ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ, ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕೋಟ್ಯಾಂತರ ಫಾಲೋವರ್ಸ್ ಹೊಂದಿರುವ ರಶ್ಮಿಕಾ ಜಾಹಿರಾತುಗಳಲ್ಲೂ ಬ್ಯುಸಿ ಆಗಿದ್ದಾರೆ. ಆದರೆ ಇದೇ ಹೊತ್ತಿಗೆ ರಶ್ಮಿಕಾ ತನ್ನ ಮ್ಯಾನೆಜರ್ ಒಬ್ಬನಿಂದ ಮೋಸಕ್ಕೆ ಒಳಗಾಗಿ, ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಸಿನಿಮಾ, ಜಾಹಿರಾತು, ಸೋಶಿಯಲ್ ಮಿಡಿಯಾ ಹಾಗೂ ಇವೆಂಟ್ ಗಳಿಂದಾಗಿ ರಶ್ಮಿಕಾ ಮಂದಣ್ಣ ಅವರಿಗೆ ಕೋಟಿ ಕೋಟಿ ಆದಾಯ ಹರಿದು ಬರುತ್ತಿದೆ. ಹಾಗಾಗಿಯೇ ಅವರು ತಮ್ಮ ಹಣದ ವ್ಯವಾರ ನೋಡಿಕೊಳ್ಳಲು ಮ್ಯಾನೇಜರ್ ಒಬ್ಬನನ್ನು ನೇಮಿಸಿದ್ದರು. ಆದರೆ ಅದೇ ಮ್ಯಾನೇಜರ್ ಇದೀಗ ರಶ್ಮಿಕಾ ಅವರಿಗೆ ಉಂಡೆ ನಾಮ ಹಾಕಿ ಲಕ್ಷಾಂತರ ರೂಪಾಯಿ ದೋಚಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು. ಉಂಡ ಮನೆಗೆ ದ್ರೋಹ ಬಗೆದ ಮ್ಯಾನೆಜರ್ ಗೆ ರಶ್ಮಿಕಾ ತಕ್ಕ ಪಾಠ ಕಲಿಸಿದ್ದಾರಂತೆ.
ಲಭ್ಯ ಮಾಹಿತಿಗಳ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬರೋಬ್ಬರಿ 80ಲಕ್ಷ ರೂ. ಕಬಳಿಸಿದ್ದಾನಂತೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ಸಿಡಿಮಿಡಿಗೊಂಡ ರಶ್ಮಿಕಾ ಆತನನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಆ ಮ್ಯಾನೇಜರ್ ಯಾರು, ರಶ್ಮಿಕಾ ಹಣ ಮರಳಿ ಪಡೆದಿದ್ದಾರಾ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರಾ ಇದ್ಯಾವುದರ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.
ಈ ರೀತಿ ಸೆಲೆಬ್ರಿಟಿಗಳಿಗೆ ಹಣದ ವಿಚಾರದಲ್ಲಿ ಆಪ್ತರು ಮ್ಯಾನೇಜರ್ ಗಳು ವಂಚಿಸುವುದು ಇದೇ ಮೊದಲೇನಲ್ಲ. ಇಂತಹಹಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ವರ್ಷಗಳ ಹಿಂದೆ ಟೀಂ ಇಂಡಿಯಾ ಆಟಗಾರ ಶಿಖರ್ ದವನ್ ಅವರಿಗೆ ಮ್ಯಾನೇಜರ್ 50 ವಂಚಿಸಿದ್ದ. ಇದೀಗ ರಶ್ಮಿಕಾ ಮಂದಣ್ಣ ಅವರಿಗೂ ಮ್ಯಾನೇಜರ್ ನಿಂದ ಮೋಸವಾಗಿದೆ.