ಕೆಲ ವರ್ಷಗಳ ಹಿಂದೆ ಹಾಲಿವುಡ್ ಅಥವಾ ಬಾಲಿವುಡ್ ನಟಿಯರು ಮಾತ್ರ ಬಿಕಿನಿ ಧರಿಸಿ ಫೋಟೋಶೂಟ್ ನಡೆಸುತ್ತಿದ್ದರು. ಆದರೆ ಇದೀಗ ತುಂಡುಡುಗೆಯ ಸಂಸ್ಕೃತಿ ಕನ್ನಡ ನಟಿಯರನ್ನೂ ಕೂಡ ಆವರಿಸಿದೆ ಎಂಬುದಕ್ಕೆ ಇದೀಗ ವೈರಲ್ ಆಗುತ್ತಿರುವ ‘ಕೆಜಿಎಪ್’ ಚಿತ್ರದ ನಟಿ ರೂಪಾ ರಾಯಪ್ಪನ್ ಅವರ ಫೋಟೋಗಖೇ ಸಾಕ್ಷಿ. ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ ಚಿತ್ರ ‘ಕೆಜಿಎಪ್’. ಚಿತ್ರದಲ್ಲಿ ಶಾಂತಿ ಎಂಬ ಪಾತ್ರವನ್ನು ನಿರ್ವಹಿಸಿದ್ದ ನಟಿ ರೂಪಾ ಅವರ ಬಿಗಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಮಾಡೆಲ್, ಕಂಟೆಂಟ್ ರೈಟರ್ ಆಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಡಿರುವ ರೂಪಾ ರಾಯಪ್ಪನ್ ಕೆಜಿಎಪ್ ಸಿನಿಮಾದಲ್ಲಿ ಶಾಂತಿ ಎಂಬ ಪಾತ್ರದಲದಲಿ ನಟಿಸಿ ಡಿ ಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಫೋಟೋಶೂಟ್ ನಡೆಸಿದ್ದು, ಆ ತುಂಡುಡುಗೆಯ ಹಸಿಬಿಸಿ ಆ ಗ್ಲಾಮರಸ್ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದೆ.

ಇತ್ತೀಚೆಗೆ ಕನ್ನಡ ನಟಿಯರು ಕೂಡ ಬಿಕಿನಿ ಧರಿಸಿ ಫೋಟೋಶೂಟ್ ಗಳನ್ನು ನಡೆಸುತ್ತಿದ್ದು, ನಟಿ ಸಂಯುಕ್ತಾ ಹೆಗ್ಡೆ, ಆಶಿಕ ರಂಗನಾಥ್ ಬಿಕಿನಿ ಧರಿಸಿದ್ದರು. ಇದೀಗ ಅವರ ಸಾಲಿಗೆ ರೂಪಾ ರಾಯಪ್ಪನ್ ಕೂಡ ಸೇರಿದ್ದಾರೆ. ಹಳದಿ ಬಣ್ಣದ ಬಿಕಿನಿಯೊಂದಿಗೆ ಶಾರ್ಟ್ ಸ್ಕರ್ಟ್ ಧರಿಸಿ ಟೈಲರ್ ಲುಕ್ ನಲ್ಲಿ ರೂಪಾ ಫೋಟೋಶೂಟ್ ನಡೆಸಿದ್ದಾರೆ. ಬಿಕಿನಿಯಲ್ಲಿ ಈಕೆ ಸಕ್ಕತ್ ಹಾಟ್&ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.
ಸದ್ಯ, ರೂಪಾ ರಾಯಪ್ಪನ್ ಈ ಬಿಕಿನಿ ಫೋಟೋಶೂಟ್ ನಡೆಸಿದ್ದು ಯಾಕೆ ಎಂಬುದು ತಿಳಿದು ಬಂದಿಲ್ಲ. ಕೆಜಿಎಪ್ ಚಿತ್ರದ ಶಾಂತಿ ಪಾತ್ರದ ಮೂಲಕ ನಟನೆಯಲ್ಲೂ ಸೈ ಎನಿಸಿಕೊಂಡಿರುವ ಇವರು ಏಕಾಏಕಿ ಬಿಕಿನಿ ಫೋಟೋಶೂಟ್ ನಡೆಸಿದ್ದು ಯಾವುದಾದರೂ ಸಿನಿಮಾದಲ್ಲಿ ನಟಿಸುವುದಕ್ಕಾ ಅಥವಾ ಸುಮ್ಮನೇ ಫೋಟೋಶೂಟ್ ನಡೆಸಿದರಾ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.ಆದರೆ ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ರೂಪಾ ರಾಯಪ್ಪನ್ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರುಕರಗಿ ನೀರಾಗಿದ್ದಾರೆ.