ಸೋಷಿಯಲ್ ಮೀಡಿಯಾದಲ್ಲಿ ಈಗ ತಮ್ಮ ಕಾಂಟೆಂಟ್ ಗಳ ಮೂಲಕ ಫೇಮಸ್ ಆಗುವ ಸಾಕಷ್ಟು ಜನರಿದ್ದಾರೆ. ಕಾಮಿಡಿ ವಿಡಿಯೋಗಳು, ತಮ್ಮ ದಿನನಿತ್ಯ ಜೀವನದಲ್ಲಿ ನಡೆಯುವ ಘಟನೆಗಳು ಇದೆಲ್ಲವನ್ನು ಪೋಸ್ಟ್ ಮಾಡಿಕೊಂಡು ಬಹಳಷ್ಟು ಜನರು ವೈರಲ್ ಆಗುತ್ತಾರೆ. ಅಂಥ ಕೇಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದೇ ಹೆಚ್ಚು. ಮಂಜಣ್ಣ, ರೇಶ್ಮಾ ಆಂಟಿ, ದೀಪು ಹೀಗೆ ಸಾಕಷ್ಟು ಜನರು ಇದೆ ರೀತಿ ವೈರಲ್ ಆದವರೆ. ಇನ್ನು ರೇಶ್ಮಾ ಆಂಟಿ ಈ ರೀತಿ ಟ್ರೋಲ್ ಆಗಿ, ವೈರಲ್ ಆದ ನಂತರವೇ ಅವರಿಗೆ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಭಾಗವಹಿಸುವ ಅವಕಾಶ ಕೂಡ ಸಿಕ್ಕಿತು. ಇದೇ ಸಾಲಿಗೆ ಸೇರುವುದು ಕಿಪಿ ಕೀರ್ತಿ. ಹಲೋ ಜನರೆ, ಬನ್ನಿ ಜನರೇ ಎಂದು ಹೇಳುತ್ತಲೇ ಟ್ರೋಲ್ ಆಗಿ, ಫೇಮಸ್ ಅದವರು ಕಿಪಿ ಕೀರ್ತಿ.
ಒಂದು ಹಳ್ಳಿಯಲ್ಲಿದ್ದ ಕಿಪಿ ಕೀರ್ತಿ ತನ್ನ ದಿನ ನಿತ್ಯ ಜೀವನದಲ್ಲಿ ನಡೆಯುವ ಘಟನೆಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಡೇಟ್ ಮಾಡುತ್ತಿದ್ದಳು. ಮಾತು ಮಾತಿಗೂ ಹಲೋ ಜನರೇ, ಹೇಳಿ ಜನರೇ, ಯಾಕೆ ಜನರೇ ಎಂದು ಹೇಳುತ್ತ, ಜನರೇ ಎನ್ನುವ ಶಬ್ದವನ್ನು ಜಾಸ್ತಿ ಬಳಕೆ ಮಾಡುತ್ತಿದ್ದಳು. ಈ ಡೈಲಾಗ್ ಇಂದಲೇ ಕಿಪಿ ಕೀರ್ತಿ ಹೆಚ್ಚು ಫೇಮಸ್ ಸಹ ಆಗಿದ್ದು. ಎಲ್ಲೋ ಕೂತು ವಿಡಿಯೋ ಮಾಡುತ್ತಿದ್ದ ಕಿಪಿ ಕೀರ್ತಿಗೆ, ಫಾಲೋವರ್ಸ್ ಹೆಚ್ಚಾಗುತ್ತಿದ್ದ ಹಾಗೆ, ಹಲವು ಅವಕಾಶಗಳು ಬರುವುದಕ್ಕೆ ಶುರುವಾಯಿತು. ಪ್ರೊಮೋಷನ್, ಕೋಲ್ಯಾಬೊರೇಷನ್ ಇವುಗಳನ್ನು ಮಾಡುವುದಕ್ಕೆ ಕೂಡ ಮುಂದಾದರು ಕಿಪಿ ಕೀರ್ತಿ. ಇದೆಲ್ಲವೂ ಈ ಹುಡುಗಿಗೆ ಒಳ್ಳೆಯ ಜನಪ್ರಿಯತೆಯನ್ನೇ ತಂದುಕೊಟ್ಟಿತು.

ಈ ರೀತಿ ವೈರಲ್ ಆದ ಕಿಪಿ ಕೀರ್ತಿಯನ್ನು ಕೆಲವು ಯೂಟ್ಯೂಬ್ ಚಾನೆಲ್ ಗಳು ಕರೆದು, ಸಂದರ್ಶನ ಕೂಡ ಮಾಡಿದರು. ಇದರಿಂದ ಕಿಪಿ ಕೀರ್ತಿ ಇನ್ನು ಜಾಸ್ತಿ ಫೇಮಸ್ ಆದಳು. ತನ್ನ ಕಥೆಯನ್ನು ಜನರ ಜೊತೆಗೆ ಹೇಳಿಕೊಂಡಳು. ಜನರು ಟ್ರೋಲ್ ಮಾಡುತ್ತಲೇ ಇವರಿಗೆ ಸಪೋರ್ಟ್ ಮಾಡಿದರು. ಕಿಪಿ ಕೀರ್ತಿಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ. ಇದೆಲ್ಲವೂ ಇದ್ದ ಕಿಪಿ ಕೀರ್ತಿ, ಒಂದೆರಡು ತಿಂಗಳ ಹಿಂದೆ ತಾವು ಲವ್ ಮಾಡುತ್ತಿರುವ ವಿಷಯವನ್ನ ಸಹ ಹೇಳಿಕೊಂಡರು. ತಾವು ಇಷ್ಟಪಡುತ್ತಿರುವ ಹುಡುಗ ತುಂಬಾ ಒಳ್ಳೆಯವನು, ತುಂಬಾ ಕೇರ್ ಮಾಡುತ್ತಾನೆ ಎಂದಿದ್ದರು. ಇದನ್ನ ನೋಡಿದ ನೆಟ್ಟಿಗರು, ಕಿಪಿಗೂ ಪಾರ್ಟ್ನರ್ ಸಿಕ್ಕಿಬಿಟ್ಟ ಎಂದಿದ್ದರು.
ಈ ವರ್ಷ ಅವನ ಜೊತೆಯಲ್ಲೇ ಕಿಪಿ ಕೀರ್ತಿ ಪ್ರೇಮಿಗಳ ದಿನವನ್ನು ಕೂಡ ಆಚರಣೆ ಮಾಡಿದ್ದರು. ಆ ವೇಳೆ ನೆಟ್ಟಿಗರು, ಕಿಪಿ ಕೀರ್ತಿ ಕೂಡ ಲವರ್ಸ್ ಡೇ ಆಚರಣೆ ಮಾಡಿದ್ದಾಳೆ ನಾವು ಮಾಡೋಕಾಗಿಲ್ಲ ಎಂದು ಟ್ರೋಲ್ ಮಾಡಿದ್ದರು. ಆದರೆ ಕಿಪಿ ಮಾತ್ರ ಬಹಳ ಸಂತೋಷವಾಗಿದ್ದರು. ಕಿಪಿ ಲೈಫ್ ಮೇಲೆ, ಅವರ ಪ್ರೀತಿ ಮೇಲೆ ಯಾರ ದೃಷ್ರಿ ಬಿದ್ದಿತೋ ಗೊತ್ತಿಲ್ಲ. ಈಗ ಕಿಪಿ ಕೀರ್ತಿ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಕೆಲವು ವಿಡಿಯೋಗಳು, ಫೋಟೋ ಎಡಿಟ್ ಗಳು ಎಲ್ಲವನ್ನು ಸಹ ಕಿಪಿ ಕೀರ್ತಿ ಪೋಸ್ಟ್ ಮಾಡುತ್ತಾ, ಬ್ರೇಕಪ್ ನೋವನ್ನು ಹಂಚಿಕೊಂಡಿದ್ದಾರೆ.

“ಎಲ್ಲೇ ಇರು ಚೆನ್ನಾಗಿರು ಖುಷಿಯಾಗಿರು ಅಷ್ಟೇ ಯಾವತ್ತೂ ಪ*** ಮುಖ ತೋರ್ಸೋದಿಲ್ಲ ನೀನು ನನ್ನ ಬಗ್ಗೆ ತಪ್ ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿ ಅಂತ ಅಷ್ಟೇ ಬಯಸೋದು ನನಗೆ ಇನ್ನೇನು ಬೇಡ ನಿನ್ನ ಮರಿಯಕ್ಕೆ ಕಷ್ಟ ಆಗಬಹುದು ಆದರೆ ಮರೆಯೋದಿಲ್ಲ ಇನ್ಮುಂದೆ ನಾನು ಯಾರನ್ನು ಏನು ಮದುವೆನೂ ಆಗಲ್ಲ ಇದು ಪ್ರೀತಿ ಮೇಲೆ ಆಣೆ 💯😪💯😭😭😭😭😭😭 ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು ಆದ್ರೆ ನೀನು ನನ್ ಮೇಲೆನೆ ಅನುಮಾನ ಕೊಟ್ಟುಬಿಟ್ಟೆ 💯😪🙏..” ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಿಪಿ ಕೀರ್ತಿ ಪೋಸ್ಟ್ ಮಾಡಿಕೊಂಡಿದ್ದು, ಅವರ ಫಾಲೋವರ್ಸ್ ಸಪೋರ್ಟ್ ಮಾಡುತ್ತಿದ್ದಾರೆ.
ನೆಟ್ಟಿಗರು ಕಿಪಿ ಕೀರ್ತಿಗೆ ಬ್ರೇಕಪ್ ಆಗಿರೋದಕ್ಕೆ ಕಾಮೆಂಟ್ಸ್ ಗಳ ಮೂಲಕ ಸಮಾಧಾನ ಮಾಡಿದ್ದಾರೆ. ಈ ರೀತಿ ಅಳುತ್ತಾ ಕೂತರೆ, ಯೂಟ್ಯೂಬ್ ಚಾನೆಲ್ ಗಳಿಗೆ ಹೋಗಿ ಇಂಟರ್ವ್ಯೂ ಕೊಡುತ್ತಾ ಇದ್ದರೆ, ಜನರು ನಿನ್ನ ಲೈಫ್, ನಿನ್ನ ಕಷ್ಟಗಳನ್ನು ಬಳಸಿಕೊಂಡು ಅವರು ದುಡ್ಡು ಮಾಡಿಕೊಳ್ಳುತ್ತಾರೆ. ನೀನು ಹೀಗೆ ಕಣ್ಣೀರು ಹಾಕೊಂಡು ಇರ್ತಿಯಾ, ನೀನು ಸ್ಟ್ರಾಂಗ್ ಆಗಿರಬೇಕು ಕಿಪಿ ಎಂದು ನೆಟ್ಟಿಗರು ಕಿಪಿ ಕೀರ್ತಿಗೆ ಒಳ್ಳೆಯ ಸಲಹೆಗಳನ್ನು ಜನರು ನೀಡುತ್ತಿದ್ದಾರೆ. ಇವರ ಪೋಸ್ಟ್ ನಲ್ಲಿ ಹೀಗೆಲ್ಲಾ ಕಿಪಿ ಕೀರ್ತಿಗೆ ಸಮಾಧಾನ ಮಾಡಿದ್ದಾರೆ ಎಂದು ತಿಳಿಯೋಣ.. “ಜಾಸ್ತಿ ತಲೆ ಕೆಡ್ಸ್ಕೊಳಕ್ ಹೋಗ್ಬೇಡ ಕಿಪ್ಪಿ ಇಲ್ಲಿ ಯಾರು ಆಗಲ್ಲ”.
“ಕಿಪ್ಪಿನ ಹೇಳುತ್ತಿದ್ದೇನೆ ಕೇಳು ಯಾವುದೇ ಕಾರಣಕ್ಕೂ ಕೆಟ್ಟ ನಿರ್ಧಾರ ತಗೋಬೇಡ ಹೋದ್ರೆ ಹೋಗ್ತಾನೆ ಬಿಡು ಅವನನ್ನು ನೋಡಿ ಹೊಟ್ಟೆ ಉರ್ಕೋಬೇಕು ಆತರ ಬೆಳಿ ನೀನು ನಿನ್ನ ಬುದ್ಧಿ ನಿನ್ನ ಕಲ್ತುಕೊಂಡಿರು ಯಾರನ್ನು ನಂಬಬೇಡ ನನಗನ್ಸಿದ್ನ ಹೇಳಿದೀನಿ ಕಿಪ್ಪಿ”
“ಯಾಕೆ ಕಿಪ್ಪಿ ಇದೆಲ್ಲಾ ಓದು ಚೆನ್ನಾಗಿ ಕೆಲಸ ಮಾಡು ದುಡ್ಡು ಮಾಡು ಜಗತ್ತಿನಲ್ಲಿ ದುಡ್ಡೇ ದೊಡ್ಡಪ್ಪ… ಮತ್ತೆ ನಿನ್ನ ಇಟ್ಕೊಂಡು ಕೆಲಸಕ್ಕೆ ಬಾರದೇ ಯೂಟ್ಯೂಬ್ ಚಾನೆಲ್ ಅವರು ನಿನ್ನಿಂದ ದುಡ್ಡು ಮಾಡಿಕೊಂಡು ಅವರು ಜಾಲಿಯಾಗಿ ಇರುತ್ತಾರೆ ಇದೆಲ್ಲಾ ಬಿಟ್ಟು ದುಡ್ಡು ಮಾಡಿ ನಿನ್ನ ತಾಯಿಗೆ ಚೆನ್ನಾಗಿ ನೋಡಿಕೋ….”
“ದಯವಿಟ್ಟು ಈ ತಪ್ಪು ಯಾರು ಮಾಡಬೇಡಿ ಪ್ಲೀಸ್ ಪ್ರೀತಿ ಹೆಸರು ಹೇಳಿಕೊಂಡು ಇನ್ನೊಬ್ಬರ ಲೈಫ್ ಅಲ್ಲಿ ಆಟ ಆಡಬೇಡಿ..”
“ನೋಡಿ ಇದೆಲ್ಲ ನಾಟಕ ನಿಂಗೆ ಅರ್ಥ ಆಗಲ್ವಾ ನಿನ್ ಆರಾಮಾಗಿ ಅಷ್ಟೇ ನಿಮ್ ಅಮ್ಮ ನಾ ಚೆನ್ನಾಗಿ ನೋಡ್ಕೋಳಿ..”
“ಮುಂದೆ ಯಾರನ್ನು ನಂಬಿ ಮೋಸ ಹೋಗ್ಬೇಡ ಇದೊಂದು ಜೀವನದ ಪಾಠ ಅಂತ ತಿಳ್ಕೊ ಇವನಿಗಿಂತ ಒಳ್ಳೆ ಮನಸ್ಸೂ ಹೂಡ್ಗ ಸಿಕ್ತನೆ..” ಎಂದು ಹೇಳೋ ಮೂಲಕ ನೆಟ್ಟಿಗರು ಕಿಪಿ ಕೀರ್ತಿಗೆ ಸಮಾಧಾನ ಮಾಡಿದ್ದಾರೆ



