ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತವೆ. ಕೆಲವೊಮ್ಮೆ ಒಂದೇ ರಾಶಿಯಲ್ಲಿ 2 ಅಥವಾ ಅದಕ್ಕೂ ಹೆಚ್ಚು ಗ್ರಹಗಳು ಸಂಯೋಗಗೊಳ್ಳುತ್ತವೆ. ಇದರಿಂದ ಕೆಲವೊಂದು ಯೋಗಗಳು ರೂಪುಗೊಳ್ಳುತ್ತವೆ. ಈ ರೀತಿ ಗ್ರಹಗಳ ಸಂಯೋಜನೆಯಿಂದ ಉಂಟಾಗುವ ಯೋಗಗಳಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟ ಒಲಿದು ಬಂದರೆ, ಕೆಲವರಿಗೆ ಸಮಸ್ಯೆ ಉಂಟಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದದಲ್ಲಿ ಮನುಷ್ಯ ಸುಖ ಜೀವನ ನಡೆಸಲು ಪ್ರತಿಯೊಂದು ಗ್ರಹಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಚಂದ್ರ ಮತ್ತು ಮಂಗಳ ಕೂಡಾ ಮುಖ್ಯ. ಎಲ್ಲಾ ಗ್ರಹಗಳಲ್ಲಿ, ಚಂದ್ರನು ವೇಗವಾಗಿ ಚಲಿಸುವ ಗ್ರಹವಾಗಿದೆ. ಚಂದ್ರನು ಸುಮಾರು ಎರಡೂವರೆ ದಿನಗಳವರೆಗೆ ಒಂದೇ ರಾಶಿಯಲ್ಲಿ ಸಾಗುತ್ತಾನೆ. ಈ ಸಮಯದಲ್ಲಿ ಚಂದ್ರನು ಕೆಲವು ರಾಶಿಗಳು ಮತ್ತು ಕೆಲವು ಗ್ರಹಗಳೊಂದಿಗೆ ಸಂಬಂಧ ಹೊಂದಿದ್ದಾನೆ.
ಚಂದ್ರ ಸಂಕ್ರಮಣದ ಸಮಯದಲ್ಲಿ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. 3 ದಿನಗಳ ಹಿಂದೆ, ಅಂದರೆ ನವೆಂಬರ್ 30ರಂದು ಮಂಗಳ ಮತ್ತು ಚಂದ್ರ ಸಂಕ್ರಮಣದಿಂದ ಮಹಾರಾಲಕ್ಷ್ಮೀ ರಾಜ ಯೋಗ ಉಂಟಾಗಿದೆ. ಇದಲ್ಲದೆ ಗುರು ಮತ್ತು ಶುಕ್ರ ಸಂಕ್ರಮಣದಿಂದ ಕೆಲವು ಶುಭ ಯೋಗಗಳು ರೂಪುಗೊಳ್ಳುತ್ತವೆ . ಈ ಗ್ರಹಗಳ ಪ್ರಭಾವದಿಂದಾಗಿ, ಮೇಷ ಮತ್ತು ಸಿಂಹ ಸೇರಿದಂತೆ 5 ರಾಶಿಗಳ ಜನರು ನಿರೀಕ್ಷೆಯಂತೆ ಉತ್ತಮ ಲಾಭಗಳನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಾರೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಈ ಯೋಗ, ಯಾವ ರಾಶಿಯವರಿಗೆ ಯಾವ ರೀತಿ ಫಲಗಳನ್ನು ತರಲಿದೆ ನೋಡೋಣ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಮೇಷ ರಾಶಿ
ಮಹಾಲಕ್ಷ್ಮೀ ಯೋಗದಿಂದ ಮೇಷ ರಾಶಿಯಲ್ಲಿ ಮಂಗಳನ ಪ್ರಭಾವದಿಂದ ನಾಯಕತ್ವ ಗುಣಗಳು ವೃದ್ಧಿಯಾಗುತ್ತವೆ. ಈ ಸಮಯದಲ್ಲಿ ನೀವು ಮಂಗಳ ಮತ್ತು ಚಂದ್ರನ ಸಂಕ್ರಮಣದೊಂದಿಗೆ ಗುರು ಮತ್ತು ಶುಕ್ರ ಸಂಕ್ರಮಣದಿಂದ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರು ಸಾಮಾನ್ಯವಾಗಿ ಹೆಚ್ಚಿನ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಅವರು ತಮ್ಮ ಬುದ್ಧಿವಂತಿಕೆಯಿಂದ ಎಲ್ಲರನ್ನು ಆಕರ್ಷಿಸುತ್ತಾರೆ. ಇವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಎರಡು ಸಂಕ್ರಮಣ ಯೋಗಗಳಿಂದಾಗಿ, ಈ ರಾಶಿಯ ಉದ್ಯೋಗಿಗಳು ಅದ್ಭುತ ಲಾಭಗಳನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ನೀವು ಬಡ್ತಿ ಪಡೆಯುವ ಸಾಧ್ಯತೆ ಇದೆ. ಇಷ್ಟು ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ವಿವಿಧ ಮೂಲಗಳಿಂದ ನೀವು ಆರ್ಥಿಕ ಲಾಭ ಗಳಿಸುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಮಹಾಲಕ್ಷ್ಮೀ ರಾಜಯೋಗ ಹಾಗೂ ಗುರು ಶುಕ್ರ ಸಂಕ್ರಮಣ ಯೋಗವು ಬಹಳ ಶುಭ ಫಲಗಳನ್ನು ನೀಡುತ್ತದೆ. ಈ ಸಮಯದಲ್ಲಿ ಇತರ ಗ್ರಹಗಳ ಪ್ರಭಾವದಿಂದ ಧನಾತ್ಮಕ ಫಲಿತಾಂಶಗಳು ಬರುತ್ತವೆ. ಕಚೇರಿಯಲ್ಲಿ ಮೇಲಧಿಕಾರಿಗಳು ನಿಮಗೆ ಎಲ್ಲಾ ರೀತಿಯ ಬೆಂಬಲ ನೀಡಲಿದ್ದಾರೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗುತ್ತದೆ. ಅವಿವಾಹಿತರಿಗೆ ಮದುವೆ ಫಿಕ್ಸ್ ಆಗುವ ಸಾಧ್ಯತೆಗಳಿವೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಕೊನೆಯಾಗುತ್ತದೆ.
ಧನಸ್ಸು ರಾಶಿ
ಮಹಾಲಕ್ಷ್ಮೀ ರಾಜಯೋಗವು ಧನಸ್ಸು ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮಲ್ಲಿ ಇನ್ನಿಲ್ಲದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಂಗಳ ಮತ್ತು ಚಂದ್ರನ ಸಂಕ್ರಮಣ ಹಾಗೂ ಗುರು-ಶುಕ್ರ ಸಂಕ್ರಮಣದಿಂದ ಉಂಟಾಗುವ ಶುಭ ಯೋಗಗಳಿಂದ ಆರ್ಥಿಕ ಲಾಭವಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ. ಹೂಡಿಕೆಗಳಿಂದ ಕೂಡಾ ನಿಮಗೆ ಸಾಕಷ್ಟು ಲಾಭ ಉಂಟಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಕೌಟುಂಬಿಕ ಕಲಹಗಳು ದೂರಾಗುತ್ತದೆ.
ಮಕರ ರಾಶಿ
ಎರಡು ಸಂಕ್ರಮಣ ಯೋಗಗಳಿಂದ ಮಕರ ರಾಶಿಯವರಿಗೆ ಕೂಡಾ ಶುಭ ಫಲಗಳು ದೊರೆಯುತ್ತದೆ. ಈ ಅವಧಿಯಲ್ಲಿ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ವ್ಯಾಪಾರಸ್ಥರಿಗೆ ನಿರೀಕ್ಷೆಯಂತೆ ಲಾಭವಾಗುವ ಸಾಧ್ಯತೆ ಇದೆ. ಇಷ್ಟು ದಿನಗಳಿಂದ ಬಾಕಿ ಆಗದೆ ಉಳಿದಿರುವ ಕೆಲಸಗಳು ಈಗ ಪೂರ್ಣಗೊಳ್ಳಲಿದೆ. ಕೋರ್ಟ್ ವ್ಯಾಜ್ಯದಲ್ಲಿ ನೀವು ಜಯಗಳಿಸುವಿರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.