ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೂರಾರು ಟೋಲ್ ಗೇಟ್ ಗಳಿವೆ. ವಾಹನ ಸವಾಋಉ ಅವುಗಳನ್ನು ದಾಟುವಾಗ ತೆರಿಗೆ ಕಟ್ಟಬೇಕಿರುವುದು ಕಡ್ಡಾಯ. ಇದನ್ನು ಸುಲಭಗೊಳಿಸಲು ಸರ್ಕಾರ ಪಾಸ್ಟ್ಯಾಗ್ ಜಾರಿಗೊಳಿಸಿದೆ. ಇದರಿಂದಾಗಿ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸವಾರರು ಸುಲಭವಾಗಿ ತೆರಿಗೆ ಕಟ್ಟಿ ಮುಂದುವರೆಯಬಹುದಾಗಿದೆ. ಆದರೆ ಕೆಲವು ಟೋಲ್ ಗಳಲ್ಲಿ ಈ ಪಾಸ್ಟ್ಯಾಗ್ ಮೂಲಕ ಹಣ ಕಬಳಿಸುವ ಹೊಸ ದಂದೆ ಆರಂಭವಾಗಿದೆ!

ಟೋಲ್ ಗೇಟ್ ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಾಸ್ಟ್ಯಾಗ್ ನಿಯಮ ಜಾರಿಗೊಳಿಸಿದೆ. ಇದು ಫ್ರೀಪೇಯ್ಡ್ ಸೌಲಭ್ಯವಾಗಿದ್ದು, ಇದನ್ನು ವಾಹನದ ಮುಂದಿನ ಗಾಜಿಗೆ ಅಂಟಿಸಲಾಗುತ್ತದೆ. ಇದರಿಂದಾಗಿ ಟೋಲ್ ತ್ವರಿತವಾಗಿ ಪಾವತಿಯಾಗುತ್ತದೆ ಮತ್ತು ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪುತ್ತದೆ. ಆದರೆ ಕೆಲವು ಕಡೆ ಇದನ್ನು ದುರುಪಯೋಗ ಪಡಿಸಿಕೊಂಡೊರುವ ಟೋಲ್ ಸಿಬ್ಬಂದಿಗಳು ಪಾಸ್ಟ್ಯಾಗ್ ಮೂಲಕ ಹಣ ಕಬಳಿಸುತ್ತಿದ್ದಾರೆ.
ದೇಶದ ಹಲವು ಕಡೆ ಕೆಲವು ದಿನಗಳಿಂದ ವಾಹನ ಸವಾರರು ನಮ್ಮ ವಾಹನ ಟೋಲ್ ದಾಟದಿದ್ರೂ ಹಣ ಕಟ್ ಆಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಬಗ್ಗೆ ನ್ಯಾಷನಲ್ ರೋಡ್ ಸೇಫ್ಟಿ ಕೌನ್ಸಿಲ್ ಸದಸ್ಯರು ‘ಇಂತಹ ಘಟನೆಗಳು ನಮ್ಮ ಗಮನಕ್ಕೆ ಬಂದಿಲ್ಲ. ಯಾವುದೇ ವಾಹನಗಳಿಗೆ ಟೋಲ್ ಪ್ಲಾಜಾ ದಾಟದಿದ್ರೂ ಹಣ ಕಡಿತವಾದರೆ ಅಂತವರು 24 ಗಂಟೆಯೊಳಗೆ ದೂರು ನೀಡಿ ಹಣ ವಾಪಸ್ ಪಡೆಯಬಹುದು. ಒಂದು ವೇಳೆ ಈ ರೀತಿ ಹಣ ಕಟ್ ಆಗುತ್ತಿದ್ದರೆ ಅದಕ್ಕೆ ತಾಂತ್ರಿಕ ದೋಷ ಕಾರಣವಾಗಿರಬಹುದು’ ಎನ್ನುತ್ತಿದ್ದಾರೆ.