ಕಿಚ್ಚ ಸುದೀಪ್ ಅವರು ಈಗ ಮ್ಯಾಕ್ಸ್ ಸಿನಿಮಾ ಗೆದ್ದಿರುವ ಖುಷಿಯಲ್ಲಿದ್ದಾರೆ. ಒಳ್ಳೆ ಸಿನಿಮಾವನ್ನು ಕನ್ನಡ ಜನತೆ ಎಂದಿಗೂ ಬಿಟ್ಟುಕೊಡೋದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮ್ಯಾಕ್ಸ್ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಆಗಿ ಸುದೀಪ್ ಅಬ್ಬರಿಸಿದ್ದಾರೆ. ಸುದೀಪ್ ಅವರ ಮಾಸ್ ಲುಕ್, ಡೈಲಾಗ್ಸ್, ಬಿಜಿಎಂ ಎಲ್ಲವನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಜ್ಯದ ಎಲ್ಲೆಡೆ ಮ್ಯಾಕ್ಸ್ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಈ ವೇಳೆ ಸುದೀಪ್ ಅವರು ಮ್ಯಾಕ್ಸ್ ಸೆಲೆಬ್ರೇಷನ್ ಗಾಗಿ ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಒಬ್ಬರೇ ಬಂದಿಲ್ಲ, ಅವರ ಪತ್ನಿ ಪ್ರಿಯಾ ಸುದೀಪ್ ಅವರು ಹಾಗೂ ಮಗಳು ಸಾನ್ವಿ ಸುದೀಪ್ ಎಲ್ಲರೂ ಬಂದಿದ್ದಾರೆ. ಸುದೀಪ್ ಅವರ ಮಗಳು ಸಾನ್ವಿ ವೇದಿಕೆಯ ಮೇಲೆ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಮುಂಜಾನೆ ಮಂಜಲ್ಲಿ ಹಾಡನ್ನು ಹಾಡಿದ್ದಾರೆ. ಮಗಳ ಹಾಡನ್ನು ಕೇಳಿ ಕಿಚ್ಚ ಭಾವುಕರಾಗಿದ್ದಾರೆ. ಇನ್ನು ಸುದೀಪ್ ಅವರು ವಾಲಿ ಸಿನಿಮಾದ ಓ ಸೋನಾ ಹಾಡನ್ನು ಹಾಡಿದ್ದು, ಓ ಪ್ರಿಯಾ ಐ ಲವ್ ಯು ಲವ್ ಯು ಡಿಯರ್ ಎಂದು ಹಾಡಿದ್ದು, ಅವರ ಪತ್ನಿ ಐ ಲವ್ ಯು ಮೋರ್ ಎಂದು ಹೇಳಿದ್ದಾರೆ. ಈ ವೀಕೆಂಡ್ ಬಹಳಷ್ಟು ಸುಂದರ ಕ್ಷಣಗಳನ್ನು ನೋಡಲು ಸಿಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಆದರೆ ಸುದೀಪ್ ಅವರು ಸರಿಗಮಪ ವೇದಿಕೆಯ ಮೇಲೆ ಆ ಒಂದು ಕಾರಣಕ್ಕೆ ಕಣ್ಣೀರು ಹಾಕಿದ್ದಾರೆ. ಸುದೀಪ್ ಅವರು ಭಾವುಕರಾಗೋ ಹಾಗೆ ಮಾಡುವಂಥ ಒಂದು ದೊಡ್ಡ ಸರ್ಪ್ರೈಸ್ ನೀಡಿದೆ ಜೀಕನ್ನಡ ವಾಹಿನಿ. ಹೌದು, ಸುದೀಪ್ ಅವರು ಒಂದು ಪ್ರತಿಮೆಯನ್ನು ಅನಾವರಣಗೊಳಿಸುತ್ತಾರೆ. ಅದು ಅವರ ತಾಯಿ ಸರೋಜಾ ಸಂಜೀವ್ ಅವರ ಪ್ರತಿಮೆ ಆಗಿದ್ದು, ಈ ಒಂದು ಪ್ರತಿಮೆಯನ್ನು ನೋಡಿದ ಕ್ಷಣವೇ ಸುದೀಪ್ ಅವರು ಅಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಮ್ಮನ ನೆನಪಲ್ಲಿ ಒಂದು ಹಾಡನ್ನು ಸಹ ಹಾಡಿದ್ದಾರೆ ಸುದೀಪ್. ಈ ಒಂದು ಕಾರ್ಯಕ್ರಮ ಅಪರೂಪದ ಕ್ಷಣಕ್ಕೆ ಸಾಕ್ಷಿ ಆಗಿದೆ ಎಂದರೆ ತಪ್ಪಲ್ಲ..
ಕಿಚ್ಚ ಸುದೀಪ್ ಅವರು ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರು ಸ್ಟ್ರಾಂಗ್ ಆಗಿದ್ದಾರೆ, ನಗುನಗುತ್ತಾ ಇದ್ದಾರೆ ಎಂದು ನಾವು ಎಷ್ಟೇ ಅಂದುಕೊಂಡರು ಸಹ, ತಾಯಿಯನ್ನು ಕಳೆದುಕೊಂಡ ಆ ನೋವು ಅವರನ್ನು ಬಿಟ್ಟು ಹೋಗುವುದಿಲ್ಲ. ಅಮ್ಮನನ್ನು ಅಷ್ಟು ಪ್ರೀತಿಸುವ ಸುದೀಪ್ ಅವರಿಂದ ಆ ನೋವು ಮರೆಯಾಗಲು ಹೇಗೆ ಸಾಧ್ಯ. ತುತ್ತು ಕೊಟ್ಟು, ಬೆಳಸಿದ ತಾಯಿ ಇಲ್ಲ ಅಂದ್ರೆ ಅದೆಷ್ಟೇ ವರ್ಷ ಆದರೂ ಆ ಮಗ ತಾಯಿಯನ್ನ ಮರೆಯಲು ಆಗೋದಿಲ್ಲ. ಮ್ಯಾಕ್ಸ್ ಸಿನಿಮಾವನ್ನು ಅಮ್ಮನಿಗೆ ತೋರಿಸಬೇಕು ಎಂದು ಆಸೆ ಪಟ್ಟಿದ್ದರು ಸುದೀಪ್, ಸಿನಿಮಾ ಬಿಡುಗಡೆ ಆಗಿ, ದೊಡ್ಡದಾಗಿ ಹೆಸರು ಮಾಡಿದೆ.. ಆದರೆ ಅಮ್ಮನಿಗೆ ತೋರಿಸಲು ಆಗಲಿಲ್ಲ ಅನ್ನುವ ಕೊರಗು ಸುದೀಪ್ ಅವರಲ್ಲಿ ಇದ್ದೇ ಇರುತ್ತದೆ..
ಅದೇ ರೀತಿಯಾಗಿ ಸುದೀಪ್ ಅವರು ಭಾವುಕರಾಗಿದ್ದಾರೆ. ಕಿಚ್ಚನನ್ನು ನೋಡಿ ಅವರ ಫ್ಯಾನ್ಸ್ ಸಹ ಭಾವುಕರಾಗಿದು ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಸುದೀಪ್ ಅವರಿಗೆ ಧೈರ್ಯ ತುಂಬಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಬಿಲ್ಲಾ ರಂಗ ಬಾಷ ಆಗಿದ್ದು ಅನೂಪ್ ಭಂಡಾರಿ ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಈ ಸಿನಿಮಾ ಮುಂದಿನ ಅಪ್ಡೇಟ್ ಗಾಗಿ ಫ್ಯಾನ್ಸ್ ಸಹ ಕಾಯುತ್ತಿದ್ದಾರೆ. ಸುದೀಪ್ ಅವರ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ ಎನ್ನುವುದೆ ಅಭಿಮಾನಿಗಳ ಆಸೆ.