ಖ್ಯಾತ ಮ್ಯೂಸಿಶಿಯನ್ ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ಅವರ 29 ವರ್ಷಗಳ ದಾಂಪತ್ಯ ಮುರಿದುಬಿದ್ದಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಇಬ್ಬರೂ ಸ್ವತಃ ವಿಚ್ಛೇದನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಇದರಿಂದ ಅವರ ಅಭಿಮಾನಿಗಳಿಗೆ ಶಾಕ್ ಆಯಿತು. ಅವರ ವಿಚ್ಛೇದನದ ಹಿಂದಿನ ಕಾರಣ ಏನು ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಇದೀಗ ಎಆರ್ ರೆಹಮಾನ್ ಅವರ ಹೆಸರು ಮೋಹಿನಿ ಡೇ ಜೊತೆ ಕೇಳಿಬರುತ್ತಿದೆ. ಏಕೆಂದರೆ ರೆಹಮಾನ್ ವಿಚ್ಛೇದನ ನೀಡಿದ ಮರುದಿನವೇ ಮೋಹಿನಿ ಡೇ ಅವರ ವಿಚ್ಛೇದನದ ಸುದ್ದಿ ಚಿತ್ರೋದ್ಯಮದಲ್ಲಿ ಸಂಚಲನವನ್ನು ಉಂಟು ಮಾಡಿದೆ.

ಹೀಗಿರುವಾಗ ಎಆರ್ ರೆಹಮಾನ್ ವಿಚ್ಛೇದನಕ್ಕೆ ಮೋಹಿನಿಯೇ ಕಾರಣ ಎನ್ನಲಾಗಿತ್ತು. ಆದರೆ ಇದೀಗ ರೆಹಮಾನ್ ಅವರ ಮಗ ಅಮೀನ್ ರೆಹಮಾನ್ ಮೌನ ಮುರಿದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಂದೆ ಮತ್ತು ಮೋಹಿನಿ ಡೇ ನಡುವಿನ ಸಂಬಂಧದ ಬಗ್ಗೆ ಹೇಳಿದ್ದಾರೆ. ಹಾಗಾದರೆ ಈ ವದಂತಿಗಳ ಹಿಂದಿನ ಸತ್ಯ ಏನು ಎಂದು ತಿಳಿಯೋಣ ಬನ್ನಿ.
ಮೌನ ಮುರಿದ ಅಮೀನ್
ಎಆರ್ ರೆಹಮಾನ್ ವಿಚ್ಛೇದನದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿದಾಗಿನಿಂದ, ಜನರು ಮೋಹಿನಿ ಡೇ ಅವರ ಹೆಸರನ್ನು ರೆಹಮಾನ್ ಜೊತೆ ತಳಕು ಹಾಕುತ್ತಿದ್ದಾರೆ. ಆದರೆ ಇದೀಗ ಪುತ್ರ ಅಮೀನ್ ರೆಹಮಾನ್ ಮೌನ ಮುರಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸುಳ್ಳು ಮತ್ತು ಆಧಾರ ರಹಿತ ವದಂತಿಗಳನ್ನು ಹಬ್ಬಿಸುತ್ತಿರುವುದು ಬೇಸರ ತಂದಿದೆ. ಅವರ ಘನತೆ ಮತ್ತು ನಮ್ಮ ಜೀವನದ ಮೇಲೆ ಅವರು ಬೀರಿದ ಪ್ರಭಾವವನ್ನು ನಾವು ಗೌರವಿಸೋಣ ಮತ್ತು ರಕ್ಷಿಸೋಣ ಎಂದಿದ್ದಾರೆ.

ಛೀಮಾರಿ ಹಾಕಿದ ಮೋಹಿನಿ ಡೇ
ಅಮೀನ್ ಜೊತೆಗೆ ಮೋಹಿನಿ ಡೇ ಕೂಡ ಮೌನ ಮುರಿದು ಇಂತಹ ವದಂತಿ ಹಬ್ಬಿಸುವವರಿಗೆ ಛೀಮಾರಿ ಹಾಕಿದ್ದಾರೆ. ಅವರು ಕೂಡ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ‘ಹಲವು ಜನರು ನನ್ನನ್ನು ಸಂದರ್ಶನಕ್ಕೆ ಕರೆಯುತ್ತಿದ್ದಾರೆ. ಇದು ಏಕೆ ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಹೌದು, ನಾನು ಅಂತಹ ಅಸಂಬದ್ಧತೆಗೆ ಗಮನ ಕೊಡುವುದಿಲ್ಲ ಎಂದು ನಾನು ಹೇಳಲೇಬೇಕು. ನನ್ನನ್ನು ಸಂದರ್ಶನಕ್ಕೆ ಆಹ್ವಾನಿಸಿದವರನ್ನು ನಾನು ನಿರಾಕರಿಸಿದ್ದೇನೆ. ನನ್ನ ಖಾಸಗಿತನವನ್ನು ಗೌರವಿಸಿʼ ಎಂದು ಅವರು ತಿಳಿಸಿದ್ದಾರೆ.
29 ವರ್ಷ ಚಿಕ್ಕವರು ಮೋಹಿನಿ
ಮೋಹಿನಿ ಎಆರ್ ರೆಹಮಾನ್ಗಿಂತ 29 ವರ್ಷ ಚಿಕ್ಕವರು. ಮೋಹಿನಿ ಅವರು ರೆಹಮಾನ್ ತಂಡದ ಸದಸ್ಯರಾಗಿದ್ದಾರೆ. ಅವರೊಂದಿಗೆ ಎಆರ್ ರೆಹಮಾನ್ ಅವರ ಹೆಸರನ್ನು ಲಿಂಕ್ ಮಾಡಲಾಗಿದೆ. ಇದೀಗ ಇವರಿಬ್ಬರ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಇಂತಹ ಅಸಂಬದ್ಧ ವದಂತಿಗಳನ್ನು ಹಬ್ಬಿಸುವವರ ಮುಖಕ್ಕೆ ಈಗ ಕಪಾಳಮೋಕ್ಷ ಮಾಡಿದಂತಿದೆ.