ಸಾಮಾನ್ಯ ಚಾಯಿವಾಲ ಆಗಿದ್ದ ನರೇಂದ್ರ ವಿಶ್ವವೇ ಮೆಚ್ಚುವಂತಹ ಪ್ರಧಾನಿ ನರೇಂದ್ರ ಮೋದಿಯಾಗಿದ್ದು ಇಂದಿಗೆ ಇತಿಹಾಸ. ಸದ್ಯ, ನರೇಂದ್ರ ಮೋದಿ ನಾಯಕತ್ವಕ್ಕೆ ಇಡೀ ವಿಶ್ವವೇ ತಲೆಬಾಗಿದೆ. ದೊಡ್ಡ ದೊಡ್ಡ ದೇಶಗಳು ತಮ್ಮ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಮೋದಿಯವರನ್ನು ಗೌರವಿಸಿದೆ. ಇದೀಗ ನರೇಂದ್ರ ಮೋದಿಯವರ ವಿಶ್ವದ ಅತೀ ಎತ್ತರದ ಪ್ರತಿಮೆಯೊಂದು ಭಾರತದಲ್ಲಿ ತಯಾರಾಗುತ್ತಿದೆ!

ಮಹಾರಾಷ್ಟ್ರದ ಪುಣೆ ಬಳಿ ಇರುವ ಲವಾಸ್ ನಗರದ ಖಾಸಗಿ ಹಿಲ್ ಸ್ಟೇಶನ್ ನಲ್ಲಿ ಮೋದಿಯವರ ಬೃಹತ್ ಪ್ರತಿಮೆ ನಿರ್ಮಾಣವಾಗಲಿದೆ. ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆಗಿಂತ’ ಎತ್ತರವಿರಲಿದೆ. ಇಷ್ಟೇ ಅಲ್ಲದೇ ಇದು ಇಡೀ ವಿಶ್ವದಲ್ಲಿ ಅತೀ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಲಿದೆಯಂತೆ.
ಮೂಲಗಳ ಪ್ರಕಾರ, ಇದು ಸರ್ಕಾರದ ಯೋಜನೆಯಲ್ಲ. ಬದಲಾಗಿ ಖ್ಯಾತ ಕಂಪೆನಿ ಡಾರ್ವಿನ್ ಪ್ಲಾಟ್ ಫಾರ್ಮ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ನ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಏಕತಾ ಪ್ರತಿಮೆ 182 ಮೀ ಎತ್ತರವಿದೆ. ಮೋದಿಯವರ ಪ್ರತಿಮೆ 190-200 ಮೀ ಎತ್ತರ ಇರಲಿದೆ. ಎಂದು ಕಂಪೆನಿ ಮೂಲಗಳು ತಿಳಿಸಿದ್ದು, 2023ರ ಡಿಸೆಂಬರ್ 31 ರಂದು ಈ ಪ್ರತಿಮೆ ಅನಾವರಣಗೊಳ್ಳಲಿದೆಯಂತೆ.



