ಕೀರ್ತಿ ಸುರೇಶ್ ಅವರು ಮಹಾನಟಿ ಎಂದೇ ಹೆಸರು ಮಾಡಿರುವವರು. ಇವರು ಅಭಿನಯಿಸಿದ ಮಹಾನಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಮೂಲಕ ಕೀರ್ತಿ ಸುರೇಶ್ ಅವರಿಗೆ ಒಳ್ಳೆಯ ಹೆಸರು ಕೀರ್ತಿ ಗೌರವದ ಜೊತೆಗೆ ಆ ವರ್ಷದ ರಾಜ್ಯ ಪ್ರಶಸ್ತಿಯನ್ನ ಕೂಡ ತಂದುಕೊಟ್ಟಿತು. ಒಟ್ಟಿನಲ್ಲಿ ಪ್ರಸ್ತುತ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಗಳ ಪೈಕಿ ಇವರು ಕೂಡ ಹೆಸರು ಮಾಡಿದ್ದಾರೆ, ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ ಕೀರ್ತಿ. ಇವರಿಗೆ ಕರ್ನಾಟಕದಲ್ಲಿ ಕೂಡ ಅಭಿಮಾನಿ ಬಳಗ ಇದೆ. ಕೀರ್ತಿ ಸುರೇಶ್ ಅವರು ಕರ್ನಾಟಕಕ್ಕೆ ಬಂದಿದ್ದು, ಕನ್ನಡ ಸಿನಿಮಾಗಳ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿ, ಹಾಡಿ ಹೊಗಳಿದ್ದು ಕನ್ನಡದ ಈ ನಟ ಅಂದ್ರೆ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಕೀರ್ತಿ ಮಾತಿಗೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ನಟಿ ಕೀರ್ತಿ ಸುರೇಶ್ ಅವರಿಗೆ ಚಿತ್ರರಂಗ ಹೊಸದಲ್ಲ. ಇವರ ತಂದೆ ಮತ್ತು ತಾಯಿ ಇಬ್ಬರು ಕೂಡ ಚಿತ್ರರಂಗದಲ್ಲೇ ಗುರುತಿಸಿಕೊಂಡಿರುವವರು. ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಅವರು 80ರ ದಶಕದಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದ ಸ್ಟಾರ್ ನಟಿ. ಕನ್ನಡದಲ್ಲಿಯೂ ಒಂದು ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಅದು ಡಾ. ರಾಜ್ ಕುಮಾರ್ ಅವರ ಜೊತೆಗಿನ ಸಮಯದ ಗೊಂಬೆ ಸಿನಿಮಾ. ಈ ಸಿನಿಮಾದ ಕೋಗಿಲೆ ಹಾಡಿದೆ ಕೇಳಿದೆಯಾ ಹಾಡನ್ನು ಯಾರು ಮರೆಯಲು ಸಾಧ್ಯವಿಲ್ಲ. ಡಾ. ರಾಜ್ ಕುಮಾರ್ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದವರು ಮೇನಕಾ ಸುರೇಶ್. ಶ್ರೀನಾಥ್ ಅವರ ಜೋಡಿಯಾಗಿ, ಅಣ್ಣಾವ್ರ ತಂಗಿಯಾಗಿ ಬಹಳ ಮುದ್ದಾದ ಪಾತ್ರದಲ್ಲಿ ನಟಿಸಿದ್ದರು.

ನಿರ್ದೇಶಕ ದೊರೈ ಭಗವಾನ್ ಅವರು ಹೇಳಿದ ಹಾಗೆ, ಸಮಯದ ಗೊಂಬೆ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಅವರ ಜೊತೆಗೆ ನಟಿಸುವ ಅವಕಾಶ ಎಂದ ತಕ್ಷಣವೇ ಮೇನಕಾ ಸುರೇಶ್ ಅವರು ಬಹಳ ಸಂತೋಷದಿಂದ ಒಪ್ಪಿಕೊಂಡು ನಟಿಸಲು ಬಂದರಂತೆ. ಕೀರ್ತಿ ಸುರೇಶ್ ಕೂಡ ಅದೇ ರೀತಿ, ಅಮ್ಮನ ಹಾಗೆಯೇ ಒಳ್ಳೆಯ ಗುಣ ಸ್ವಭಾವ ಹೊಂದಿರುವವರು ಕೀರ್ತಿ. ಇವರನ್ನು ಕಂಡರೆ ಎಲ್ಲರಿಗೂ ಇಷ್ಟ ಆಗುತ್ತದೆ, ಅಷ್ಟು ಒಳ್ಳೆಯ ಸ್ವಭಾವ, ಗುಣ ಹೊಂದಿರುವವರು ಕೀರ್ತಿ ಸುರೇಶ್. ಇವರ ತಂದೆ ಸುರೇಶ್ ಅವರು ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವವರು. ಮದುವೆಯ ನಂತರ ಕೀರ್ತಿ ಸುರೇಶ್ ಅವರ ತಾಯಿ ನಟಿಸಿದ್ದು ಬಹಳ ಕಡಿಮೆ. ಇನ್ನು ಕೀರ್ತಿ ಸುರೇಶ್ ಅವರಿಗೆ ಒಬ್ಬರು ಅಕ್ಕ ಇದ್ದಾರೆ, ಅವರ ಹೆಸರು ರೇವತಿ. ರೇವತಿ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ..
ಇನ್ನು ಮೇನಕಾ ಸುರೇಶ್ ಅವರ ತಾಯಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೀರ್ತಿ ಸುರೇಶ್ ಅವರ ಕುಟುಂಬದ ಮೂರು ತಲೆಮಾರು ಇದೇ ಫೀಲ್ಡ್ ನಲ್ಲಿದೆ ಎಂದು ಹೇಳಬಹುದು. ಕೀರ್ತಿ ಅವರು ನಟನೆ ಶುರು ಮಾಡಿದ್ದು ತಮಿಳು ಚಿತ್ರರಂಗದಿಂದ. ಆದರೆ ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಸಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೂರು ಭಾಷೆಯ ಸ್ಟಾರ್ ಹೀರೋಗಳ ಜೊತೆಗೆ ಅಭಿನಯಿಸಿದ್ದಾರೆ ಕೀರ್ತಿ. ಚಿರಂಜೀವಿ ಅವರಿಂದ ಹಿಡಿದು, ನಟ ನಾನಿ, ತಮಿಳಿನಲ್ಲಿ ನಟ ವಿಜಯ್, ಸೂರ್ಯ, ಸೂಪರ್ ಸ್ಟಾರ್ ರಜನಿಕಾಂತ್ ಇವರೆಲ್ಲರ ಜೊತೆಗು ನಟಿಸಿದ್ದಾರೆ. ಇವರಿಗೆ ಅತಿ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಮಹಾನಟಿ ಸಿನಿಮಾ .

ಇದು 50, 60 ಹಾಗೂ 70ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಸ್ಟಾರ್ ನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನಿಮಾ. ಮಹಾನಟಿ ಸಿನಿಮಾ ತೆಲುಗು, ತಮಿಳು ಮತ್ತು ಮಲಯಾಳಂ ಮೂರು ಭಾಷೆಯಲ್ಲಿ ಕೂಡ ತೆರೆಕಂಡಿತ್ತು. ಮಹಾನಟಿ ಸಾವಿತ್ರಿ ಅವರ ಪಾತ್ರದಲ್ಲಿ ಕೀರ್ತಿ ಸುರೇಶ್ ಅಭಿನಯಿಸಿದ್ದರು. ಕೆಲವೊಂದು ಫ್ರೆಮ್ ಗಳಲ್ಲಿ ಡಿಟ್ಟೋ ಸಾವಿತ್ರಿ ಅವರ ಹಾಗೆಯೇ ಕಾಣಿಸುತ್ತಿದ್ದರು ಎಂದು ಹೇಳಿದರೂ ತಪ್ಪಲ್ಲ. ಅಷ್ಟು ಚೆನ್ನಾಗಿತ್ತು ಕೀರ್ತಿ ಸುರೇಶ್ ಅವರ ಅಭಿನಯ. ಈ ಸಿನಿಮಾದ ಅದ್ಬುತ ಅಭಿನಯಕ್ಕೆ ಇವರಿಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತು. ಚಿಕ್ಕ ವಯಸ್ಸಿಗೆ ಸಾಧನೆ ಮಾಡಿದ ನಟಿ ಕೀರ್ತಿ ಸುರೇಶ್. ಹೆಚ್ಚು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಸಹ ಇವರು ನಟಿಸಿದ್ದಾರೆ. ಕೀರ್ತಿ ಅವರಿಗೆ ಈ ಕಾರಣಕ್ಕೆ ಹೆಚ್ಚು ಫ್ಯಾನ್ ಬೇಸ್ ಕೂಡ ಇದೆ.

ಇನ್ನು ಕೀರ್ತಿ ಸುರೇಶ್ ಅವರ ಮದುವೆ ಇತ್ತೀಚೆಗೆ ನಡೆಯಿತು. 15 ವರ್ಷಗಳಿಂದ ಪರಿಚಯವಾಗಿ, ಪ್ರೀತಿ ಮಾಡುತ್ತಿದ್ದ ಆಂಟೋನಿ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಕೀರ್ತಿ. ಈ ಜೋಡಿಯ ಮದುವೆ ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಪ್ರಕಾರ ನಡೆಯಿತು. ಇವರಿಬ್ಬರ ಮದುವೆಗೆ ಚಿತ್ರರಂಗದ ಸ್ಟಾರ್ ಗಳು ಬಂದು ಹರಸಿದ್ದರು. ದಾಂಪತ್ಯ ಜೀವನದ ಜೊತೆಗೆ ಕೀರ್ತಿ ಸುರೇಶ್ ಅವರು ಅಭಿನಯಿಸಿದ ಮೊದಲ ಹಿಂದಿ ಸಿನಿಮಾ ಕೂಡ ತೆರೆಕಂಡು, ಬಾಲಿವುಡ್ ಎಂಟ್ರಿ ಕೂಡ ಬರ್ಜರಿಯಾಗಿತ್ತು. ಒಟ್ಟಿನಲ್ಲಿ ಕೀರ್ತಿ ಸುರೇಶ್ ಅವರ ಜೀವನದಲ್ಲಿ ಕಳೆದ ಕೆಲವು ತಿಂಗಳುಗಳು ಅದ್ಭುತವಾಗಿ ಸಾಗಿದೆ. ಇದೀಗ ಇವರು ಕರ್ನಾಟಕದ ರಾಯಚೂರಿಗೆ ಬಂದಿದ್ದಾರೆ.
ಕೀರ್ತಿ ಸುರೇಶ್ ಅವರು ಕರ್ನಾಟಕದ ರಾಯಚೂರಿಗೆ ಬಂದಿರುವುದು ಅಲ್ಲಿನ ಒಂದು ಮಾಲ್ ಉದ್ಘಾಟನೆಗಾಗಿ. ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಇಲ್ಲಿನ ಬಗ್ಗೆ ಹೆಮ್ಮೆಯಿಂದ ಸಂತೋಷದಿಂದ ಮಾತನಾಡಿದ್ದಾರೆ. ನನ್ನ ತಾಯಿ ಕನ್ನಡ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಅವರ ಜೊತೆಗೆ ನಟಿಸಿದ್ದಾರೆ, ನಾನು ಡಾ. ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ, ಕರ್ನಾಟಕದ ಬಗ್ಗೆ ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿರುವ ಕೀರ್ತಿ ಸುರೇಶ್ ಅವರು ಕನ್ನಡದಲ್ಲಿ ತಮ್ಮ ಮೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರು ಎಂದಿದ್ದಾರೆ. ಹಾಗೆಯೇ ಒಳ್ಳೆಯ ಕಥೆ ಹಾಗೂ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿಯು ಕನ್ನಡದಲ್ಲಿ ನಟಿಸುತ್ತೇನೆ ಎಂದು ಸಹ ಹೇಳಿದ್ದಾರೆ. ಅಪ್ಪು ಅವರು ಇವರ ಫೇವರೆಟ್ ನಟ ಎಂದು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..

ಕೀರ್ತಿ ಸುರೇಶ್ ಅವರು ಅಪ್ಪು ಅವರು ಇದ್ದ ಸಮಯದಲ್ಲೇ, ಟ್ವಿಟರ್ ನಲ್ಲಿ ಅಭಿಮಾನಿ ಒಬ್ಬರು ಕನ್ನಡದಲ್ಲಿ ನಿಮ್ಮ ಮೆಚ್ಚಿನ ನಟ ಯಾರು ಎಂದು ಕೇಳಿದಾಗ, ಪುನೀತ್ ಸರ್ ಎಂದು ಹೇಳಿದ್ದರು. ಆಗಿನಿಂದ ಕೀರ್ತಿ ಅವರಿಗೆ ಕನ್ನಡದಲ್ಲಿ ಹೆಚ್ಚು ಫ್ಯಾನ್ಸ್ ಇದ್ದಾರೆ ಎಂದು ಹೇಳಬಹುದು. ಈಗಲೂ ಸಹ ಅದು ಮುಂದುವರೆದಿದೆ. ಇನ್ನು ಈಗಷ್ಟೇ ಮದುವೆ ಆಗಿರುವ ಕೀರ್ತಿ ಅವರು, ತಮ್ಮ ವೈವಾಹಿಕ ಜೀವನ ಚೆನ್ನಾಗಿ ಸಾಗುತ್ತಿದೆ, ಒಂದೆರಡು ಸಿನಿಮಾಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ, ಇನ್ನು ಕೆಲವು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿದ್ದೇನೆ ಎಂದು ತಮ್ಮ ಕೆರಿಯರ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ರಾಯಚೂರಿನಲ್ಲಿ ಕೀರ್ತಿ ಸುರೇಶ್ ಅವರನ್ನು ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.