ಜೀಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿರುವ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ. ಇದು ದೆವ್ವದ ಧಾರಾವಾಹಿ ಆಗಿದೆ. ಕನ್ನಡ ಕಿರುತೆರೆಯಲ್ಲಿ ಹಾರರ್ ಧಾರಾವಾಹಿ ಶುರುವಾಗಿ ಬಹಳಷ್ಟು ಸಮಯ ಆಗಿತ್ತು. ದೆವ್ವದ ಕಥೆಗಳು ಒಂದು ರೀತಿ ತುಂಬಾ ಆಸಕ್ತಿದಾಯಕ ಅನ್ನಿಸುತ್ತದೆ. ನಾ ನಿನ್ನ ಬಿಡಲಾರೆ ಕೂಡ ಅದೇ ರೀತಿ. ಇದು ಒಂದು ರೀತಿಯ ವಿಭಿನ್ನ ಕಥೆ. ಇಲ್ಲಿ ದೆವ್ವ ಆಗಿರುವುದು ವಿಲ್ಲನ್, ಬದಲಾಗಿ ಕಥೆಯ ನಾಯಕಿಯೇ ದೆವ್ವವಾಗಿ, ವಿಲ್ಲನ್ ಗಳಿಂದ ತನ್ನ ಮಗುವನ್ನು ಕಾಪಾಡಿಕೊಳ್ಳುವ ಕಥೆ ಇದು. ನಾ ನಿನ್ನ ಬಿಡಲಾರೆ ಧಾರಾವಾಹಿ ತಾಯಿಯ ಈ ಪಾತ್ರದ ಮೂಲಕ ಜನರಿಗೆ ತುಂಬಾ ಇಷ್ಟವಾಗಿದೆ. ಬಹಳ ಕಡಿಮೆ ಸಮಯದಲ್ಲಿ ಜನರ ಗಮನವನ್ನು ಸೆಳೆದಿದೆ. ಈ ಧಾರಾವಾಹಿಯಲ್ಲಿ ತಾಯಿ ಪಾತ್ರದಲ್ಲಿ ನಟಿಸುತ್ತಿರುವವರು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಟಿ ನೀತು ಅಶೋಕ್. ಇವರು ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ಗೊತ್ತಾ?

ನಟಿ ನೀತು ಅಶೋಕ್ ಅವರಿಗೆ ಕನ್ನಡ ಕಿರುತೆರೆ ಹೊಸದೇನೂ ಇಲ್ಲ. ಈ ಮೊದಲೇ ಒಂದೆರಡು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನೀತು ನಟಿಸಿದ್ದಾರೆ. ನಮ್ಮಮ್ಮ ಶಾರದೆ ಧಾರಾವಾಹಿ ಇವರಿಗೆ ಒಳ್ಳೆಯ ಜನಪ್ರಿಯತೆ ಮತ್ತು ಹೆಸರು ಎರಡನ್ನು ತಂದುಕೊಟ್ಟಿತ್ತು. ಈ ಧಾರಾವಾಹಿ ನಂತರ ನೀತು ಅಶೋಕ್ ಅವರು ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದರು. ನಿರೂಪ್ ಭಂಡಾರಿ ಅವರ ಜೋಡಿಯಾಗಿ ನಟಿಸಿದ್ದರು ನೀತು. ಈ ಪಾತ್ರ ಕೂಡ ಇವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು. ಸಿನಿಮಾ ಪ್ರೊಮೋಷನ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು, ಎಲ್ಲಾ ಭಾಷೆಗಳಲ್ಲಿ ಸಹ ಇವರಿಗೆ ಒಳ್ಳೆಯ ಹೆಸರು ಸಿಕ್ಕಿತ್ತು.

ವಿಕ್ರಾಂತ್ ರೋಣ ನಂತರ ಒಂದು ಬಿಗ್ ಗ್ಯಾಪ್ ಪಡೆದ ನೀತು ಅಶೋಕ್ ಅವರು ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿರುವುದು ನಾ ನಿನ್ನ ಬಿಡಲಾರೆ ಧಾರಾವಾಹಿ ಮೂಲಕ. ಈ ಧಾರಾವಾಹಿಯಲ್ಲಿ ನೀತು ಅಶೋಕ್ ಅವರು ನಟಿಸುತ್ತಿರುವುದು ದೆವ್ವ ಆಗಿರುವ ಅಂಬಿಕಾ ಪಾತ್ರದಲ್ಲಿ. ಈ ಪಾತ್ರ ಜನರಿಗೆ ಬಹಳ ಕಡಿಮೆ ಸಮಯದಲ್ಲೇ ತುಂಬಾ ಇಷ್ಟವಾಗಿದೆ. ತನ್ನ ಮಗಳನ್ನು ಉಳಿಸಿಕೊಳ್ಳಲು ಆತ್ಮವಾಗಿ ಹೋರಾಡುತ್ತಿರುವ ತಾಯಿಯ ಪಾತ್ರವಿದು. ತಾಯಿಯ ಪಾತ್ರ ಅಂದ್ರೆ ಹಾಗೆ ಜನರಿಗೆ ತುಂಬಾ ಬೇಗ ಕನೆಕ್ಟ್ ಆಗುತ್ತದೆ. ಅಂಬಿಕಾ ಪಾತ್ರ ಕೂಡ ಅದೇ ರೀತಿ ಆಗಿದೆ. ಮನೆಯಲ್ಲಿರುವ ಹಿತಶತ್ರುಗಳ ಮೋಸದ ಜಾಲಕ್ಕೆ ಸಿಲುಕಿ, ಅಂಬಿಕಾ ಪಾತ್ರ ಪ್ರಾಣ ಕಳೆದುಕೊಂಡಿರುತ್ತದೆ. ಮನೆಯವರ ಸತ್ಯ ಗೊತ್ತಿರುವ ಅಂಬಿಕಾಗೇ ಮಗಳನ್ನು ಅವರೆಲ್ಲರಿಂದ ಉಳಿಸಿಕೊಳ್ಳುವುದು ಅಂಬಿಕಾ ಮುಂದಿರುವ ಸವಾಲು.
ಆತ್ಮವಾಗಿ ಅಲೆದಾಡುತ್ತಿರುವ ಈ ಪಾತ್ರ ಮಗುವಿನ ಸುರಕ್ಷತೆಗಾಗಿ ಪಡುತ್ತಿರುವ ಪಾಡು, ಈ ಪಾತ್ರಕ್ಕೆ ಒಳ್ಳೆಯದಾಗಲಿ ಎಂದು ಹೇಳುವ ಹಾಗೆ ಮಾಡಿದೆ. ಇನ್ನು ಸಾಮಾನ್ಯವಾಗಿ ದೆವ್ವ ಅಂದ್ರೆ ನೆಗಟಿವ್, ವಿಲ್ಲನ್ ಪಾತ್ರ ಎಂದು ತೋರಿಸುವುದರ ನಡುವೆ, ನಾ ನಿನ್ನ ಬಿಡಲಾರೆ ಧಾರಾವಾಹಿಯ ಅಂಬಿಕಾ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ. ದೆವ್ವವೇ ಆಗಿದ್ದದೂ, ಆಕೆ ಬದುಕಿದ್ದಾಗ ಆಗಿರುವ ಅನ್ಯಾಯ, ಈಗ ಮಗಳಿಗಾಗಿ ಪಡುತ್ತಿರುವ ಕಷ್ಟಗಳು, ಮಾಡುತ್ತಿರುವ ತ್ಯಾಗಗಳು ಇದೆಲ್ಲವೂ ನೀತು ಅಶೋಕ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಅವರ ಆಕ್ಟಿಂಗ್ ಅನ್ನು ಕೂಡ ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಒಂದು ಬ್ರೇಕ್ ಪಡೆದು ನಟನೆಗೆ ಕಂಬ್ಯಾಕ್ ಮಾಡಿರುವ ನೀತು ಅವರು ಮತ್ತೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಧಾರವಾಹಿ ಅವರಿಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ.

ಇನ್ನು ನಾ ನಿನ್ನ ಬಿಡಲಾರೆ ಧಾರಾವಾಹಿ ಬಹಳ ಕಡಿಮೆ ಸಮಯದಲ್ಲೇ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಜನರಿಗೆ ತುಂಬಾ ಇಷ್ಟವಾಗಿದ್ದು, ಟಿಆರ್ಪಿ ಯಲ್ಲಿ ಉತ್ತಮವಾಗಿ ರೇಟಿಂಗ್ ಬರುತ್ತಿತ್ತು. ಆದರೆ ಕಳೆದ ವಾರ, ಇಡೀ ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ ಹೊಸ ಧಾರಾವಾಹಿ. ಕಳೆದ ವಾರ ಮೂರು ಧಾರಾವಾಹಿಗಳು ಕರ್ನಾಟಕದ ನಂಬರ್ 1 ಧಾರಾವಾಹಿ ಆಗಿ ಹೊರಹೊಮ್ಮಿದೆ. ಅವು ಅಣ್ಣಯ್ಯ, ಶ್ರಾವಣಿ ಸುಬ್ರಹ್ಮಣ್ಯ ಮತ್ತು ನಾ ನಿನ್ನ ಬಿಡಲಾರೆ. ಇನ್ನೆರಡು ಧಾರಾವಾಹಿಗಳು ಶುರುವಾಗಿ ಸ್ವಲ್ಪ ಸಮಯ ಕಳೆದು ಜನರಿಗೆ ಪರಿಚಯವಾಗಿರುವ ಧಾರಾವಾಹಿಗಳು. ಆದರೆ ನಾ ನಿನ್ನ ಬಿಡಲಾರೆ ಧಾರಾವಾಹಿ ಆ ರೀತಿ ಅಲ್ಲ. ಇದು ಇತ್ತೀಚೆಗೆ ಶುರುವಾಗಿರುವ ಹೊಸ ಧಾರಾವಾಹಿ. ಇಷ್ಟು ಬೇಗ ಮೊದಲ ಸ್ಥಾನಕ್ಕೆ ಬಂದಿರುವುದು ಸಂತೋಷದ ವಿಚಾರವೇ.

ಇಷ್ಟು ಬೇಗ ಒಂದು ಧಾರಾವಾಹಿ ಜನಪ್ರಿಯತೆ ಗಳಿಸಿಕೊಂಡಿದೆ ಅಂದರೆ ಆ ಧಾರಾವಾಹಿಯ ಕಥೆ ಮತ್ತು ಪಾತ್ರಧಾರಿಗಳ ಅಭಿನಯ ಬಹಳ ಮುಖ್ಯವಾಗುತ್ತದೆ. ಇದರಲ್ಲಿ ನೀತು ಅಶೋಕ್ ಅವರು ಗೆಲ್ಲುತ್ತಾರೆ. ಇನ್ನು ನೀತು ಅವರು ನಟನೆ ಶುರು ಮಾಡಿದ್ದು ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ಅಶೋಕ್ ಕಶ್ಯಪ್ ಅವರ ಗರಡಿಯಲ್ಲಿ, ಅವರು ಮಗಳೇ ಇವರು. ಹಾಗಾಗಿ ಅವರ ಅಭಿನಯ ಅಷ್ಟು ಅಚ್ಚುಕಟ್ಟಾಗಿ ಮೂಡಿಬರುತ್ತಿದೆ. ಧಾರಾವಾಹಿಯಲ್ಲಿ ಈ ರೀತಿಯ ಪಾತ್ರ ನಿರ್ವಹಿಸುತ್ತಿರುವ ನೀತು ಅಶೋಕ್ ಅವರು ನಿಜ ಜೀವನದಲ್ಲಿ ಬಹಳ ರೋಮ್ಯಾಂಟಿಕ್ ಕಣ್ರೀ. ಇತ್ತೀಚೆಗೆ ಅಂದರೆ 2023ರಲ್ಲಿ ನೀತು ಅಶೋಕ್ ಅವರ ಮದುವೆ ನಡೆಯಿತು. ಮದುವೆ ವೇಳೆ ಅದ್ಭುತವಾಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗಳನ್ನು ಸಹ ಮಾಡಿಸಿಕೊಂಡಿದ್ದರು.
ಇನ್ನು ಮದುವೆಯಾದ ನಂತರ ಗಂಡನ ಜೊತೆಯಲ್ಲಿ ಸಂತೋಷವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇಬ್ಬರು ಹೊರದೇಶಕ್ಕೆ ಟ್ರಿಪ್ ಗೆ ಹೋಗುವುದು, ಅಲ್ಲಿ ರೋಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸುವುದು, ಒಬ್ಬರನ್ನೊಬ್ಬರು ಸರ್ಪ್ರೈಸ್ ಮಾಡುವುದು ಇದೆಲ್ಲವನ್ನು ಮಾಡುತ್ತಾರೆ ನೀತು. ಇದರ ಫೋಟೋಸ್ ಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇವರ ರಿಯಲ್ ಲೈಫ್ ಫೋಟೋಸ್ ನೋಡಿ, ನಿಜ ಜೀವನದಲ್ಲಿ ನೀತು ತುಂಬಾ ರೋಮ್ಯಾಂಟಿಕ್ ಎಂದು ಎಲ್ಲರಿಗೂ ಅನ್ನಿಸಿದೆ. ಈ ರಿಯಲ್ ಲೈಫ್ ನ ಸುಂದರವಾದ ಜೋಡಿಯ ಫೋಟೋಸ್ ಗಳನ್ನು ನೀವು ಸಹ ನೋಡಿ, ನೀತು ಅವರ ಫ್ಯಾನ್ಸ್ ಆಗೋದು ಅಂತೂ ಗ್ಯಾರೆಂಟಿ.