ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜನರು ಈ ಜೋಡಿಯನ್ನು ನೋಡಿ ಸಿಟ್ಟಿಗೆದ್ದಿದ್ದಾರೆ. ಇದರಲ್ಲಿ, ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಸಾರ್ವಜನಿಕವಾಗಿ ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ ಆ ಹುಡುಗಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಜೋಡಿಯ ಈ ರೋಮ್ಯಾನ್ಸ್ ನೋಡಿ ಇತರ ಪ್ರಯಾಣಿಕರಿಗೂ ಮುಜುಗರವಾಗಿರುವುದು ವಿಡಿಯೋದಲ್ಲಿ ಕಾಣಬಹುದು.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪ್ರಯಾಣಿಕರು ಮೆಟ್ರೋ ಬರುವವರೆಗೆ ಪ್ಲಾಟ್ಫಾರ್ಮ್ನಲ್ಲಿ ನಿಂತು ಕಾಯುತ್ತಿರುವುದನ್ನು ಕಾಣಬಹುದು, ಆದರೆ ಯುವಕನೊಬ್ಬ ತನ್ನ ಗೆಳತಿಯ ಬಟ್ಟೆಯೊಳಗೆ ಕೈ ಹಾಕಿ ಅಶ್ಲೀಲ ಕೃತ್ಯ ಎಸಗುತ್ತಿದ್ದಾನೆ. ಆಶ್ಚರ್ಯಕರ ಸಂಗತಿಯೆಂದರೆ ಆ ಹುಡುಗಿ ಕೂಡ ಅವನನ್ನು ಹಾಗೆ ಮಾಡುವುದನ್ನು ತಡೆಯುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಮಿತಿ ಮೀರುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಮತ್ತು ಆತಂಕಕಾರಿ ವಿಷಯವಾಗಿದೆ. ಮೆಜೆಸ್ಟಿಕ್ ನಲ್ಲಿರುವ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ 3 ರಲ್ಲಿ ನಡೆದ ಈ ಘಟನೆ ಜನರಿಗೆ ಆಘಾತ ಮತ್ತು ಮುಜುಗರ ಉಂಟು ಮಾಡಿದೆ.
Is Bengaluru Heading Towards Delhi metro Culture???
Disturbing Public Behavior at Namma Metro Station Raises Questions About Decency in Bengaluru
It is extremely disappointing and concerning to witness the kind of behavior that some individuals are now displaying in public… pic.twitter.com/4hBAnK1R7p
— Karnataka Portfolio (@karnatakaportf) April 10, 2025
1 ನಿಮಿಷ 25 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಅನ್ನು @karnatakaportf ಖಾತೆಯ ಬಳಕೆದಾರರು ಸಾಮಾಜಿಕ ತಾಣ X ನಲ್ಲಿ ಹಂಚಿಕೊಂಡಿದ್ದು, ಹೀಗೆ ಬರೆದಿದ್ದಾರೆ “ ಇದು ಸ್ವಾತಂತ್ರ್ಯವೂ ಅಲ್ಲ ಅಥವಾ ಧೈರ್ಯವೂ ಅಲ್ಲ. ಇದು ಕೇವಲ ನಿರ್ಲಕ್ಷ್ಯ, ಸಂವೇದನಾಶೀಲತೆ ಮತ್ತು ಸಾಮಾಜಿಕ ಅರಿವಿನ ಕೊರತೆ”. ಇದರೊಂದಿಗೆ, ಅವರು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಜೋಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಜೋಡಿ ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ಇಲ್ಲಿದೆ ನೋಡಿ
ಈ ಪೋಸ್ಟ್ ಅನ್ನು ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕಾಮೆಂಟ್ ವಿಭಾಗವು ಕಾಮೆಂಟ್ಗಳಿಂದ ತುಂಬಿದೆ. ಅನೇಕ ಬಳಕೆದಾರರು ಜೋಡಿಯ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ ಮತ್ತು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಆದರೆ ಬೆಂಗಳೂರು ಪೊಲೀಸರಾಗಲಿ ಅಥವಾ ಬೆಂಗಳೂರು ಮೆಟ್ರೋ ಆಗಲಿ ಈ ವೈರಲ್ ಕ್ಲಿಪ್ ಬಗ್ಗೆ ಇನ್ನೂ ಯಾವುದೇ ಗಮನ ಹರಿಸಿಲ್ಲ. ಆದರೆ ಬಳಕೆದಾರರಲ್ಲಿ ಓರ್ವರು ಮಾತ್ರ ಇವರು ಖಂಡಿತವಾಗಿಯೂ ಹೊರಗಿನವರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು “ಆ ಹುಡುಗಿಯ ವರ್ತನೆಯಿಂದ ನನಗೆ ಆಶ್ಚರ್ಯವಾಯಿತು”., “ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯ ಹಾದಿಯಲ್ಲಿದೆ” ಎಂದು ಕಾಮೆಂಟ್ ಮಾಡಿದ್ದಾರೆ.