ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಪ್ರೇಮಿಗಳಿಬ್ಬರು ಬೈಕ್ನಲ್ಲಿ ರೊಮ್ಯಾಂಟಿಕ್ ರೈಡ್ ನಡೆಸಿದ ವಿಡಿಯೋ ವೈರಲ್ ಆಗಿದೆ. ಪ್ರೀತಿಯ ಗಿಂಗಿನಲ್ಲಿ ಮೈಮರೆತು ನಡು ರಸ್ತೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ನಡೆಸಿದ ಈ ಬೈಕ್ ರೈಡಿಂಗ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಪ್ರೇಮಿಗಳಿಗೆ ದಂಡ ವಿಧಿಸಿದ್ದಾರೆ.
ಉತ್ತರ ಪ್ರದೇಶದ ಹಾಪುರ್ನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಜೋಡಿ ಪ್ರಣಯದಲ್ಲಿ ಮುಳುಗಿದ್ದು, ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೈಕ್ ಸವಾರಿ ಮಾಡುವಾಗ ದಂಪತಿಗಳು ಪರಸ್ಪರ ಆಲಿಂಗನದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ಅಜಾಗರೂಕ ಬೈಕ್ ರೈಡ್, ಹೆಲ್ಮೆಟ್ ಧರಿಸದೆ ರಸ್ತೆ ಸುರಕ್ಷತೆ ನಿಯಮಗಳನ್ನು ಮೀರಿದ್ದಾರೆ.
ವೈರಲ್ ವೀಡಿಯೊವನ್ನ ಗಮನಿಸಿದ ಹಾಪುರ್ ಪೊಲೀಸರು ಜೋಡಿಗೆ ಭಾರಿ ದಂಡವನ್ನು ವಿಧಿಸುವ ಮೂಲಕ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಬೈಕ್ ಸವಾರನಿಗೆ ರೂ 8,000 ದಂಡ ವಿಧಿಸಲಾಗಿದೆ ಮತ್ತು ಅಪಾಯಕಾರಿ ಬೈಕ್ ರೈಡ್ಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.