ಪ್ರೀತಿಯ ಅಮಲಿನಲ್ಲಿರುವ ಪ್ರೇಮಿಗಳಿಗೆ ಜಗತ್ತು ಕಾಣೋದಿಲ್ಲ. ಈ ಮಾತಿಗೆ ತಕ್ಕಂತೆ ದಿನಕ್ಕೆ ಹತ್ತು ಹಲವು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ.ಮೊನ್ನೆಯಷ್ಟೇ ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳಿಬ್ಬರು ಸಾರ್ವಜನಿಕರ ನಡುವೆಯೇ ಅಸಭ್ಯವಾಗಿ ನಡೆದುಕೊಂಡಿದ್ದರು. ಇದೀಗ ಕಾರಿನ ಮೇಲೆ ಕುಳಿತ ಪ್ರೇಮಿಗಳಿಬ್ಬರು ನಡು ರಸ್ತೆಯಲ್ಲೇ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೆರೆಯ ರಾಜ್ಯ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಕಾರಿನ ಟಾಪ್ ಮೇಲೆ ಕುಳಿತು ಮುದ್ದಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಪ್ರಮುಖ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ತಬ್ಬಿಕೊಂಡು ಮುದ್ದಾಡುತ್ತಾ ಹೈದರಾಬಾದ್ ರೌಂಡ್ಸ್ ಹಾಕಿದ್ದಾರೆ. ಇದೇ ರಸ್ತೆಯಲ್ಲೇ ಪ್ರೇಮಿಗಳ ಕಾರಿನ ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನಲ್ಲಿದ್ದವರು ಪ್ರಯಾಣಿಕರು ವಿಡಿಯೋ ಸೆರೆ ಹಿಡಿದಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಹೈದರಾಬಾದ್ ಪೊಲೀಸರು ಹುಚ್ಚು ಪ್ರೇಮಿಗಳಿಬ್ಬರನ್ನು ಠಾಣೆಗೆ ಕರೆಸಿ ಮರ್ಯಾದೆ ನೀಡಿ ಕಳಿಸಿದ್ದಾರೆ. ಸದ್ಯ, ಸಾಮಾಜಿಕ ಜಾಲಾತಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋ ಕಂಡ ನೆಟ್ಟಿಗರು ಪ್ರೇಮಿಗಳ ಮಿತಿ ಮೀರಿದ ಹುಚ್ಚಾಟಕ್ಕೆ ಗರಂ ಆಗಿದ್ದಾರೆ.



