ತಂದೆ-ತಾಯಿ ಅಂದರೆ ಹಿಂದೆಲ್ಲ ಮಕ್ಕಳಿಗೆ ಭಯ ಇತ್ತು. ಆದರೆ ಈಗ ಕಾಲ ಬದಲಾಗಿದೆ ತಂದೆ-ತಾಯಿಯರೊಂದಿಗೆ ಗೆಳೆಯರಂತಿರುವ ಮಕ್ಕಳಿದ್ದಾರೆ. ಅವರೂ ಕೂಡ ಮಕ್ಕಳನ್ನು ಗೆಳೆಯರಂತೆ ಕಾಣುತ್ತಾರೆ, ಅವರಂತೆಯೆ ಆಧುನಿಕತೆಗೆ ಒಗ್ಗಿಕೊಂಡು ನಲಿಯುತ್ತಾರೆ. ಸದ್ಯ, ಅಮ್ಮ-ಮಗಳು ಮಾಡಿರುವ ಡ್ಯಾನ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಬಹುಶಃ ಈ ಡ್ಯಾನ್ಸ್ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ.

ಇನ್ಸ್ಟಾಗ್ರಾಂನ Mom Daughter Dance ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಅನ್ನು ನಿನ್ನೆ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು ಒಂದು ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 8,000 ಜನರು ಲೈಕ್ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋ ಅನ್ನು ನೋಡಿ ಖುಷಿಯಿಂದ ಸ್ಪಂದಿಸುತ್ತಿದ್ದಾರೆ. ಈ ಡ್ಯಾನ್ಸ್ ಕಂಡಿರುವ ನೆಟ್ಟಿಗರೆಲ್ಲ ಭಿನ್ನ ವಿಭಿನ್ನ ಕಮೆಂಟ್ ಹಾಕಿ ಅಮ್ಮ ಮಗಳನ್ನು ಕೊಂಡಾಡುತ್ತಿದ್ದಾರೆ.
ಡ್ಯಾನ್ಸ್ ಕಂಡಿರುವ ನೆಟ್ಟಿಗರಲ್ಲಿ ಒಬ್ಬ, ‘ತುಂಬಾ ಚೆನ್ನಾಗಿ ನರ್ತಿಸಿದ್ದೀರಿ, ದಯವಿಟ್ಟು ಆದಿವಾಸಿಗಳ ಡ್ಯಾನ್ಸ್ ಮಾಡಿ ಎಂದಿದ್ದಾರೆ ಒಬ್ಬರು. ಆಂಟೀ ದಪ್ಪಗಿದ್ದರೂ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ಅಮ್ಮನ ಎನರ್ಜಿ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು. ಅಮ್ಮನಿಗೆ ಮಗಳು ಸ್ಫೂರ್ತಿಯೋ, ಮಗಳಿಗೆ ಅಮ್ಮ ಸ್ಫೂರ್ತಿಯೋ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಅಂತೂ ಈ ಅಮ್ಮ ಮಗಳ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ಟ್ರೆಂಡಿಂಗ್ ನಲ್ಲಿದೆ.