ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದು ಒಂದು ವಾರ ಕಳೆದು ಹೋಗಿದ್ದರು ಸಹ ಸ್ಪರ್ಧಿಗಳು ಇನ್ನು ಕೂಡ ಅದೇ ಗುಂಗಿನಲ್ಲಿ ಇದ್ದಾರೆ ಎಂದರೆ ತಪ್ಪಲ್ಲ. ಎಲ್ಲರೂ ಬಿಗ್ ಬಾಸ್ ಶೋ, ಟಾಸ್ಕ್, ವೀಕೆಂಡ್ ಎಪಿಸೋಡ್ ಗಳು ಇದೆಲ್ಲವನ್ನು ಸಹ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೊರಗಡೆ ಇರುವ ವೀಕ್ಷಕರದ್ದು ಸಹ ಅದೇ ರೀತಿ. ಪ್ರತಿದಿನ ಬಿಗ್ ಬಾಸ್ ನೋಡಿ ಅಭ್ಯಾಸವಾಗಿ ಈಗ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರು ನಿರೂಪಣೆ ಮಾಡಿದ ಕೊನೆಯ ಸೀಸನ್ ಇದು ಎನ್ನುವುದು ವೀಕ್ಷಕರಲ್ಲಿ ಇರುವ ಮತ್ತೊಂದು ಅಸಮಾಧಾನ. ಮುಂದಿನ ಸೀಸನ್ ಗೆ ನಿರೂಪಕರಾಗಿ ಯಾರು ಬರುತ್ತಾರೆ ಎನ್ನುವ ಕುತೂಹಲ ಜನರಲ್ಲಿದೆ. ಇನ್ನು ಸ್ಪರ್ಧಿಗಳ ಬಗ್ಗೆ ಸಹ ಹಲವು ವಿಚಾರಗಳು ಚರ್ಚೆ ಆಗುತ್ತಿದ್ದು, ಇದೀಗ ಮೋಕ್ಷಿತಾ ಅವರು ಒಂದು ವಿಷಯವನ್ನು ಅರ್ಥ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಂ ಸಹ ಸೇರುತ್ತಾರೆ. ತ್ರಿವಿಕ್ರಂ ಅವರು ಶೋ ರನ್ನರ್ ಅಪ್ ಆಗಿದ್ದಾರೆ, ಮೋಕ್ಷಿತಾ ಅವರು 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇವರಿಬ್ಬರು ಸಹ ಫಿನಾಲೆ ತಲುಪಿದ ಸ್ಪರ್ಧಿಗಳು. ಆದರೆ ಬಿಗ್ ಬಾಸ್ ಮನೆಯ ಒಳಗಡೆ ಇದ್ದಾಗ ಇವರ ನಡುವೆ ಹೇಳಿಕೊಳ್ಳುವಂಥ ಒಳ್ಳೆಯ ಸ್ನೇಹ ಏನು ಇರಲಿಲ್ಲ. ಹಲವು ಬೇಡದ ಕಾರಣಗಳಿಗೆ ಇಬ್ಬರ ನಡುವೆ ಮನಸ್ತಾಪ ಇರುತ್ತಲೇ ಇತ್ತು. ಮೋಕ್ಷಿತಾ ಅವರು ತ್ರಿವಿಕ್ರಂ ಅವರ ಮೇಲೆ ಕೋಪ ಮಾಡಿಕೊಂಡು ಬಯ್ಯುತ್ತಲೇ ಇರುತ್ತಿದ್ದರು. ತ್ರಿವಿಕ್ರಂ ಕೆಲವೊಮ್ಮೆ ತಾವು ಏನು ಮಾಡಿಲ್ಲ ಎಂದು ಅರ್ಥ ಮಾಡಿಸುವುದಕ್ಕೆ ಪ್ರಯತ್ನ ಪಟ್ಟರು ಸಹ, ಅದು ಕೆಲಸ ಮಾಡುತ್ತಿರಲಿಲ್ಲ. ಮೋಕ್ಷಿತಾ ಅವರಿಂದ ಬೈಗುಳ ಕೇಳುವುದೇ ಆಗುತ್ತಿತ್ತು.

ಆದರೆ ಹೊರಗಡೆ ಇವರಿಬ್ಬರ ಇದ್ದ ಅಭಿಪ್ರಾಯವೆ ಬೇರೆ ರೀತಿ. ತ್ರಿವಿಕ್ರಂ ಅವರಿಗೆ ಮೋಕ್ಷಿತಾ ಅಂದ್ರೆ ತುಂಬಾ ಇಷ್ಟ, ಅವರಿಬ್ಬರು ಚೆನ್ನಾಗಿರಬೇಕು, ಒಳ್ಳೆ ಫ್ರೆಂಡ್ಸ್ ಆಗಿರಬೇಕು ಎನ್ನುವುದು ಹೊರಗಿನ ಜನರ ಅಭಿಪ್ರಾಯ ಆಗಿತ್ತು. ಇದೆಲ್ಲವೂ ಮೀಮ್ಸ್ ರೂಪದಲ್ಲಿ ಹೊರಬಂದಿದ್ದು ಸಹ ಯಾರಿಗೂ ಗೊತ್ತಿರಲಿಲ್ಲ. ಫಿನಾಲೆ ದಿವಸ ಕಿಚ್ಚ ಸುದೀಪ್ ಅವರು ಈ ವಿಡಿಯೋ ಪ್ಲೇ ಮಾಡಿ ತೋರಿಸಿದಾಗ, ಸ್ಪರ್ಧಿಗಳು ಶಾಕ್ ಆಗಿದ್ದರು. ಜನರು ಈ ರೀತಿ ತೆಗೆದುಕೊಂಡಿದ್ದಾರೆ ಎನ್ನುವ ಊಹೆ ಕೂಡ ಅವರಿಗೆ ಇರಲಿಲ್ಲ. ತ್ರಿವಿಕ್ರಂ ಹಾಗೂ ಭವ್ಯ ವಿಚಾರದಲ್ಲಿ ಫ್ರೆಂಡ್ಶಿಪ್ ಲವ್ ಎನ್ನುವ ಎಲ್ಲಾ ವಿಷಯಗಳು ವೈರಲ್ ಆಗಿದ್ದು ಗೊತ್ತೇ ಇದೆ. ಆದರೆ ತ್ರಿವಿಕ್ರಂ ಮತ್ತು ಮೋಕ್ಷಿತಾ ವಿಷಯದಲ್ಲಿ ಇದು ಫುಲ್ ಆಫ್ ಸರ್ಪ್ರೈಸ್ ಆಗಿತ್ತು. ಈ ಬಗ್ಗೆ ಇವರಿಬ್ಬರು ಹೊರಗಡೆ ಬಂದಮೇಲೆ ಸಹ ಪ್ರಶ್ನೆ ಕೇಳಲಾಗಿದೆ.
ಮೋಕ್ಷಿತಾ ಅವರಿಗೆ ತ್ರಿವಿಕ್ರಂ ಅವರ ಬಗ್ಗೆ ಪ್ರಶ್ನೆ ಕೇಳಿ, ತ್ರಿವಿಕ್ರಂ ಅವರ ಜೊತೆಗೆ ಸಿನಿಮಾದಲ್ಲಿ ನಟಿಸುವ ಅವಕಾಷ ಸಿಕ್ಕರೆ ನಟಿಸುತ್ತೀರಾ ಎಂದು ಮೋಕ್ಷಿತಾ ಅವರನ್ನು ಕೇಳಿದ್ದು, ಇವರು ಹೊರಗಡೆ ಬಂದ ನಂತರ ಎಲ್ಲಾ ಎಪಿಸೋಡ್ ಗಳನ್ನು ನೋಡಿ, ತ್ರಿವಿಕ್ರಂ ಅವರು ಅಷ್ಟೊಂದು ಕೆಟ್ಟವರಲ್ಲ ಎನ್ನುವುದು ಅರ್ಥವಾಗಿದ್ದು, ಮೋಕ್ಷಿತಾ ಈಗ ಮನಸ್ಸು ಬದಲಾಯಿಸಿದ್ದಾರೆ. ತ್ರಿವಿಕ್ರಂ ಅವರ ಜೊತೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತವಾಗಿ ನಟಿಸುತ್ತೇನೆ ಎಂದು ಹೇಳಿದ್ದಾರೆ ಮೋಕ್ಷಿತಾ. ಆದರೆ ಮೋಕ್ಷಿತಾ ಅವರಿಗೆ ತ್ರಿವಿಕ್ರಂ ಅವರ ಬಗ್ಗೆ ಇರುವ ಸಿಟ್ಟು ಇನ್ನು ಕೂಡ ಪೂರ್ತಿಯಾಗಿ ಕಡಿಮೆ ಆಗಿಲ್ಲ. ಅದಕ್ಕೆ ಅವರು ಹೇಳಿರುವ ಮಾತುಗಳೇ ಸಾಕ್ಷಿ ಆಗಿದೆ. ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಸಹ, ಅದನ್ನು ಅವರು ಹೇಳಿರುವುದೇ ಬೇರೆ ರೀತಿ..

ತ್ರಿವಿಕ್ರಂ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ, ಖಂಡಿತವಾಗಿ ನಟಿಸುತ್ತೇನೆ. ಪರ್ಸನಲ್ ಬೇರೆ, ಪ್ರೊಫೆಷನಲ್ ವಿಷಯವೇ ಬೇರೆ. ಪರ್ಸನಲ್ ಆಗಿ ಏನೇ ಇರಲಿ, ಕೆಲಸದ ಮೇಲೆ ಅದನ್ನು ತೋರಿಸುವುದಿಲ್ಲ. ತ್ರಿವಿಕ್ರಂ ಅವರ ಜೊತೆಗೆ ನಟಿಸುವ ಅವಕಾಶ ಬಂದರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ ಮೋಕ್ಷಿತಾ. ತ್ರಿವಿಕ್ರಂ ಹಾಗೂ ಮೋಕ್ಷಿತಾ ಒಳ್ಳೆಯ ಫ್ರೆಂಡ್ಸ್ ಆಗಿರಬೇಕು, ಅವರಿಬ್ಬರು ಜೊತೆಯಾಗಿ ಸಿನಿಮಾ ಒಂದರಲ್ಲಿ ನಟಿಸಬೇಕು ಎಂದು ಅವರ ಅಭಿಮಾನಿಗಳಿಗೆ ಆಸೆ ಇದೆ. ಮೋಕ್ಷಿತಾ ಅವರ ಈ ಮಾತುಗಳನ್ನು ಕೇಳಿದ ಬಳಿಕ ಅವರ ಫ್ಯಾನ್ಸ್ ಖುಷಿಯಾಗಿದ್ದು, ಒಂದು ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಲಿ ಎಂದು ಬೇಡಿಕೆ ವ್ಯಕ್ತಪಡಿಸಿದ್ದಾರೆ. ಮೋಕ್ಷಿತಾ ಅವರು ಇನ್ನು ಕೆಲವೇ ದಿನಗಳಲ್ಲಿ ಹೊಸ ಪ್ರಾಜೆಕ್ಟ್ ಜೊತೆಗೆ ವೀಕ್ಷಕರ ಎದುರು ಬರಬಹುದು ಎನ್ನಲಾಗಿದೆ..
ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮೋಕ್ಷಿತಾ ಅವರು ಹೆಚ್ಚಾಗಿ ಇಂಟರ್ವ್ಯೂ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಪಾರ್ಟಿಗಳಲ್ಲೇ ಆಗಲಿ, ಇನ್ನೆಲ್ಲೇ ಆಗಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಬಿಬಿಕೆ11 ನ ಬೇರೆ ಸ್ಪರ್ಧಿಗಳು ಪಾರ್ಟಿ ಮಾಡಿದರು, ಮೋಜು ಮಸ್ತಿ ಮಾಡಿ ಎಂಜಾಯ್ ಮಾಡಿದರು. ಆದರೆ ಮೋಕ್ಷಿತಾ ಅವರು ಮಾತ್ರ ಇದಕ್ಕೆಲ್ಲ ಹೋಗದೆ, ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಬಿಗ್ ಬಾಸ್ ಇಂದ ತಮಗೆ ಬಂದ ಹಣವನ್ನು ಸಹ ತಮ್ಮನ ಹೆಸರಿನಲ್ಲಿ ವಿಶೇಷ ಮಕ್ಕಳ ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಹಾಗೆಯೇ ತಂದೆ ತಾಯಿಯ ಜೊತೆಗೆ ತಮ್ಮನ ಜೊತೆಗೆ ಮನೆಯವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಮೋಕ್ಷಿತಾ. ಅಭಿಮಾನಿಗಳಿಗೆ ಇವರು ಇಷ್ಟ ಆಗೋದು ಸಹ ಇದೇ ಕಾರಣಕ್ಕೆ. ಇವರು Homely ಹುಡುಗಿ ಎಂದು.

ಇನ್ನು ಬಿಗ್ ಬಾಸ್ ಗಿಂತ ಮೊದಲು ಮೋಕ್ಷಿತಾ ಅವರಿಗೆ ಹೆಸರು ತಂದುಕೊಟ್ಟಿದ್ದು ಕನ್ನಡ ಕಿರುತೆರೆ. ಪಾರು ಧಾರವಾಹಿ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ಅದಾದ ಬಳಿಕ ಬಿಗ್ ಬಾಸ್ ಗೆ ಬಂದ ಮೋಕ್ಷಿತಾ 4ನೇ ಸ್ಥಾನ ಪಡೆದಿದ್ದಾರೆ. ಈಗ ಹೊಸ ಪ್ರಾಜೆಕ್ಟ್ ಗಳಲ್ಲಿ ನಟಿಸುವ ಆಸಕ್ತಿ ಹೊಂದಿದ್ದಾರೆ. ಮುಂಬರುವ ಅವಕಾಶವನ್ನು ಖಂಡಿತವಾಗಿ ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ಮೋಕ್ಷಿತಾ. ಹಾಗೆಯೇ ಸಿನಿಮಾದಲ್ಲಿ ನಟಿಸುವ ಆಶಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮೋಕ್ಷಿತಾ ಅವರು ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದು, ಅದೆಲ್ಲವೂ ನನಸಾಗಲಿ ಎಂದು ನಾವು ಸಹ ಹಾರೈಸೋಣ. ಮೋಕ್ಷಿತಾ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ.