ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ತೆಲಂಗಾಣದ ಕಲ್ವಕುರ್ತಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ವೆಂಕಟಯ್ಯ(43) ಮೃತನಾಗಿದ್ದಾನೆ. ಪಟ್ಟಣದ ಸುಭಾಷನಗರ ನಿವಾಸಿಯಾಗಿರುವ ಈತ ದೋಸೆ ಗಂಟಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ನಾಗರ್ ಕರ್ನೂಲ್ ಜಿಲ್ಲೆಯ ಕಲ್ವಕುರ್ತಿಯಲ್ಲಿ ಈ ಘಟನೆ ನಡೆದಿದೆ.

ಕುಟುಂಬದವರು ಹೇಳುವ ಪ್ರಕಾರ,ವೆಂಕಟಯ್ಯ ಮದ್ಯ ಸೇವಿಸಿ ನಂತ್ರ ದೋಸೆ ತಿನ್ನುತ್ತಿದ್ದನು. ನಿನ್ನೆ ಕೂಡಾ ಗುಂಡು ಹಾಕಿದ್ದ ವೆಂಕಟಯ್ಯ ನಂತರ ಊಟಕ್ಕೆ ಕುಳಿತಿದ್ದಾರೆ.ಮನೆಯಲ್ಲಿ ದೋಸೆ ಮಾಡಿದ್ದು, ದೋಸೆ ಬಡಿಸಿದ್ದಾರೆ.ದೋಸೆ ತಿನ್ನುವಾಗ ಅದು ಗಂಟಲಲ್ಲಿ ಸಿಲುಕಿದೆ.ಇದರಿಂದಾಗಿ ಉಸಿರುಗಟ್ಟಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ
ದೋಸೆ ಗಂಟಲಿಗೆ ಸಿಲುಕಿಕೊಂಡು ಉಸಿರಾಡಲು ಸಾಧ್ಯವಾಗಲಿಲ್ಲ. ನೀರು ಕುಡಿಯುವಾಗ ಪಕ್ಕಕ್ಕೆ ಬಿದ್ದು ಪ್ರಜ್ಞಾಹೀನರಾದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದಾಗ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಮನೆಯ ಯಜಮಾನ ಕಣ್ಣೆದುರೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ವೆಂಕಟಯ್ಯ ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರಿದ್ದಾರೆ ಎಂದು ತಿಳಿದುಬಂದಿದೆ.