ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ರಾಮಾಚಾರಿ ಧಾರವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಲರ್ಸ್ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಇದು ಕೂಡ ಒಂದು, ಆದರೆ ಕಳೆದ ಕೆಲವು ದಿನಗಳಿಂದ ಟೈಮಿಂಗ್ ಬದಲಾದ ನಂತರ ಧಾರಾವಾಹಿಯ ಪಾಪ್ಯುಲಾರಿಟಿ ಕಡಿಮೆ ಆಗಿದೆ ಎಂದು ಹೇಳಿದರೆ ತಪ್ಪಲ್ಲ. ಆದರೆ ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಾರು ಅಂದ್ರೆ ಎಲ್ಲರಿಗೂ ಫೇವರೆಟ್. ಚಾರು ಪಾತ್ರದಲ್ಲಿ ನಟಿ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ. ಒಳ್ಳೆಯ ನಟನೆಯ ಕೌಶಲ್ಯತೆ ಇಂದ ಇವರನ್ನು ಕಂಡರೆ ಎಲ್ಲರಿಗು ಇಷ್ಟ. ಮೌನ ಗುಡ್ಡೆಮನೆ ಅವರು ಎಲ್ಲರ ಫೇವರೆಟ್. ಇತ್ತೀಚೆಗೆ ಇವರು ಸಿಂಪಲ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದು, ಇದು ಎಷ್ಟನೆ ಹುಟ್ಟುಹಬ್ಬ ಗೊತ್ತಾ? ಇಷ್ಟು ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿಬಿಟ್ರ ಮೌನ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..

ಮೌನ ಗುಡ್ಡೆಮನೆ ಅವರು ಮೊದಲಿಗೆ ಒಂದೆರಡು ಆಲ್ಬಮ್ ಸಾಂಗ್ ಗಳಲ್ಲಿ ಕೂಡ ನಟಿಸಿದ್ದರು. ಇದೆಲ್ಲವೂ ತಕ್ಕಮಟ್ಟಿಗೆ ಜನಪ್ರಿಯತೆ ನೀಡಿತ್ತು. ನಂತರ ಇವರಿಗೆ ರಾಮಾಚಾರಿ ಧಾರಾವಾಹಿಯ ಅವಕಾಶ ಸಿಕ್ಕಿತು. ಧಾರಾವಾಹಿ ಶುರುವಾದ ನಂತರ ಇವರಿಗೆ ಇದ್ದ ಜನಪ್ರಿಯತೆ ಹೆಚ್ಚಾಗಿತ್ತು. ಆರಂಭದಲ್ಲಿ ಚಾರು ಘಾಟಿ, ಸ್ಪೀಡ್, ಅಹಂಕಾರಿ ಹುಡುಗಿ ಎನ್ನುವ ಹಾಗಿದ್ದಳು. ನಂತರ ರಾಮಾಚಾರಿಯ ಮೇಲೆ ಪ್ರೀತಿ ಶುರುವಾದ ಮೇಲೆ ಚಾರು ಪಾತ್ರ ಪೂರ್ತಿಯಾಗಿ ಬದಲಾಯಿತು. ಲವ್ಲಿ ಚಾರು ಎಲ್ಲರಿಗೂ ಇಷ್ಟ ಆಗಿಬಿಟ್ಟಳು. ಈಗಂತೂ ಚಾರು ಪಾತ್ರ ಎಲ್ಲರ ಫೇವರೆಟ್. ಮೌನ ಗುಡ್ಡೆಮನೆ ಅವರನ್ನು ಸಾಕಷ್ಟು ಜನರು ಚಾರು ಚಾರು ಎಂದೇ ಕರೆಯುತ್ತದೆ. ಈ ರೀತಿ ಇದೆ ಮೌನ ಅವರಿಗೆ ಇರುವ ಜನಪ್ರಿಯತೆ. ಕಿರುತೆರೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ.
ಮೌನ ಗುಡ್ಡೆಮನೆ ಅವರು ನಿರ್ವಹಿಸುತ್ತಿರುವ ಚಾರು ಪಾತ್ರ ಈಗ ಒಂದು ರೀತಿ ಐಡಿಯಲ್ ಸೊಸೆ ಮತ್ತು ಐಡಿಯಲ್ ಹೆಂಡತಿ ಎಂದು ಹೇಳಿದರೆ ತಪ್ಪಲ್ಲ. ಚಾರು ಇದ್ದಾಳೆ ಅಂದ್ರೆ ಕುಟುಂಬ ಸೇಫ್ ಅನ್ನೋ ಹಾಗಿದೆ ಪಾತ್ರ. ರಸ್ತೆಯಲ್ಲಿ ಇವರು ಹೋಗೋವಾಗ ಎಲ್ಲರೂ ಮೌನ ಅನ್ನೋದಕ್ಕಿಂತ ಚಾರು ಅಂತ ಕರೆದು ಮಾತನಾಡಿಸಿ ಹೋಗ್ತಾರೆ. ಆ ರೀತಿ ಇದೆ ಚಾರು ಪಾತ್ರಕ್ಕೆ ಇರುವ ಜನಪ್ರಿಯತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರಿಗೂ ಚಾರು ಅಂದ್ರೇ ಫೇವರೆಟ್. ಚಾರು ಥರ ಗರ್ಲ್ ಫ್ರೆಂಡ್ ಬೇಕು, ಹೆಂಡ್ತಿ ಬೇಕು ಅನ್ನೋದು ಹುಡುಗರ ಆಸೆ, ಚಾರು ಥರ ಸೊಸೆ ಬೇಕು ಅನ್ನೋದು ದೊಡ್ಡವರ ಬಯಕೆ. ಚಾರು ಅಂಥ ಹುಡುಗಿ ಇದ್ರೆ ಆ ಮನೆ ತುಂಬಾ ಚೆನ್ನಾಗಿರುತ್ತೆ ಅನ್ನೋದರಲ್ಲಿ ಡೌಟೆ ಇಲ್ಲ. ಅಷ್ಟು ಚೆನ್ನಾಗಿ ಈ ಪಾತ್ರ ಜನರಿಗೆ ರೀಚ್ ಆಗಿದೆ.

ನಟಿ ಮೌನ ಗುಡ್ಡೆಮನೆ ಅವರು ನಾಯಕಿಯಾಗಿ ನಟಿಸಿದ ಮೊದಲ ಧಾರಾವಾಹಿಯಲ್ಲೇ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಪಡೆದು, ಯಶಸ್ವಿ ಆಗಿದ್ದಾರೆ. ಮೌನ ಅವರಿಗೆ ಈ ಧಾರಾವಾಹಿ ದೊಡ್ಡ ಮಟ್ಟದಲ್ಲೇ ಹೆಸರನ್ನು ತಂದುಕೊಟ್ಟಿದೆ. ಈ ನಟಿ ಮೂಲತಃ ದಕ್ಷಿಣ ಕನ್ನಡದ ಕಡೆಯವರು, ತುಳು ಮತ್ತು ಕನ್ನಡ ಎರಡು ಕೂಡ ಇವರಿಗೆ ಬರುತ್ತದೆ. ಹಾಗಾಗಿ ಮೌನ ಗುಡ್ಡೆಮನೆ ಅವರಿಗೆ ಇರುವ ಜನಪ್ರಿಯತೆ ಹೆಚ್ಚಾಗಿಯೇ ಇದೆ. ಮೌನ ಅವರು ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹೊಸ ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳಿಗೆ ಇಷ್ಟ ಆಗುವಂಥ ಕಾಂಟೆಂಟ್ ಗಳನ್ನು ನೀಡುತ್ತಾರೆ. ಮೌನ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಗಟ್ಟಲೇ ಫಾಲೋವರ್ಸ್ ಸಹ ಇದ್ದಾರೆ.
ಸಾಮಾನ್ಯವಾಗಿ ತಮ್ಮ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುವ ಮೌನ ಗುಡ್ಡೆಮನೆ ಅವರು, ಇದೀಗ ತಮ್ಮ ಬರ್ತ್ ಡೇ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮೌನ ಅವರು ತಮ್ಮ ಫ್ಯಾಮಿಲಿ ಜೊತೆಗೆ ಸಿಂಪಲ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಬ್ಲ್ಯಾಕ್ ಕಲರ್ ನ ಸೂಪರ್ ಆದ ಡ್ರೆಸ್ ಧರಿಸಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ ಮೌನ. ಈ ಫೋಟೋಸ್ ಎಲ್ಲವೂ ಜನರಿಗೆ ಬಹಳ ಇಷ್ಟವಾಗಿದೆ. ಇನ್ನು ಇದು ಮೌನ ಅವರಿಗೆ 22ನೇ ವರ್ಷದ ಹುಟ್ಟುಹಬ್ಬ. ಅರೆರೆ ಏನಿದು, ಮೌನ ಅವರು ಇಷ್ಟು ಚಿಕ್ಕ ಹುಡುಗಿನಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಆದರೆ ಇದು ನಿಜ, ಬಹಳ ಬೇಗ ಇವರು ಕಿರುತೆರೆಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ರಾಮಾಚಾರಿ ಧಾರವಾಹಿಯಲ್ಲಿ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರದಿಂದ ಯಶಸ್ಸನ್ನ ಕೂಡ ಗಳಿಸಿದ್ದಾರೆ.

ಮೌನ ಅವರು ಈಗ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದು, ಬಹಳ ಸಿಂಪಲ್ ಆಗಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಆಚರಿಸಿದ್ದಾರೆ. ಈ ಫೋಟೋಸ್ ನೋಡಿದ ನೆಟ್ಟಿಗರು ಮೌನ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ರಾಮಾಚಾರಿ ಧಾರಾವಾಹಿ ಇವರನ್ನು ಕರ್ನಾಟಕದ ಮನೆಮಗಳು ಎನ್ನುವ ಹಾಗೆ ಮಾಡಿಬಿಟ್ಟಿದೆ ಎಂದು ಹೇಳಿದರೂ ಕೂಡ ತಪ್ಪಲ್ಲ. ಒಂದು ಪ್ರಾಜೆಕ್ಟ್ ಅವರಿಗೆ ಅಷ್ಟು ದೊಡ್ಡ ಹೆಸರನ್ನು ತಂದುಕೊಟ್ಟಿದೆ. ಈಗ ಧಾರಾವಾಹಿ ಪ್ರಸಾರ ಆಗುವ ಸಮಯ ಬದಲಾಗಿ ಹೋಗಿದೆ, ಹಾಗಿದ್ದರು ಸಹ ಜನರು ಈ ಧಾರವಾಹಿ ಬಗ್ಗೆ ತೋರುತ್ತಿರುವ ಪ್ರೀತಿ, ಪ್ರೋತ್ಸಾಹ ಇದ್ಯಾವುದು ಕೂಡ ಕಡಿಮೆ ಮಾಡಿಲ್ಲ. ಕಥೆ ಆ ರೀತಿಯಲ್ಲಿ ಚೆನ್ನಾಗಿ ಹೋಗುತ್ತಿದೆ. ಕಲರ್ಸ್ ಕನ್ನಡದ ಬೆಸ್ಟ್ ಧಾರಾವಾಹಿಗಳಲ್ಲಿ ಇದು ಕೂಡ ಒಂದು.
ಮೌನ ಅವರು ಕಿರುತೆರೆಯಲ್ಲಿ ಮಾತ್ರವಲ್ಲ, ಬೆಳ್ಳಿತೆರೆಯಲ್ಲಿ ಸಹ ಸಕ್ರಿಯವಾಗಿದ್ದಾರೆ, ಇವರು ಈಗಾಗಲೇ ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಬಿಡುಗಡೆಯಾಗಿ, ಒಳ್ಳೆಯ ಪ್ರಶಂಸೆಗಳನ್ನು ಪಡೆದುಕೊಂಡಿದೆ. ಮೌನ ಅವರ ಅಭಿನಯಕ್ಕೆ ಕೂಡ ಮೆಚ್ಚುಗೆ ಸಿಕ್ಕಿದೆ. ಒಟ್ಟಿನಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆ ಎರಡು ಕಡೆ ಶೈನ್ ಆಗುತ್ತಿರುವ ಇವರ ಭವಿಷ್ಯ ಚೆನ್ನಾಗಿರಲಿ ಎಂದು ನಾವು ಕೂಡ ಹಾರೈಸೋಣ..



