ ಮೇಲೆ ಕೊಂಕು ನುಡಿಯುವವರೆ ಅಂದಿನಿಂದ ಇಂದಿನ ವೆರೆಗೂ ಹೆಚ್ಚಾಗಿದ್ದಾರೆ.ಆ ನಂತರ “ರಾಜ ರಾಣಿ”ಯಲ್ಲೂ ಕೊಡ ಟಾಪ್ 3 ಸ್ಥಾನವನ್ನು ಪಡೆದರು.ಅದಾದ ಬಳಿಕ “ಗಿಚ್ಚಿ ಗಿಲಿ ಗಿಲಿ” ಯಲ್ಲಿಯೂ ಕೊಡ ರನ್ನರ್ ಆಗಿ ಗುರುತಿಸಿಕೊಂಳ್ಳುತ್ತಿದ್ದಾರೆ.ಈ ಕಾರ್ಯಕ್ರಮ ಆದ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡು ಸೋಲೊ ವಿದೇಶ ಪ್ರಯಾಣ ಕೈಗೊಂಡಿದ್ದರು ನಿವೇದಿತಾ.
ಇನ್ನು ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದ ಸುಂದರ ಕ್ಷಣಗಳ ಪೋಟಿಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಿವೇದಿತಾ ಅವರಿಗೆ ದೊಡ್ಡ ಪ್ರಮಾಣದ ಲೈಕ್ಸ್ ಬಂದಿತ್ತು.ಅದರೊಟ್ಟಿಗೆ ಟೀಕೆಗಳು ಕಮೆಂಟ್ಸ್ ಕೊಡ ಬಂದಿವೆ.ಇಷ್ಟು ವರ್ಷಗಳಿಂದ ಸುಮ್ಮನಿದ್ದ ನಿವೇದಿತಾ ಇದೀಗ ಅಂತವರಿಗೆಲ್ಲ ತಿರುಗೇಟು ನೀಡಿದ್ದಾರೆ.ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖಡಕ್ ಆಗಿ ಬರೆದುಕೊಂಡು ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ನಿವೇದಿತಾ ಅವರ ಫೋಟೋಗಳಿಗೆ ‘ಫೋಟೋ ತೆಗೆದವರು ಯಾರು ಹಾಗೂ ಚಂದನ್ ಶೆಟ್ಟಿ ಹಣ ದಲ್ಲಿ ಮಜಾ ಮಾಡ್ತಿದ್ಯಲ್ಲ’ ಎಂದೆಲ್ಲ ಕಾಮೆಂಟ್ ಮಾಡಲಾಗಿತ್ತು.”ಅಂತವರಿಗೆ ನಿವೇದಿತಾ ನಾನು ಎಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಆದರೆ ತಿಳಿಯದೆ ಇರುವವರಿಗೆ ತಿಳಿಸಿಕೊಡಬೇಕಿದೆ. ಇಂಥಾ ವಿದೇಶ ಪ್ರವಾಸಗಳಲ್ಲಿ ಫೋಟೋಗ್ರಾಫೇರ್ ಇರುತ್ತಾರೆ. ತನ್ನ ಖರ್ಚು ವ್ಯಚ್ಚವನ್ನು ನೋಡಿಕೂಳ್ಳುವ ಸಾಮರ್ಥ್ಯ ಎಲ್ಲಾ ಹೆಣ್ಣು ಮಕ್ಕಳಿಗೂ ಇರುತ್ತದೆ. ನಾನು ಚಂದನ್ ಅವರ ದುಡ್ಡು ಖರ್ಚು ಮಾಡಿದ್ರೆ ನಿಮಗೆ ಯಾವ ನಷ್ಟ ಇದೆ ಹೇಳಿ” ಎಂದು ಬರೆದುಕೊಂಡಿದ್ದಾರೆ.