ಕಲರ್ಸ್ ಕನ್ನಡ ವಾಹಿನಿಯ ಪ್ರಮುಖ ಧಾರಾವಾಹಿಗಳಲ್ಲಿ ಭಾಗ್ಯಲಕ್ಷ್ಮಿ ಕೂಡ ಒಂದು. ಕಳೆದ 2 ವರ್ಷಗಳಿಂದ ಈ ಧಾರಾವಾಹಿ ಸೂಪರ್ ಮನರಂಜನೆ ನೀಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿಹೆಚ್ಚು ಟಿಆರ್ಪಿ ಪಡೆಯುತ್ತಿರುವ ಸೀರಿಯಲ್ ಕೂಡ ಭಾಗ್ಯಲಕ್ಷ್ಮೀ ಆಗಿದೆ. ಈ ಧಾರಾವಾಹಿಯಲ್ಲಿ ಈಗ ಬಿಗ್ ಟ್ವಿಸ್ಟ್ ಒಂದು ಶುರುವಾಗಿದ್ದು, ಇದೀಗ ಭಾಗ್ಯ ಮನೆಬಿಟ್ಟು ಹೊರಟಿದ್ದಾಳೆ, ಭಾಗ್ಯ ಅಳುತ್ತಾ ಇದ್ದದ್ದನ್ನೇ ನೋಡಿ ಅಭಿಮಾನಿಗಳಿಗೂ ಕೂಡ ಬಹಳ ಬೇಸರ ಆಗಿತ್ತು, ಆದರೆ ಈಗ ಭಾಗ್ಯ ಮಾಡಿರುವ ನಿರ್ಧಾರದಿಂದ ಅಭಿಮಾನಿಗಳಿಗೆ ಬಹಳ ಸಂತೋಷ ಆಗಿದೆ. ಕೊನೆಗೂ ಭಾಗ್ಯ ಒಳ್ಳೇ ಕೆಲಸವನ್ನೇ ಮಾಡಿದ್ದಾಳೆ ಅಂತಿದ್ದಾರೆ ಫ್ಯಾನ್ಸ್.

ಕಳೆದ 2 ವಾರದಿಂದ ಭಾಗ್ಯ ಅಳುವುದನ್ನೇ ತೋರಿಸಲಾಗಿತ್ತು. ಭಾಗ್ಯಳಿಗೆ ಹೋಟೆಲ್ ನಲ್ಲಿ ತಾಂಡವ್ ಶ್ರೇಷ್ಠ ಸುಳ್ಳು ಹೇಳಿಕೊಂಡು, ಗಂಡ ಹೆಂಡತಿಯ ಹಾಗೆ ಬಂದಿರುವ ವಿಷಯ ಗೊತ್ತಾಗಿ, ಸಿಕ್ಕಾಪಟ್ಟೆ ಕಣ್ಣೀರು ಹಾಕಿ ಆ ಎಲ್ಲಾ ದೃಶ್ಯಗಳು ಮುಗಿದ ನಂತರ, ಮನೆಗೆ ಬಂದ ಭಾಗ್ಯ, ತಾಂಡವ್ ನನ್ನು ಹೋಟೆಲ್ ನಲ್ಲಿ ಕಾಪಾಡಿ ಮನೆಗೆ ವಾಪಸ್ ಬರುವಾಗ ನಾಳೆ ನಮ್ಮ ಮದುವೆ ವಾರ್ಷಿಕೋತ್ಸವ ಎಂದು ಹೇಳಿ, ದಬಾಯಿಸಿ ಶಾಪಿಂಗ್ ಮಾಡಿಕೊಂಡು ಬಂದಿದ್ದಳು. ಮದುವೆ ವಾರ್ಷಿಕೋತ್ಸವಕ್ಕೆ ಶ್ರೇಷ್ಠಳನ್ನು ಸಹ ಭಾಗ್ಯ ಕರೆದಿದ್ದಳು. ಹಾಗೆ ಶ್ರೇಷ್ಠ ಸಹ ಬಂದಳು. ವಾರ್ಷಿಕೋತ್ಸವದ ದಿನ ಮತ್ತೆ ಮದುವೆ ಮಾಡಿಕೊಳ್ಳುವ ಶಾಸ್ತ್ರಗಳನ್ನು ಅರೇಂಜ್ ಮಾಡಿದ್ದಳು ಭಾಗ್ಯ.
ಭಾಗ್ಯಳಿಗೆ ಮತ್ತೆ ತಾಳಿ ಕಟ್ಟಲು ತಾಂಡವ್ ನಿರಾಕರಿಸಿದಾಗ, ಬಾಯಿಗೆ ಬಂದಂತೆ ಮಾತನಾಡಿದಾಗ, ಭಾಗ್ಯ ಕೂಡ ತಾಂಡವ್ ಕೆನ್ನೆಗೆ ಸರಿಯಾಗಿ ಭಾರಿಸಿದಳು, ಶ್ರೇಷ್ಠಳಿಗೆ ಸಹ ಭಾಗ್ಯ ಇಂದ ಸರಿಯಾಗಿ ಎಟುಗಳು ಸಿಕ್ಕಿತು, ಜೊತೆಗೆ ತಾಳಿಯ ಮಹತ್ವವನ್ನು ತಿಳಿಸಿಕೊಟ್ಟಳು ಭಾಗ್ಯ. ಆದರೆ ಇದೆಲ್ಲಾ ಏನೇ ನಡೆದರು, ಕುಸುಮ ಒಪ್ಪಿಸಲು ಏನೇ ಪ್ರಯತ್ನ ಪಟ್ಟರು ಸಹ ತಾಂಡವ್ ಒಪ್ಪುವ ಸ್ಥಿತಿಯಲ್ಲಿ ಇಲ್ಲ, ತನಗೆ ಶ್ರೇಷ್ಠ ಮಾತ್ರ ಇಷ್ಟ, ಭಾಗ್ಯ ಜೊತೆಗೆ ಇರೋದಕ್ಕೆ ಆಗಲ್ಲ ಎಂದು ಹೇಳಿದ್ದಾನೆ. ಭಾಗ್ಯಳಿಗೆ ಕೂಡ ಈಗ ಏನೇ ಮಾಡಿದರೂ ಸಹ ತಾಂಡವ್ ಗೆ ತಾನು ಇಷ್ಟ ಆಗುವುದಿಲ್ಲ ಎಂದು ಅರ್ಥವಾಗಿದೆ.
ಇಬ್ಬರ ಜಗಳ ಜಾಸ್ತಿಯಾಗಿ, ಕೊನೆಗೆ ಇಂದಿನ ಸಂಚಿಕೆಯಲ್ಲಿ ಭಾಗ್ಯ ಅತ್ತೆ, ಮಾವ, ಮಕ್ಕಳು, ಅಪ್ಪ, ಅಮ್ಮ ಎಲ್ಲರ ಜೊತೆಗೆ ಮನೆಬಿಟ್ಟು ಹೊರಬಂದಿದ್ದಾಳೆ. ಸುಮ್ಮನೆ ಬಂದಿಲ್ಲ, ತಾಂಡವ್ ಗೆ ಸವಾಲು ಹಾಕಿ ಬಂದಿದ್ದಾಳೆ. ನೀವಿಲ್ಲದೇ ನಾನು ಬದುಕುತ್ತೀನಿ, ಅತ್ತೆ ಮಾವ, ಮಕ್ಕಳು ನನ್ ಜೊತೆಗೆ ಇರ್ತಾರೆ ಎಂದು ಹೇಳಿ ಭಾಗ್ಯ ಮನೆಯಿಂದ ಹೊರಬಂದಿದ್ದಾಳೆ. ಈ ಪ್ರೊಮೋ ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿದ್ದು, ಈ ಪ್ರೋಮೊ ನೋಡಿದ ವೀಕ್ಷಕರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದು, ಎಪಿಸೋಡ್ ನೋಡುವುದಕ್ಕೆ ಕಾಯುತ್ತಿದ್ದಾರೆ. ಹಾಗೆಯೇ ಭಾಗ್ಯ ತಗೊಂಡಿರೋ ಈ ನಿರ್ಧಾರಕ್ಕೆ ಎಲ್ಲರ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಭಾಗ್ಯ ಅಳೋದು, ಗೋಳಾಡೋದು ಇದೆಲ್ಲವನ್ನು ನೋಡಿಕೊಂಡು ಬೇಸರ ಮಾಡಿಕೊಂಡಿದ್ದ ವೀಕ್ಷಕರಿಗೆ ಇದೀಗ ಭಾಗ್ಯ ಧೈರ್ಯದಿಂದ ತೆಗೆದುಕೊಂಡಿರುವ ಈ ನಿರ್ಧಾರ ಬಹಳ ಇಷ್ಟವಾಗಿದೆ. ಭಾಗ್ಯ ಯಾವಾಗಲೋ ಈ ಕೆಲಸ ಮಾಡಬೇಕಿತ್ತು, ಈಗಲಾದರೂ ಈ ಒಂದು ಕೆಲಸ ಮಾಡಿದ್ದಾಳಲ್ಲ ಎಂದು ವೀಕ್ಷಕರು ಹೇಳುತ್ತಿದ್ದು, ಭಾಗ್ಯಳ ನಿರ್ಧಾರವನ್ನು ಎಲ್ಲರೂ ಸಪೋರ್ಟ್ ಮಾಡುತ್ತಿದ್ದಾರೆ. ಇನ್ನುಮುಂದೆ ಭಾಗ್ಯ ತಾಂಡವ್ ಇಲ್ಲದೇ ಚೆನ್ನಾಗಿ ಬಾಳಬೇಕು, ಅವನ ಅಗತ್ಯ ಇಲ್ಲ ಎನ್ನುವುದನ್ನು ನಿರೂಪಿಸಬೇಕು ಎಂದು ಹೇಳುತ್ತಿದ್ದಾರೆ ವೀಕ್ಷಕರು.