ಕನ್ನಡ ಕಿರುತೆರೆಯಲ್ಲಿ ಹೊಸ ಕ್ರೇಜ್ ಸೃಷ್ಟಿಸಿದ ನಾಯಕರಲ್ಲಿ ಕಿರಣ್ ರಾಜ್ ಸಹ ಒಬ್ಬರು. ಕನ್ನಡತಿ ಧಾರಾವಾಹಿ ಬರುತ್ತಿದ್ದ ವೇಳೆ, ಇವರ ಹರ್ಷ ಪಾತ್ರಕ್ಕೆ ಎಷ್ಟು ಕ್ರೇಜ್ ಇತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. ಹರ್ಷನ ಮೇಲೆ ಎಲ್ಲಾ ಹುಡುಗಿಯರಿಗೂ ಕ್ರಶ್ ಇತ್ತು. ತಮಗೆ ಹರ್ಷನಂಥ ಬಾಯ್ ಫ್ರೆಂಡ್ ಬೇಕು ಎಂದು ಬಯಸುತ್ತಿದ್ದರು. ಕಿರಣ್ ರಾಜ್ ಅವರ ಕೆರಿಯರ್ ನ ಮೇಜರ್ ಹೈಲೈಟ್ ಅಂದ್ರೆ ಕನ್ನಡತಿ ಧಾರಾವಾಹಿ ಅಂತ ಹೇಳಬಹುದು. ಅವರಿಗೆ ದೊಡ್ಡ ಮಟ್ಟದಲ್ಲಿ ಜನರ ಪ್ರೀತಿಯನ್ನ ತಂದುಕೊಟ್ಟ ಧಾರಾವಾಹಿ ಕನ್ನಡತಿ. ಈ ಧಾರಾವಾಹಿ ನಂತರ ದೊಡ್ಡ ಗ್ಯಾಪ್, ಬ್ರೇಕ್ ಪಡೆದಿರುವ ಹರ್ಷ ಅವರು ಈಗ ಕರ್ಣ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅದು ಜೀಕನ್ನಡ ವಾಹಿನಿಯಲ್ಲಿ, ಈ ಬಾರಿ ಕಿರಣ್ ರಾಜ್ ಅವರಿಗೆ ನಾಯಕಿ ಆಗೋದು ಯಾರು ಅನ್ನೋ ಕುತೂಹಲ ಈಗ ಶುರುವಾಗಿದೆ. ಯಾರಾಗ್ತಾರೆ ಕರ್ಣನ ಹೀರೋಯಿನ್?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಆಲ್ ಟೈಮ್ ಬೆಸ್ಟ್ ಹಾಗೂ ಫೇವರೆಟ್ ಧಾರಾವಾಹಿಗಳ ಸಾಲಿಗೆ ಸೇರೋದು ಕನ್ನಡತಿ ಧಾರಾವಾಹಿ. ಭುವಿ ಅಲಿಯಾಸ್ ಭುವನೇಶ್ವರಿ ಪಾತ್ರದಲ್ಲಿ ರಂಜನಿ ರಾಘವನ್ ಅವರು, ಅಮ್ಮಮ್ಮ ಪಾತ್ರದಲ್ಲಿ ಚಿತ್ಕಾಳಾ ಬಿರಾದಾರ್ ಅವರು, ಹರ್ಷ ಆಗಿ ಕಿರಣ್ ರಾಜ್ ಅವರು. ಈ ಮೂವರ ಅಭಿನಯ, ಆ ಕಥೆ ಸಾಗುತ್ತಿದ್ದ ರೀತಿ ಎಲ್ಲವೂ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಒಳ್ಳೆಯ ಟಿಆರ್ಪಿ ರೇಟಿಂಗ್ ತಂದುಕೊಡುವುದು ಮಾತ್ರವಲ್ಲ, ಜನಪ್ರಿಯತೆಯಲ್ಲಿ ಜನರ ಪ್ರೀತಿ ಗಳಿಸುವಲ್ಲಿ ಕೂಡ ಅಷ್ಟೇ ಮುಂದಿತ್ತು. ರಂಜನಿ ರಾಘವನ್ ಅವರು ಅಪ್ಪಟ ಕನ್ನಡತಿಯಾಗಿ ಕಾಣಿಸಿಕೊಂಡ ಪಾತ್ರವಿದು, ಪ್ರತಿ ಸಂಚಿಕೆಯ ಕೊನೆಯಲ್ಲಿ ಅವರು ಕನ್ನಡ ಪದಗಳ ಪರಿಚಯ ಮಾಡಿಕೊಡುತ್ತಿದ್ದ ಸೀಕ್ವೆನ್ಸ್ ಬಹಳ ಸ್ಪೆಷಲ್ ಆಗಿತ್ತು ಎಂದರು ತಪ್ಪಲ್ಲ.

ಇನ್ನು ಹರ್ಷ ಪಾತ್ರದ ವೈಖರಿ, ಆ ಸ್ಟೈಲ್ ಎಲ್ಲವೂ ಬಿಂದಾಸ್. ಹೀರೋ ಆಗಿಯೇ ಕಿರಣ್ ರಾಜ್ ಇದ್ರು ಎಂದು ಹೇಳಿದರು ತಪ್ಪಲ್ಲ. ಹೀಗೆ ಹಲವು ಕಾರಣಕ್ಕೆ ಕನ್ನಡತಿ ಧಾರವಾಹಿ ಜನರ ಮನಸ್ಸಲ್ಲಿ ಇವತ್ತಿಗೂ ಅಚ್ಚಳಿಯದೇ ಉಳಿದಿದೆ. ಈ ಧಾರಾವಾಹಿ ಮುಗಿದು ಎರಡರಿಂದ ಮೂರು ವರ್ಷಗಳೇ ಕಳೆಯುತ್ತಿದೆ. ಆದರೆ ಇವತ್ತಿಗೂ ಹರ್ಷ ಪಾತ್ರ ನಿರ್ವಹಿಸಿದ್ದ ಕಿರಣ್ ರಾಜ್ ಅವರಿಗೆ ಇದ್ದ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇವರು ಮತ್ತೆ ಯಾವಾಗ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕಿರಣ್ ರಾಜ್ ಅವರು ಸಿನಿಮಾದಲ್ಲಿ ಕೂಡ ನಟಿಸಿ, ಒಳ್ಳೆಯ ಚಿತ್ರಗಳು ಬಿಡುಗಡೆ ಆದವು. ಸಿನಿಮಾ ಇಂದ ಒಳ್ಳೆಯ ಹೆಸರು ಸಿಕ್ಕರೂ ಸಹ, ಕಿರಣ್ ರಾಜ್ ಅವರ ಫ್ಯಾನ್ಸ್ ಕಾಯುತ್ತಾ ಇದ್ದದ್ದು, ಅವರ ಸೀರಿಯಲ್ ಕಂಬ್ಯಾಕ್ ಗಾಗಿ. ಇದೀಗ ಅವರ ಎಲ್ಲಾ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ.

ಕಿರಣ್ ರಾಜ್ ಅವರು ಜೀಕನ್ನಡ ವಾಹಿನಿಯಲ್ಲಿ ಕರ್ಣ ಧಾರಾವಾಹಿಯ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ಶ್ರುತಿ ನಾಯ್ಡು ಅವರ ಪ್ರೊಡಕ್ಷನ್ ವತಿಯಿಂದ ಮೂಡಿಬರುತ್ತಿರುವ ಧಾರಾವಾಹಿ ಆಗಿದೆ. ಹಾಗಾಗಿ ಧಾರಾವಾಹಿಯ ಬಗ್ಗೆ ಇರುವ ನಿರೀಕ್ಷೆ ಕೂಡ ಜಾಸ್ತಿಯೇ ಇದೆ. ಇನ್ನು ಕಿರಣ್ ರಾಜ್ ಅವರು ಈ ಧಾರಾವಾಹಿಯ ಡಾಕ್ಟರ್ ಕರ್ಣ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಾಗಾಭರಣ ಅವರು ಕಿರಣ್ ರಾಜ್ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಧಾರಾವಾಹಿಯ ಮೊದಲ ಟೀಸರ್ ಕಳೆದ ವಾರ ಬಿಡುಗಡೆ ಆಗಿ, ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗಾಗಲೇ ಜೀಕನ್ನಡ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ ಕರ್ಣ ಧಾರಾವಾಹಿಯ ಟೀಸರ್.

ಸಾಮಾನ್ಯವಾಗಿ ಧಾರಾವಾಹಿಗಳು ಎಂದರೆ ಅದು ಮಹಿಳೆಯ ಪಾತ್ರದ ಮೇಲೆ ಕೇಂದ್ರಿತವಾಗಿರುತ್ತದೆ. ಧಾರಾವಾಹಿಯ ಹೆಸರು ಕೂಡ ಮಹಿಳೆಗೆ ಹೋಲುವ ಹಾಗೆ ಇರುತ್ತದೆ. ಪುರುಷ ಪ್ರಧಾನ ಧಾರಾವಾಹಿಗಳು ಬರುವುದು ತುಂಬಾ ಕಡಿಮೆ. ಇದೀಗ ಕರ್ಣ ಧಾರಾವಾಹಿಯ ಮೂಲಕ ಈ ಟ್ರೆಂಡ್ ಚೇಂಜ್ ಆಗುತ್ತಿದೆ. ಧಾರಾವಾಹಿಯ ಟೈಟಲ್ ನಾಯಕನ ಹೆಸರಿನಲ್ಲಿದೆ. ಇನ್ನು ಈ ಟೀಸರ್ ನೋಡಿದಾಗ ಗೊತ್ತಾಗಿದ್ದು, ಕರ್ಣ ಸ್ವಾರ್ಥವಿಲ್ಲದ ಒಳ್ಳೆಯ ಮನಸ್ಸಿನ ಹುಡುಗ. ಆದರೆ ಮನೆಯಲ್ಲಿ ಕರ್ಣನ ತಂದೆ ಮಗನನ್ನು ಮನೆಗೆ ಸೇರಿದವನು ಒಪ್ಪಿಕೊಳ್ಳುವುದಿಲ್ಲ. ಮನೆಯಲ್ಲಿ ಎಲ್ಲರು ಕೂಡ ಕರ್ಣನನ್ನು ಮನೆಕೆಲಸದವನ ಹಾಗೆ ಕಾಣುತ್ತಾರೆ. ಆದರೆ ಇದೆಲ್ಲವನ್ನು ನಗುತ್ತಲೇ ಸ್ವೀಕರಿಸುವ ಹುಡುಗ ಕರ್ಣ, ತನ್ನ ಫ್ಯಾಮಿಲಿಯನ್ನು ಬಿಟ್ಟುಕೊಡುವುದಿಲ್ಲ..

ಡಾಕ್ಟರ್ ಆಗಿ ಹೆಸರು ಮಾಡಿರುವ ಕರ್ಣನಿಗೆ, ಫ್ಯಾಮಿಲಿನೇ ಇಲ್ಲ, ತನಗೆ ಅವಾರ್ಡ್ ಬಂದಾಗ, ಆ ಅವಾರ್ಡ್ ಅನ್ನು ಮನೆಯವರು ಅರ್ಪಿಸುವುದಾಗಿ ಹೇಳುತ್ತಾನೆ. ನಾಯಕನಿಗೆ ಪ್ರಾಮುಖ್ಯತೆ ಇರುವ ಈ ಪಾತ್ರ ಕಿರಣ್ ರಾಜ್ ಅವರಿಗೆ ಚೆನ್ನಾಗಿ ಒಪ್ಪುತ್ತದೆ ಅಂತಿದ್ದಾರೆ ಅಭಿಮಾನಿಗಳು. ಇನ್ನು ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಾರು ಆಯ್ಕೆ ಆಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ, ಕೆಲವರು ಕನ್ನಡತಿ ಜೋಡಿಯೇ ಮತ್ತೆ ಬೇಕು, ರಂಜನಿ ರಾಘವನ್ ಅವರೇ ಕಿರಣ್ ರಾಜ್ ಅವರಿಗೆ ಜೋಡಿ ಆಗಬೇಕು ಎಂದು ಹೇಳಿದರೆ, ಇನ್ನು ಕೆಲವರು ಈಗಷ್ಟೇ ಬಿಗ್ ಬಾಸ್ ಇಂದ ಹೊರಗಡೆ ಬಂದಿರುವ ಮೋಕ್ಷಿತಾ ಪೈ ಅವರು ನಾಯಕಿಯಾದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ.. ಮತ್ತು ಕೆಲವರು ಭವ್ಯ ಗೌಡ ನಾಯಕಿ ಆದರೆ ಬೆಸ್ಟ್ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಧಾರಾವಾಹಿಗೆ ನಾಯಕಿ ಯಾರಾಗುತ್ತಾರೆ ಎನ್ನುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಧ್ಯಕ್ಕೆ ಗೊತ್ತಾಗಿರುವ ವಿಷಯ ಏನು ಎಂದರೆ, ಕರ್ಣ ಧಾರಾವಾಹಿಗೆ ಇನ್ನು ಕೂಡ ನಾಯಕಿಯ ಹುಡುಕಾಟ ನಡೆಯುತ್ತಿದೆಯಂತೆ. ಶ್ರುತಿ ನಾಯ್ಡು ಅವರು ಸಧ್ಯಕ್ಕೆ ಪ್ರೊಮೋ ಮಾತ್ರ ಶೂಟ್ ಮಾಡಿದ್ದು, ಇನ್ನು ಧಾರಾವಾಹಿ ಚಿತ್ರೀಕರಣ ಶುರುವಾಗಿಲ್ಲ. ಹಾಗಾಗಿ ಈ ಪ್ರಾಜೆಕ್ಟ್ ಗೆ ನಾಯಕಿ ಯಾರಾಗುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.. ಅಭಿಮಾನಿಗಳು ಆಸೆ ಪಟ್ಟಿರುವ ಹಾಗೆ ಆ ಮೂವರಲ್ಲೇ ಯಾರಾದರೂ ನಾಯಕಿಯಗೊ ಆಯ್ಕೆ ಆಗುತ್ತಾರಾ? ಅಥವಾ ಬೇರೆ ಯಾರಾದರು ಹೊಸ ಹುಡುಗಿಯನ್ನು ನಾಯಕಿಯಾಗಿ ಪರಿಚಯ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕರ್ಣ ಧಾರಾವಾಹಿ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದಾರೆ ಫ್ಯಾನ್ಸ್.