ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲು ಬರುತ್ತಿಲ್ವಂತೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಇದೇ ತಿಂಗಳು 18ರಂದು ಸುದೀಪ್ ವಿವಾಹ ವಾರ್ಷಿಕೊತ್ಸವ ಇತ್ತು. ಹೀಗಾಗಿ ಹೆಂಡತಿ ಪ್ರಿಯಾ ಜೊತೆ ಅವರು ವಿದೇಶಕ್ಕೆ ಹೋಗಿದ್ದಾರೆ.
ವಿದೇಶದಲ್ಲಿ ಇರುವುದರಿಂದ ಈ ಬಾರಿ ವೀಕೆಂಡ್ ಶೋ ಮಾಡೋದು ಡೌಟು ಎನ್ನಲಾಗುತ್ತಿದೆ. ಈ ವಾರ ಕಿಚ್ಚನ ಪಂಚಾಯಿತಿ ಇಲ್ಲ. ಡೈರೆಕ್ಟ್ ನಾಮಿನೇಶನ್ ನಡೆಯಿತ್ತದೆ ಎಂದು ಬಲ್ಲಮೂಲಗಳು ತಿಳಿಸಿವೆ.
ಸುದೀಪ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ಗೆ ಗೈರಾಗುವುದು ತುಂಬಾ ಕಡಿಮೆ. ಯಾವುದೇ ಶೂಟಿಂಗ್ ಇದ್ದರೂ ಸಹ ಮ್ಯಾನೇಜ್ ಮಾಡಿಕೊಂಡು ಬಿಗ್ ಬಾಸ್ ನಡೆಸಿಕೊಡುತ್ತಾರೆ. ಈ 9 ಸೀಸನ್ ನಲ್ಲಿ ಕೊವಿಡ್ ಸಮಯ ಬಿಟ್ಟು ಇನ್ನು ಯಾವ ವಾರವೂ ಕಿಚ್ಚನ ಪಂಚಾಯತಿ ನಡೆಯದೆ ಇರಲಿಲ್ಲ. ಕೊರೊನಾ ಸಮಯದಲ್ಲಿ ಕಿಚ್ಚನಿಗೂ ಅನಾರೋಗ್ಯ ಕಾಡಿತ್ತು. ಹಾಗಾಗಿ ಕೆಲವು ವಾರ ಬಿಗ್ ಬಾಸ್ಗೆ ಗೈರಾಗಿದ್ದರು. ಅದು ಬಿಟ್ಟರೆ ಯಾವತ್ತು ಬಿಗ್ ಬಾಸ್ ಶೋಗೆ ಸುದೀಪ್ ಗೈರಾಗಿಲ್ಲ. ಆದರೆ ಈ ವಾರ ಸುದೀಪ್ ಇರಲ್ಲ ಎನ್ನಲಾಗುತ್ತಿದೆ.