ಕ್ಯೂಟ್ ಕಪಲ್ ಎಂದು ಹೆಸರು ಪಡೆದಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಕಳೆದ ವರ್ಷ ವಿಚ್ಛೇದನ ಪಡೆದರು. ಇವರಿಬ್ಬರು ಪ್ರೀತಿಸಿ ಮದುವೆಯಾದ ಜೋಡಿ. ಬಿಗ್ ಬಾಸ್ ನಲ್ಲಿ ಶುರುವಾದ ಒಡನಾಟ, ಮದುವೆವರೆಗೂ ಬಂದಿತು. ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ ಕೂಡ ಆದರು. ಆದರೆ ಇವರ ದಾಂಪತ್ಯ ಜೀವನ ಹೆಚ್ಚು ದಿವಸಗಳ ಕಾಲ ಉಳಿಯಲಿಲ್ಲ. ಒಂದೆರಡು ವರ್ಷಗಳಲ್ಲೇ ಈ ಜೋಡಿಯ ದಾಂಪತ್ಯ ಜೀವನ ಮುರಿದು ಬಿತ್ತು. ಕಳೆದ ವರ್ಷ ಇಬ್ಬರೂ ಜೊತೆಯಾಗಿ ಕೋರ್ಟ್ ಗೆ ಬಂದು, ವಿಚ್ಛೇದನ ಪಡೆದರು. ಇವರಿಬ್ಬರು ದೂರವಾಗಿ, ತಮ್ಮ ಕೆರಿಯರ್ ಬಗ್ಗೆ ಯಾವ ಆಸಕ್ತಿ ವಹಿಸಿ, ಕೆಲಸ ಮಾಡುತ್ತಿದ್ದಾರೆ ಎಂದೇ ಎಲ್ಲರೂ ಭಾವಿವಿದ್ದರು. ಇವರಿಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳು ಕೂಡ ಅದೇ ರೀತಿ ಇತ್ತು. ಆದರೆ ಈ ಜೋಡಿ ಇದೀಗ ದಿಢೀರ್ ಎಂದು ಮತ್ತೆ ಭೇಟಿ ಮಾಡಿದ್ದಾರೆ..
ಈ ಬಾರಿ ಭೇಟಿಯಾದಾಗ, ಚಂದನ್ ಶೆಟ್ಟಿ ಅವರನ್ನು ನೋಡುತ್ತಿದ್ದ ಹಾಗೆಯೇ ಭಾವುಕರಾದ ನಿವೇದಿತಾ ಗೌಡ, ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರಿಬ್ಬರ ಫ್ಯಾನ್ಸ್ ಚಂದನ್ ನಿವೇದಿತಾ ಗೌಡ ಇಬ್ಬರೂ ಮತ್ತೆ ಒಂದಾಗುತ್ತಾರಾ? ಇಬ್ಬರಲ್ಲೂ ಸ್ವಲ್ಪವೂ ಪ್ರೀತಿ ಕಡಿಮೆ ಆಗಿಯೇ ಇಲ್ಲವಲ್ಲ ಎಂದುಕೊಂಡಿದ್ದು, ಮತ್ತೆ ಈ ಜೋಡಿ ಒಂದಾದರೆ ಚೆನ್ನಾಗಿರುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಿಜಕ್ಕೂ ಅಲ್ಲಿ ನಡೆದಿರುವುದು ಏನು? ಚಂದನ್ ಹಾಗೂ ನಿವೇದಿತಾ ಮತ್ತೆ ಒಂದಾಗಿದ್ದಾರಾ? ಇವರಿಬ್ಬರಲ್ಲಿ ಇನ್ನೂ ಕೂಡ ಪ್ರೀತಿ ಇದೆಯಾ? ಇದ್ದಕ್ಕಿದ್ದಂತೆ ಇಬ್ಬರೂ ಭೇಟಿಯಾಗಿದ್ದು ಯಾಕೆ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ಚಂದನ್ ಹಾಗೂ ನಿವೇದಿತಾ ಗೌಡ ಇಬ್ಬರ ಕೆರಿಯರ್ ಗು ದೊಡ್ಡ ಬೂಸ್ಟ್ ನೀಡಿದ್ದು ಬಿಗ್ ಬಾಸ್ ಮನೆ ಎಂದರೆ ತಪ್ಪಲ್ಲ. ಚಂದನ್ ಶೆಟ್ಟಿ ಅವರು ಕನ್ನಡ ರಾಪರ್ ಆಗಿ ಹೆಸರು ಪಡೆದವರು, ಇವರ ಹಲವು ಹಾಡುಗಳು ಅದಾಗಲೇ ಸೂಪರ್ ಹಿಟ್ ಅಗಿದ್ದವು. ಕನ್ನಡ ರಾಪ್ ಹಾಡುಗಳನ್ನು ವಿದೇಶದಲ್ಲಿ ಕೂಡ ಹಾಕುವ ಹಾಗೆ ಕ್ರೇಜ್ ಸೃಷ್ಟಿಸಿದ್ದು, ಚಂದನ್ ಶೆಟ್ಟಿ ಅವರ 3 ಪೆಗ್ ಹಾಡು ಎಂದರೂ ತಪ್ಪಲ್ಲ. ಇನ್ನು ನಿವೇದಿತಾ ಗೌಡ ಮೈಸೂರಿನಲ್ಲಿ ಓದಿಕೊಂಡಿದ್ದ ಸಿಂಪಲ್ ಹುಡುಗಿ. ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ನಿವೇದಿತಾ ಗೌಡ, ಬಿಗ್ ಬಾಸ್ ಗೆ ಕಾಮನ್ ಮ್ಯಾನ್ ಕ್ಯಾಟಗರಿಯಲ್ಲಿ ಸೆಲೆಕ್ಟ್ ಆಗಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯ ಒಳಗೆ ದೊಡ್ಡದಾಗಿಯೇ ಹವಾ ಎಬ್ಬಿಸಿದ್ದರು. ನಿವೇದಿತಾ ಕನ್ನಡ, ಚಂದನ್ ಶೆಟ್ಟಿ ಅವರ ಹಾಡುಗಳು ಎಲ್ಲವೂ ಜನರಿಗೆ ಬಹಳ ಇಷ್ಟವಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಚಂದನ್ ನಿವೇದಿತಾ ಇಬ್ಬರು ಫಿನಾಲೆ ತಲುಪಿದ್ದರು ಸೀಸನ್ ವಿನ್ನರ್ ಆಗಿದ್ದು ಚಂದನ್ ಶೆಟ್ಟಿ ಅವರು. ಶೋ ಮುಗಿದ ನಂತರ ಕೂಡ ಇವರಿಬ್ಬರ ಫ್ರೆಂಡ್ಶಿಪ್ ಮುಂದುವರೆಯಿತು. ಚಂದನ್ ಹಾಗೂ ನಿವೇದಿತಾ ಆಗಾಗ ಮೈಸೂರಿನಲ್ಲಿ ಭೇಟಿ ಮಾಡುತ್ತಿದ್ದರು. ನಿವಿ ಮನೆಗೆ ಭೇಟಿ ನೀಡಿ ಎಲ್ಲರ ಜೊತೆಗೆ ಸಮಯ ಕಳೆಯುತ್ತಿದ್ದರು ಚಂದನ್. ಯುವದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೆ ಪ್ರೊಪೋಸ್ ಮಾಡಿದ್ದರು ಚಂದನ್, ವೇದಿಕೆ ಮೇಲೆಯೇ ಓಕೆ ಹೇಳಿದ್ದರು ನಿವಿ. ಕೆಲವೇ ತಿಂಗಳುಗಳಲ್ಲಿ ಈ ಜೋಡಿಯ ಮದುವೆ ಕೂಡ ನಡೆಯಿತು. ಮದುವೆಯ ನಂತರ ಇವರಿಬ್ಬರ ಕ್ಯೂಟ್ನೆಸ್, ಅನ್ಯೋನ್ಯತೆ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಸೋಷಿಯಲ್ ಮೀಡಿಯಾದ ಕ್ಯೂಟ್ ಜೋಡಿ ಎಂದೇ ಕರೆಯಲಾಗುತ್ತಿತ್ತು.
ಇಬ್ಬರೂ ರಾಜ ರಾಣಿ ಶೋನಲ್ಲಿ ಕೂಡ ಭಾಗವಹಿಸಿದ್ದರು. ಎಲ್ಲವೂ ಚೆನ್ನಾಗಿದೆ, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುತ್ತಾರೆ ಎಂದುಕೊಳ್ಳುವ ಹೊತ್ತಲ್ಲೇ, ಈ ಜೋಡಿ ಕೋರ್ಟ್ ಗೆ ಜೊತೆಯಾಗಿ ಬಂದು ವಿಚ್ಛೇದನ ಪಡೆಯುವ ಮೂಲಕ ಶಾಕ್ ನೀಡಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಇಲ್ಲ ಎನ್ನುವ ಕಾರಣ ಕೊಟ್ಟು, ಇಬ್ಬರೂ ಬೇರೆ ಬೇರೆ ಆಗಿದ್ದರು. ವಿಚ್ಛೇದನ ಪಡೆದ ಬಳಿಕ ಇವರಿಬ್ಬರು ಬಹಳ ಟ್ರೋಲ್ ಆದರು. ಹೀಗೆ ಬೇರೆಯಾಗೋಕೆ ಮದುವೆ ಆಗಬೇಕಿತ್ತಾ ಎನ್ನುವಂತಹ ಮಾತುಗಳೆಲ್ಲವು ಕೇಳಿ ಬಂದಿತ್ತು. ಇಬ್ಬರೂ ಯಾವುದೇ ಟ್ರೋಲ್ ಗಳಿಗೆ ಕೂಡ ತಲೆಕೆಡಿಸಿಕೊಳ್ಳದೇ, ತಮ್ಮ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸುತ್ತಿದ್ದರು. ನಿವೇದಿತಾ ವಿದೇಶಕ್ಕೆ ಟ್ರಿಪ್ ಹೋಗುತ್ತಾ ಬ್ಯುಸಿ ಇರುತ್ತಿದ್ದರು.
ಇದೆಲ್ಲದರ ನಡುವೆಯೇ ಈ ಜೋಡಿ ಈಗ ಇದ್ದಕ್ಕಿದ್ದಂತೆ ಭೇಟಿ ಆಗಿದ್ದು, ಚಂದನ್ ಶೆಟ್ಟಿ ಅವರನ್ನು ನೋಡಿ ನಿವೇದಿತಾ ಗೌಡ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸಧ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಬ್ಬರೂ ಮತ್ತೆ ಒಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು. ಆದರೆ ಅಸಲಿ ವಿಚಾರ ಬೇರೆಯೇ ಇದೆ. ನಿಜಕ್ಕೂ ಎಲ್ಲರೂ ಅಂದುಕೊಂಡ ಹಾಗೆ ಇವರಿಬ್ಬರು ಒಂದಾಗಿಲ್ಲ. ಇದು ಇವರಿಬ್ಬರು ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಶೂಟಿಂಗ್ ಸೀನ್ ಆಗಿದೆ. ಶೂಟಿಂಗ್ ವೇಳೆ ಇಬ್ಬರೂ ಜೊತೆಯಾಗಿ ಪ್ರೆಸ್ ಮೀಟ್ ನಲ್ಲಿ ಕೂಡ ಪಾಲ್ಗೊಂಡಿದ್ದಾರೆ, ಜರ್ನಲಿಸ್ಟ್ ಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಇಬ್ಬರೂ ಕೂಡ ಬಹಳ ಫ್ರೆಂಡ್ಲಿ ಆಗಿ ಕ್ಯಾಶುವಲ್ ಆಗಿ ಕಾಣಿಸಿಕೊಂಡಿದ್ದಾರೆ.
ವಿಚ್ಛೇದನ ಪಡೆದ ಬಳಿಕ ಒಬ್ಬರ ಮುಖವನ್ನು ಮತ್ತೊಬ್ಬರು ನೋಡೋದಿಲ್ಲ ಎನ್ನುವ ಜೋಡಿಗಳ ಎದುರು ಇವರಿಬ್ಬರು ಬೇರೆ ರೀತಿ. ಚಂದನ್ ನಿವೇದಿತಾ ಇಬ್ಬರು ವಿಚ್ಛೇದನ ಪಡೆದಾಗ ಕೈ ಕೈ ಹಿಡಿದು ಬಂದಿದ್ದರು. ಈಗ ಪ್ರೆಸ್ ಮೀಟ್ ನಲ್ಲಿ ಇಷ್ಟು ಚೆನ್ನಾಗಿ ಆತ್ಮೀಯರಂತೆ ಕಾಣಿಸಿಕೊಂಡಿದ್ದಾರೆ. ದಾಂಪತ್ಯ ಜೀವನ ಇಲ್ಲದೇ ಇರಬಹುದು. ಗಂಡ ಹೆಂಡತಿಯಾಗಿ ಇಬ್ಬರು ಜೊತೆಯಾಗಿ ಇರದೇ ಇರಬಹುದು. ಆದರೆ ಇಬ್ಬರ ನಡುವಿನ ಫ್ರೆಂಡ್ಶಿಪ್ ಹಾಗೆಯೇ ಇದೆ. ಅದರಿಂದಲೇ ಇಬ್ಬರು ಈಗಲೂ ಚೆನ್ನಾಗಿದ್ದಾರೆ, ವಿಚ್ಛೇದನ ಪಡೆದ ನಂತರ ಕೂಡ ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರಿಗೂ ಇದರಿಂದ ಒಳ್ಳೆಯದಾಗಲಿ. ಚಂದನ್ ಶೆಟ್ಟಿ ಅವರು ಮ್ಯೂಸಿಕ್, ಹಾಡುವುದು ಇದರ ಜೊತೆಗೆ ನಟನೆ ಶುರು ಮಾಡಿದ್ದು, ಇವರ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸೋಣ.