ನಿಖಿಲ್ ಕುಮಾರಸ್ವಾಮಿ ಮೂರು ಬಾರಿಯೂ ಸೋತು ಸುಣ್ಣವಾಗಿದ್ದಾರೆ. ಮೂರು ಬಾರಿಯೂ ಅದೃಷ್ಟ ಅವರಿಗೆ ಒಲಿಯಲೇ ಇಲ್ಲ. ಜನ ಮೂರು ಬಾರಿಯೂ ಅವರಿಗೆ ಸೋಲುಣಿಸಿದರು. ಸಿಎಂ ಆಗಿದ್ದಾಗಲೂ ಕುಮಾರಸ್ವಾಮಿ ಪುತ್ರನನ್ನ ಗೆಲ್ಲಿಸಲು ಆಗಲಿಲ್ಲ. ಜೊತೆಗೆ ಕಳೆದ ಉಪ ಚುನಾವಣೆ ವೇಳೆ ಕೇಂದ್ರ ಸಚಿವ ಆಗಿದ್ದರೂ ಕೂಡ ಮಗನನ್ನ ಗೆಲ್ಲಿಸಲು ಆಗಲಿಲ್ಲ. ಈ ನೋವು ಕುಮಾರಸ್ವಾಮಿಗೆ ಇದ್ದೇ ಇದೆ.
ಇತ್ತ ಮೂರು ಬಾರಿ ಸೋತಿರೋ ನಿಖಿಲ್ ಕುಮಾರಸ್ವಾಮಿ ಆಗ್ಗಾಗ್ಗೆ ಸೋಲಿನ ಕುರಿತು ಚರ್ಚೆ ಮಾಡುತ್ತಲೇ ಇದ್ದಾರೆ. ತಾವು ಹೋಗುವ ಕ್ಷೇತ್ರಗಳಲ್ಲಿ ಈ ವಿಚಾರ ಮಾತನಾಡುತ್ತಲೇ ಇದ್ದಾರೆ. ಈಗ ಮತ್ತೊಮ್ಮೆ ಈ ವಿಚಾರವಾಗಿ ಕುಮಾರಸ್ವಾಮಿ ಭಾವನಾತ್ಮವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ವಿಚಾರವಾಗಿ ಭಾವುಕರಾಗಿದ್ದಾರೆ.

ನಾವು ಬೇರೆಯವರ ಹಾಗೆ ಪ್ರಚಾರ ಮಾಡಿಕೊಂಡು ಹೋಗುತ್ತಿಲ್ಲ. ಯಾವತ್ತಿಗೂ ಪ್ರಚಾರಕ್ಕೆ ದೇವೇಗೌಡರು ಕಟ್ಟಡ ಉದ್ಘಾಟನೆ ಮಾಡಲಿಲ್ಲ. ಹಾಗೇನಾದ್ರೂ ಮಾಡಿದ್ದರೆ ಗಲ್ಲಿ ಗಲ್ಲಿಗೂ ಅವರ ಕಟ್ಟಡ ನೋಡಬೇಕಿತ್ತು. ನಮ್ಮ ಹೆಸರು ಕೆತ್ತಿಸಿಕೊಳ್ಳಬೇಕು ಅಂತ ಬಂದವರಲ್ಲ ನಾವು. ಹಿಂದೆ ನಾನು ಆಕಸ್ಮಿಕ ರಾಜಕೀಯಕ್ಕೆ ಬಂದವನು. ಆಗ ಬೆಳೆಸಿದ್ದು ಕನಕಪುರದ ಜನತೆ. ನನಗೆ ಕಟ್ಟಡದಲ್ಲೆ ಹೆಸರು ಕೆತ್ತಿಸೋದು ಬೇಡ. ನಿಮ್ಮ ಹೃದಯದಲ್ಲಿ ಹೆಸರು ಉಳಿಯಬೇಕು ಅಷ್ಟೆ. ನಾನು ಮೊದಲ ಬಾರಿಗೆ ಆಕಸ್ಮಿಕ ಸಿಎಂ ಆದೆ. ಅಂದು ಕೂಡ ಸಾಕಷ್ಟು ಕೆಲಸ ಮಾಡಿದ್ದೇನೆ.
ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಏನು ಮಾಡಿದ್ದಾರೆ ಅಂತ ಕಳೆದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಪ್ರಶ್ನೆ ಮಾಡಿ ಅಪಪ್ರಚಾರ ಮಾಡಿದರು. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮತ ಹಾಕಿದ ಈ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಪ್ರಚಾರಕ್ಕೆ ಕೆಲಸ ಮಾಡಿಲ್ಲ. ಎಲ್ಲಾ ರಾಜಕೀಯ ಕುಟುಂಬದಲ್ಲಿ ರಾಜಕೀಯವಾಗಿ ಏಳು ಬೀಳು ಇದ್ದಿದ್ದೆ. ಅದಕ್ಕೆ ನಾವು ಅಂಜಿ ಕೂರಲ್ಲ. ನಿತ್ಯ ಕುರಿ ಕೊಯ್ದು ಊಟ ಹಾಕಿಸಿದ್ರೆ ನಿತ್ಯ ನಿಮ್ಮ ಹೃದಯದಲ್ಲಿ ಇರ್ತಿದ್ದೆ ಅನ್ನಿಸುತ್ತೆ. ಅದೆಲ್ಲ ಈಗ ಬೇಡ. ಈ ಜಿಲ್ಲೆಗಳಿಗೆ ಕುಡಿಯುವ ನೀರು ಕೊಟ್ಟಿದ್ದೇವೆ, ದೇವೇಗೌಡರು ಕುಡಿಯುವ ನೀರು ಕೊಡಲು ಹೋರಾಟ ಮಾಡಿದವರು. ಈಗ ಅದನ್ನೆಲ್ಲಾ ಹೇಳಿ ಪ್ರಯೋಜನ ಇಲ್ಲ ಅಂತ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಇನ್ನು ಮುಂದುವರೆದು ಮಾತನಾಡಿರುವ ಅವರು, ರಾಜಕೀಯದಲ್ಲಿ ಸೋಲಾಗಲಿ ಗೆಲುವಾಗಲಿ ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ನಾವು ನಿಖಿಲ್ಗೆ ಸೋಲಾಯಿತೆಂದು ನಿಮ್ಮನ್ನು ಬಿಟ್ಟಿಲ್ಲ. ನೀವುವತೆಗೆದುಕೊಂಡು ಬರುವ ಅರ್ಜಿಯನ್ನ ತೆಗೆದುಕೊಳ್ತಿದ್ದೇನೆ. ಸಾಕ್ಷಿ ಗುಡ್ಡೆ ಅಂತರಲಾ ಇವರು ನಮ್ಮ ಕೈಲಾದಮಟ್ಟಿಗೆ ಕೆಲಸ ಮಾಡಿಕೊಡುತ್ತಿದ್ದೇನೆ. ಇಷ್ಟೆಲ್ಲಾ ಮಾಡಿದಮೇಲೂ ಸೋಲಾಯಿತು. ರಾಜಕೀಯದಲ್ಲಿ ಇರಬೇಕಾ ಬೇಡವಾ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದಿದ್ದಾರೆ.
ಮೇಕೆದಾಟು ಮೇಕೆದಾಟು ಅಂತಾರೆ, ದೇವೇಗೌಡರು ರಾಜಕೀಯ ಮಾಡ್ತಾ ಇದ್ದಾರೆ ಅಂತ ಹೇಳ್ತಾರಲಾ. ನಿಮಗೆ 136 ಸೀಟ್ ಕೊಟ್ಟಿರೋದು ಯಾಕೆ ಮೇಕೆದಾಟು ಮಾಡಿದಿಕ್ಕೇವ ತಾನೆ. ತಮಿಳುನಾಡಿನಲ್ಲಿ ನಿಮ್ಮದೇ ಒಪ್ಪಂದದ ಸರಕಾರ ಇದೆಯಲ್ಲಾ, ಒಪ್ಪಿಸಿ ಅನುಮತಿ ತೆಗೆದುಕೊಂಡು ಬನ್ನಿ. 10 ನಿಮಿಷದಲ್ಲಿ ಪ್ರಧಾನಿ ಬಳಿ ನಾನು ಪರ್ಮಿಷನ್ ಕೊಡಿಸ್ತಿನಿ ಅಂತ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದರು.
ಒಟ್ನಲ್ಲಿ ತಮ್ಮ ಪುತ್ರನ ಸೋಲಿನ ವಿಚಾರವಾಗಿ ಪದೇ ಪದೇ ಹೋದಲ್ಲಿ ಬಂದಲ್ಲಿ ಪರಾಮರ್ಷೆ ಮಾಡ್ತಾ ಇದ್ದಾರೆ ಕುಮಾರಸ್ವಾಮಿ. ಜೊತೆಗೆ ರಾಮನಗರ ಹಾಗೂ ಚನ್ನಪಟ್ಟಣ ಭಾಗದಲ್ಲಿ ಹೋದಾಗಲೂ ಭಾವನಾತ್ಮಕವಾಗಿಯೇ ಮಾತನಾಡುತ್ತಿದ್ದಾರೆ