ಚಿತ್ರರಂಗ ಮತ್ತು ಕ್ರಿಕೆಟ್ ಇವರೆಡು ಅಣ್ಣ ತಮ್ಮ ಇದ್ದ ಹಾಗೆ ಎಂದು ಹೇಳಿದರೂ ತಪ್ಪಲ್ಲ. ಇಲ್ಲಿರುವವರಿಗೆ ಅಲ್ಲಿರುವವರು, ಅಲ್ಲಿರುವವರಿಗೆ ಇಲ್ಲಿರುವವರಿಗೆ ಪರಿಚಯ ಸ್ನೇಹ ಇದ್ದೇ ಇರುತ್ತದೆ. ಭಾರತ ಕ್ರಿಕೆಟ್ ತಂಡಕ್ಕೆ ಚಿತ್ರತಂಡದ ಜೊತೆ ಭಾರಿ ಒಳ್ಳೇ ನಂಟು ಸಹ ಇದೆ. ದಕ್ಷಿಣ ಭಾರತದ ಕಲಾವಿದರ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದೇ ಇರಬಹುದು, ಆದರೆ ಬಾಲಿವುಡ್ ನಟಿಯರ ಜೊತೆಗೆ ಒಳ್ಳೇ ನಂಟು ಇದೆ. ಸಾಕಷ್ಟು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆ ಆಗಿರುವುದೇ ಇದಕ್ಕೊಂದು ಸಾಕ್ಷಿ. ಇನ್ನು ನಮ್ಮ ಚಿತ್ರರಂಗದವರು ಕ್ರಿಕೆಟ್ ಗೆ ಬಹಳ ಸಪೋರ್ಟ್ ಮಾಡುತ್ತಾರೆ ಅನ್ನೋದು ಕೂಡ ನಮಗೆಲ್ಲಾ ಗೊತ್ತಿರುವ ವಿಷಯ. ಕನ್ನಡದಲ್ಲಿ ಎಂದರೆ ಅಣ್ಣಾವ್ರು, ಶಿವಣ್ಣ, ಅಪ್ಪು ಅವರು, ಅಂಬರೀಷ್ ಅವರು, ವಿಷ್ಣು ಸರ್ ಅವರು, ಎಲ್ಲರೂ ಸಹ ಕ್ರಿಕೆಟ್ ಪ್ರಿಯರೇ. ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಕಲಾವಿದರು ಸಹ ಇದೇ ರೀತಿ.

ಇನ್ನು ಐಪಿಎಲ್ ಎಂದು ಬಂದರೆ ಆ ಕ್ರೇಜ್ ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದು. ವಿಶ್ವಮಟ್ಟದಲ್ಲಿ ಬಹುದೊಡ್ಡ ಟೂರ್ನಮೆಂಟ್ ಎಂದು ಹೆಸರು ಪಡೆದಿರುವುದು ಐಪಿಎಲ್. ಐಪಿಎಲ್ ನಲ್ಲಿ ನಮ್ಮ ಆರ್ಸಿಬಿ ಕ್ರೇಜ್ ಹೇಗಿದೆ ಎಂದು ಗೊತ್ತೇ ಇದೆಯಲ್ಲ. ವಿರಾಟ್ ಕೊಹ್ಲಿ ಅವರು ನಮ್ಮ ತಂಡದಲ್ಲಿ ಇರುವುದು ಮತ್ತು ಕನ್ನಡಿಗರ ಗೌರವ, ಅಭಿಮಾನ ಇದೆಲ್ಲವನ್ನು ಹೆಚ್ಚು ಮಾಡಿತು ಎಂದು ಹೇಳಿದರೆ ತಪ್ಪಲ್ಲ. ಇಂದು ಆರ್ಸಿಬಿ ಎಂದರೆ ಅದೊಂದು ದೊಡ್ಡ ಬ್ರ್ಯಾಂಡ್. ವಿಶ್ವದ ಎಲ್ಲೆಡೆ ಆರ್ಸಿಬಿ ಫ್ಯಾನ್ಸ್ ಇದ್ದಾರೆ. ಈ ಸಲ ಕಮ್ ನಮ್ಮದೇ ಅನ್ನೋ ಸ್ಲೋಗನ್ ಈಗ ಎಲ್ಲೆಡೆ ವೈರಲ್. ಇದರ ಜೊತೆಗೆ ವಿರಾಟ್ ಅವರ ಸಾಧನೆ, ಅವರಿಗೆ ಆರ್ಸಿಬಿ ಬಗ್ಗೆ ಇರುವ ಪ್ರೀತಿ, ನಂಬಿಕೆ ಮತ್ತು ಗೌರವ ಕೂಡ ಅಷ್ಟೇ ಮುಖ್ಯ ಕಾರಣ ಎಂದು ಹೇಳಿದರೆ ತಪ್ಪಲ್ಲ. ವಿರಾಟ್ ಅವರನ್ನು ಪಡೆಯಲು ಈ ತಂಡ, ಇಂಥ ಅಭಿಮಾನಿಗಳನ್ನು ಪಡೆಯಲು ವಿರಾಟ್ ಅವರು ಪುಣ್ಯ ಮಾಡಿದ್ದಾರೆ.
ವಿರಾಟ್ ಅವರ ಪತ್ನಿ ಅನುಷ್ಕಾ ಅವರು ಬಾಲಿವುಡ್ ನ ಸೂಪರ್ ಸ್ಟಾರ್ ನಟಿಯರಲ್ಲಿ ಒಬ್ಬರು. ಆದರೆ ಇವರಿಗೆ ಬೆಂಗಳೂರಿನ ಜೊತೆಗೆ ವಿಶೇಷವಾದ ನಂಟು ಇದೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಷಯ. ಅನುಷ್ಕಾ ಅವರ ತಂದೆ ಆರ್ಮಿಯಲ್ಲಿ ಇದ್ದವರು, ಅವರಿಗೆ ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಆಗುತ್ತಿತ್ತು, ಅದರಿಂದ ಅನುಷ್ಕಾ ಅವರು ಹೆಚ್ಚು ಸಮಯ ಬೆಂಗಳೂರಿನಲ್ಲಿ ಸಹ ಕಳೆದಿದ್ದಾರೆ. ಅನುಷ್ಕಾ ಅವರು ಓದಿದ್ದು ಕೂಡ ಇಲ್ಲಿಯೇ. ಬೆಂಗಳೂರಿನ ಲೋಕಲ್ ಸ್ಲ್ಯಾಂಗ್, ಇಲ್ಲಿನ ಲೋಕಲ್ ತಿಂಡಿ ಸ್ಪಾಟ್ ಗಳು ಎಲ್ಲವೂ ಅನುಷ್ಕಾ ಅವರ ಫೇವರೆಟ್. ಬೆಂಗಳೂರು ಅಂದರೆ ಅನುಷ್ಕಾ ಅವರಿಗೆ ಅಷ್ಟು ಪ್ರೀತಿ. ಹಾಗಾಗಿ ವಿರಾಟ್ ಅವರು ಬೆಂಗಳೂರಿನ ತಂಡಕ್ಕಾಗಿ ಆಡುವುದು ಅವರಿಗೆ ಬಹಳ ಸಂತೋಷ ಇದೆ ಎಂದು ವಿರಾಟ್ ಅವರೇ ಹೇಳಿದ್ದಾರೆ. ಇನ್ನು ವಿರಾಟ್ ಅವರಿಗು ಬೆಂಗಳೂರಿನ ಬಗ್ಗೆ ವಿಶೇಷವಾದ ಪ್ರೀತಿ ಅಭಿಮಾನ ಇದೆ.

ವಿರಾಟ್ ಅವರು ಆರ್ಸಿಬಿ ಆಟಗಾರನಾಗಿ ಮಾತ್ರವಲ್ಲ, ಭಾರತದ ತಂಡದ ಆಟಗಾರನಾಗಿ ಎಷ್ಟೆಲ್ಲ ಸಾಧನೆಗಳನ್ನು ಮಾಡಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ವಿರಾಟ್ ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೇಷ್ಠ ಬ್ಯಾಟ್ಸ್ಮನ್. ಇಂಥ ಕಿಂಗ್ ಕೊಹ್ಲಿ ಅವರಿಗೆ ವಿಶ್ವದ ಎಲ್ಲೆಡೆ ಫ್ಯಾನ್ಸ್ ಇದ್ದಾರೆ. ಇನ್ನು ಸಿನಿಮಾ ಕಲಾವಿದರಿಗೆ ಕೂಡ ಇವರನ್ನು ಕಂಡರೆ ಬಹಳ ಪ್ರೀತಿ ಮತ್ತು ಗೌರವ ಇದೆ. ವಿರಾಟ್ ಅವರನ್ನು ಅವರ ಕೆರಿಯರ್ ಶುರುವಿನಿಂದಲೂ ನೋಡಿರುವ ಕಲಾವಿದರು ಬಹಳಷ್ಟು ಜನರು ಇದ್ದಾರೆ. ಅವರ ಪೈಕಿ ತಮಿಳು ನಟ ಸಿಂಬು ಅವರು ಸಹ ಒಬ್ಬರು. ಹೌದು, ವಿರಾಟ್ ಅಂದ್ರೆ ಇವರಿಗೂ ಅಭಿಮಾನ ಮತ್ತು ಗೌರವ ಇದೆ. ವಿರಾಟ್ ಕೊಹ್ಲಿ ವಿಚಾರದಲ್ಲಿ ನಡೆದ ಒಂದು ಘಟನೆಯನ್ನು ಇವರು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾ ಪ್ರೊಮೋಶನ್ ವೇಳೆ ಸಿಂಬು ಅವರು ಮಾತನಾಡಿದ್ದಾರೆ.

ಸಿಂಬು ಅವರು ಮಣಿರತ್ನಂ ಅವರು ನಿರ್ದೇಶನ ಮಾಡಿರುವ ಥಗ್ ಲೈಫ್ ಸಿನಿಮಾದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಅವರು ಸಹ ಈ ಸಿನಿಮಾದಲ್ಲಿ ನಟಿಸಿದ್ದು, ಇಬ್ಬರು ಕಲಾವಿದರು ಅದ್ಭುತವಾಗಿ ನಟಿಸಿರುವ ಈ ಸಿನಿಮಾ ಜೂನ್ 5ರಂದು ತೆರೆ ಕಾಣಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆ ಕಾಣಲಿದ್ದು, ಜನರು ಈ ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಪ್ರೊಮೋಷನ್ ವೇಳೆ ನಟ ಸಿಂಬು ಅವರು ಒಂದು ಆಸಕ್ತಿಕರ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಅದೇನು ಎಂದರೆ, ವಿರಾಟ್ ಕೊಹ್ಲಿ ಅವರ ಕೆರಿಯರ್ ಶುರುವಿನಲ್ಲಿ ಸಿಂಬು ಅವರು ಒಂದು ಮಾತನ್ನು ಹೇಳಿದ್ದರಂತೆ, ಈ ಹುಡುಗ ಸಚಿನ್ ತೆಂಡೂಲ್ಕರ್ ಅವರ ಹಾಗೆ ದೊಡ್ಡ ಮಟ್ಟಕ್ಕೆ ಬೆಳೆದು, ಸಾಧನೆ ಮಾಡುತ್ತಾನೆ ಎಂದು ಹೇಳಿದರಂತೆ. ಆಗ ಬೇರೆಯವರು, ಇಲ್ಲ ಈ ಹುಡುಗನಲ್ಲಿ ತುಂಬಾ ಅಗ್ರೇಷನ್ ಇದೆ, ಹೆಚ್ಚು ವರ್ಷ ಇರೋದಿಲ್ಲ ಎಂದಿದ್ದರಂತೆ.
ಆದರೆ ಸಿಂಬು ಅವರು ಮಾತ್ರ ವಿರಾಟ್ ಕೊಹ್ಲಿ ಅವರಿಗೆ ಸಪೋರ್ಟಿವ್ ಆಗಿ ಮಾತನಾಡಿ, ಈ ಹುಡುಗ ಸಾಧನೆ ಮಾಡುತ್ತಾನೆ ಎಂದು ಹೇಳಿದರಂತೆ. ಅದೇ ರೀತಿ ವಿರಾಟ್ ಕೊಹ್ಲಿ ಅವರ ಬಗ್ಗೆ ಸಿಂಬು ಅವರಿಗೆ ಬಹಳ ಅಭಿಮಾನ ಇತ್ತು, ಒಂದು ಸಾರಿ ವಿರಾಟ್ ಅವರನ್ನು ಭೇಟಿಯಾಗಿ, ನಾವು ಸಪೋರ್ಟ್ ಮಾಡಿದ ಹುಡುಗ ಅನ್ನೋ ಸಂತೋಷದಲ್ಲಿ ಮಾತನಾಡಿಸುವ ಪ್ರಯತ್ನ ಮಾಡಿದಾಗ, ವಿರಾಟ್ ಅವರು ನೀವು ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿ ಹೊರಟು ಹೋದರಂತೆ. ಆಗ ಸಿಂಬು ಅವರು, ಅದನ್ನ ಪಾಸಿಟಿವ್ ಆಗಿ ತೆಗೆದುಕೊಂಡು, ಒಂದಿನ ನನ್ನ ಬಗ್ಗೆ ನಿಮಗೆ ಗೊತ್ತಾಗೋ ದಿನ ಬರುತ್ತೆ ಎಂದುಕೊಂಡಿದ್ದರಂತೆ. ಅದೇ ರೀತಿ ನಡೆದಿದೆ, ಇತ್ತೀಚೆಗೆ ಆರ್ಸಿಬಿ ಶೇರ್ ಮಾಡಿದ್ದ ಒಂದು ವಿಡಿಯೋದಲ್ಲಿ ವಿರಾಟ್ ಅವರು ಇತ್ತೀಚೆಗೆ ಅತಿಯಾಗಿ ಕೇಳುತ್ತಿರುವುದು ನೀ ಸಿಂಗಮ್ ಧಾನ್ ಎನ್ನುವ ತಮಿಳು ಹಾಡು ಎಂದು ಆ ಹಾಡನ್ನು ಪ್ಲೇ ಮಾಡಿ ತೋರಿಸಿದರು.

ಆ ವಿಡಿಯೋ ನೋಡಿ ಸಿಂಬು ಅವರಿಗೆ, ನನ್ನ ಸಿನಿಮಾ ಹಾಡು ವಿರಾಟ್ ಅವರನ್ನ ತಲುಪಿದೆ, ಅದರ ಮೂಲಕ ನನ್ನ ಫೋಟೋ ಕೂಡ ತಲುಪಿದೆ. ಆರ್ಸಿಬಿ ಹಾಕಿದ್ದ ವಿಡಿಯೋ ನೋಡಿದೆ, ಅವರಿಗೆ ಇದೆಲ್ಲ ಜ್ಞಾಪಕ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಒಂದು ರೀತಿ ಸಕ್ಸಸ್ ಎಂದು ನಟ ಸಿಂಬು ಅವರು ಹೇಳಿದ್ದಾರೆ. ಸಿಂಬು ಅವರು ಈ ವಿಷಯವನ್ನ ಎಷ್ಟು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ ಅನ್ನೋದನ್ನ ನಿಜಕ್ಕೂ ಮೆಚ್ಚಿಕೊಳ್ಳಬೇಕು. ಆ ವಿಚಾರ ವಿರಾಟ್ ಅವರಿಗೆ ಗೊತ್ತಾಗುವ ಹಾಗೆ, ಅರ್ಥ ಆಗುವ ಹಾಗೆ ಮಾಡಿ ಎಂದು ನೆಟ್ಟಿಗರು ಕಾಮೆಂಟ್ಸ್ ನಲ್ಲಿ ಬರೆಯುತ್ತಿದ್ದಾರೆ.



