ನಿನ್ನೆ ಇಂದಲೂ ಇಡೀ ಭಾರತದಲ್ಲಿ ಚರ್ಚೆ ಆಗುತ್ತಿರುವುದು ಆಪರೇಷನ್ ಸಿಂಧೂರ್ ಬಗ್ಗೆ. ಭಾರತ ಸರ್ಕಾರ ತೆಗೆದುಕೊಂಡ ಈ ನಿರ್ಧಾರದಿಂದ ಭಾರತದಲ್ಲಿ ಇರುವ ಎಲ್ಲರಿಗೂ ಬಹಳ ಸಂತೋಷವಾಗಿದೆ. ಪಹಲ್ಗಾಮ್ ನಲ್ಲಿ ನಡೆದ ಘಟನೆ ಎಷ್ಟು ನೋವು ತಂದಿತ್ತೋ, ಆಪರೇಷನ್ ಸಿಂಧೂರ್ ಆ ನೋವನ್ನು ಭರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಈ ಪ್ಲಾನ್ ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲರೂ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಇನ್ನು ನಮ್ಮ ಕನ್ನಡದ ಕಿಚ್ಚ ಸುದೀಪ್ ಅವರು ಸಹ ಆಪರೇಷನ್ ಸಿಂಧೂರ್ ಬಗ್ಗೆ ಟ್ವೀಟ್ ಮಾಡಿದ್ದು, ಬಹಳ ಹೆಮ್ಮೆಯಿಂದ ಕೆಲವು ಸಾಲುಗಳನ್ನು ಬರೆದಿದ್ದಾರೆ ಕಿಚ್ಚ ಸುದೀಪ್ ಅವರು.
As an Indian… as a son of this sacred soil,
I felt the tremor of pain in Pahalgam.
Today, I feel the thunder of justice.
Operation Sindoor: not just a mission, but a sacred vow.
The sindoor of Bharat was stained… our bravehearts restored its honor with fire and precision.
To… pic.twitter.com/QzYruEjHFc
— Kichcha Sudeepa (@KicchaSudeep) May 7, 2025“ಭಾರತದ ಮಗನಾಗಿ… ಈ ಪವಿತ್ರ ಭೂಮಿಯ ಪುತ್ರನಾಗಿ, ಪಹಲ್ಗಾಮಿನಲ್ಲಿ ನಡೆದ ಘಟನೆ ನನ್ನನ್ನು ನೋವಿನಿಂದ ಕಂಪಿಸುವ ಹಾಗೆ ಮಾಡಿತ್ತು. ಆದರೆ ಇಂದು, ನಾನು ನ್ಯಾಯದ ಘರ್ಜನೆಯನ್ನು ಅನುಭವಿಸುತ್ತಿದ್ದೇನೆ. ಆಪರೇಷನ್ ಸಿಂಧೂರ್: ಇದು ಕೇವಲ ಒಂದು ಕಾರ್ಯಚಟುವಟಿಕೆ ಅಲ್ಲ, ಇದು ಒಂದು ಪವಿತ್ರ ಪ್ರತಿಜ್ಞೆ. ಭಾರತದ ಸಿಂಧೂರಕ್ಕೆ ಕಳಂಕವಾಯಿತು… ನಮ್ಮ ವೀರ ಯೋಧರು ಅದನ್ನು ಬೆಂಕಿಯಿಂದ, ನಿಖರತೆಯಿಂದ ಆ ಸಿಂಧೂರದ ಗೌರವವನ್ನು ವಾಪಸ್ ತಂದಿದ್ದಾರೆ. ನಮ್ಮ ಸೈನಿಕರಿಗೆ ನನ್ನ ಅನಂತ ವಂದನೆಗಳು. ಮಾನ್ಯ ಪ್ರಧಾನಮಂತ್ರಿ ಮತ್ತು ರಕ್ಷಣಾ ನೇತೃತ್ವಕ್ಕೆ ಧನ್ಯವಾದಗಳು — ನೀವು ದಿಟ್ಟವಾಗಿ, ದೃಢವಾಗಿ, ಭಯವಿಲ್ಲದೆ ನಿಂತಿದ್ದೀರಿ. ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ತೀಕ್ಷ್ಣ..

ಗೌರವಯುತ ಮಾಹಿತಿ ನೀಡಿದ್ದಕ್ಕಾಗಿ ವಂದನೆಗಳು. ಭಾರತ ಮರೆಯುವುದಿಲ್ಲ.. ಭಾರತ ಕ್ಷಮಿಸುವುದಿಲ್ಲ..” ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಈ ಟ್ವೀಟ್ ಗೆ ಅಭಿಮಾನಿಗಳಿಂದ ಮತ್ತು ನೆಟ್ಟಿಗರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಆಪರೇಷನ್ ಸಿಂಧೂರ್ ಭಾರತದ ಶಕ್ತಿ ಏನು, ಭಾರತ ತನ್ನ ಜನರಿಗಾಗಿ ಏನನ್ನು ಮಾಡುವುದಕ್ಕೆ ಸಿದ್ಧವಾಗಿದೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದೆ. ಆಪರೇಷನ್ ಸಿಂಧೂರ್ ನಮ್ಮ ದೇಶದ ಹೆಮ್ಮೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ರಕ್ಷಕನಾಗಿ ನಿಂತಿದ್ದಾರೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಪಹಲ್ಗಾಮ್ ನಲ್ಲಿ ನಡೆದ ಘಟನೆಯ ಬಳಿಕ ಸರಿಯಾಗಿ 13ನೇ ದಿನಕ್ಕೆ ಆಪರೇಷನ್ ಸಿಂಧೂರ್ ಅನ್ನು ನಡೆಸಿರುವುದು, 13ನೇ ದಿನಕ್ಕೆ ತಿಥಿ ಮಾಡಿದ ಹಾಗೆ ತೋರುತ್ತಿದೆ.
ಮಾಕ್ ಡ್ರಿಲ್ ಎಂದು ಹೇಳಿ, ಇವತ್ತು ಏರ್ ಸ್ಟ್ರೈಕ್ ಮಾಡಿದ್ದು, ಯಾರು ಕೂಡ ಊಹೆ ಮಾಡಿರದ ಘಟನೆ. ಈ ಘಟನೆ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ತಂದಿದೆ. ಆದರೆ ಭಾರತ ದೇಶದವರಾಗಿ ಧರ್ಮವನ್ನು ಎತ್ತಿ ಹಿಡಿಯುವ ನಾವು, ಈ ವಿಚಾರದಲ್ಲಿ ಸಹ ಧರ್ಮವನ್ನು ಪಾಲಿಸಿದ್ದೇವೆ. ಉಗ್ರ*ಗಾಮಿಗಳು ಇದ್ದ ಜಾಗದಲ್ಲಿ ಮಾತ್ರ ಏರ್ ಸ್ಟ್ರೈಕ್ ನಡೆಸಲಾಗಿದ್ದು, ಪಾಕಿಸ್ತಾನದ ಯೋಧರಿಗೆ ಇಲ್ಲಿ ಯಾವುದೇ ತೊಂದರೆ ಆಗಿಲ್ಲ. ಇದರಿಂದಲೇ ನಮ್ಮ ಮೋದಿ ಅವರ ಬಗ್ಗೆ ನಮಗೆ ಹೆಮ್ಮೆ ಆಗಿರುವುದು. ಕಿಚ್ಚ ಸುದೀಪ್ ಅವರು ಹೇಳಿದ ಹಾಗೆ ಪ್ರತಿಯೊಬ್ಬ ಭಾರತೀಯನಿಗೆ ಸಹ ಹೆಮ್ಮೆ ಆಗಿದೆ, ಎಲ್ಲರೂ ಅದೇ ರೀತಿ ಭಾವಿಸಿದ್ದಾರೆ. ಸುದೀಪ್ ಅವರು ಬರೆದಿರುವ ಹಾಗೆ ಒಂದೊಂದು ಮಾತು ಕೂಡ ಅಕ್ಷರಶಃ ಸತ್ಯ ಆಗಿದೆ.

ಇನ್ನು ಸುದೀಪ್ ಅವರು ಈಗ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಸುದೀಪ್ ಅವರು ಮ್ಯಾಕ್ಸ್ ಸಿನಿಮಾದ ಸಕ್ಸಸ್ ಅನ್ನು ಎಂಜಾಯ್ ಮಾಡಿ, ಸಿನಿಮಾ ಸೂಪರ್ ಹಿಟ್ ಆದ ನಂತರ ಈಗ ಬಿ.ಆರ್.ಬಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಬಿಲ್ಲಾ ರಂಗ ಬಾಷ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ. ಈ ಸಿನಿಮಾ ಕಳೆದ ಒಂದೆರಡು ವರ್ಷಗಳಿಂದ ಸುದ್ದಿಯಲ್ಲಿದೆ. ಸಿನಿಮಾ ಶೂಟಿಂಗ್ ಯಾವಾಗ ಶುರುವಾಗುತ್ತದೆ ಎಂದು ಫ್ಯಾನ್ಸ್ ಸಹ ಕಾಯುತ್ತಿದ್ದರು. ಈಗ ಶೂಟಿಂಗ್ ಏನೋ ಶುರುವಾಗಿದೆ, ಆದರೆ ಸಿನಿಮಾ ಬಿಡುಗಡೆಗೆ ಹೆಚ್ಚು ಸಮಯ ತೆಗೆದುಕೊಳ್ಳೋದು ಬೇಡ, ಬೇಗ ಬಿಡುಗಡೆ ಆಗಲಿ ಎನ್ನುವುದು ಸುದೀಪ್ ಅವರ ಅಭಿಮಾನಿಗಳ ಬೇಡಿಕೆ ಆಗಿದೆ..
ಇನ್ನು ಮತ್ತೊಂದು ಆಕರ್ಷಣೆ ಬಿಗ್ ಬಾಸ್. ಕಿಚ್ಚ ಸುದೀಪ್ ಅವರು 11 ವರ್ಷಗಳಿಂದ ಬಿಗ್ ಬಾಸ್ ಶೋ ಅನ್ನು ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಆದರೆ ಸುದೀಪ್ ಅವರು ನಿರೂಪಣೆ ಮಾಡುವ ಕೊನೆಯ ಸೀಸನ್ 11ನೇ ಸೀಸನ್ ಎಂದು ಖುದ್ದಾಗಿ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಆದರೆ ವಾಹಿನಿಯವರು ಮಾತ್ರ, ಸುದೀಪ್ ಅವರಿಲ್ಲದೇ ಬಿಗ್ ಬಾಸ್ ಶೋ ಇಲ್ಲ, ಅವರನ್ನು ಹೇಗಾದರೂ ಮಾಡಿ ಒಪ್ಪಿಸಿ ಮತ್ತೆ ಕರೆತರುತ್ತೇವೆ ಎಂದು ಹೇಳಿದ್ದು, ಕಿಚ್ಚ ಸುದೀಪ್ ಅವರು 12ನೇ ಸೀಸನ್ ಗೆ ಬರುತ್ತಾರಾ ಎನ್ನುವುದನ್ನು ಸಹ ಕಾದು ನೋಡಬೇಕಿದೆ. ಬೇರೆ ನಟರು ಬರುತ್ತಾರಾ ಅಥವಾ ಸುದೀಪ್ ಅವರೇ ಬರುತ್ತಾರಾ ಎಂದು ಕಾದು ನೋಡಬೇಕಿದೆ.



