ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಮದುವೆಯಾದರು, ಮದುವೆಯಾದ ಕೆಲವೇ ದಿನಕ್ಕೆ ಅವರ ಸಿನಿಮಾ ಬಿಡುಗಡೆ ಇದ್ದ ಕಾರಣ ಕೀರ್ತಿ ಅವರು ಸಿನಿಮಾ ಪ್ರೊಮೋಷನ್ ಗಳಲ್ಲಿ ಬ್ಯುಸಿ ಆದರು. ಹಲವು ಇಂಟರ್ವ್ಯೂಗಳಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆಯ ಜೀವನದ ಬಗ್ಗೆ ತಮ್ಮ ಪತಿ ಆಂಟೋನಿ ತಟ್ಟಿಲ್ ಅವರ ಬಗ್ಗೆ, ಅವರೊಡನೆ ಪ್ರೇಮಾಂಕುರವಾದ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ ಕೀರ್ತಿ. ಇವರ ಲವ್ ಸ್ಟೋರಿ ಬಹಳ ಇಂಟರೆಸ್ಟಿಂಗ್ ಆಗಿದೆ. ಕೇಳಿದರೆ ಯಾವುದೇ ಸಿನಿಮಾ ಕಥೆಗೆ ಕಮ್ಮಿ ಅನ್ನಿಸದೇ ಇರದು..

ಕೀರ್ತಿ ಸುರೇಶ್ ಹಾಗೂ ಅವರ ಪತಿ ಆಂಟೋನಿ ಓದುತ್ತಿದ್ದದ್ದು ಒಂದೇ ಶಾಲೆಯಲ್ಲಿ. ಆಗಿನಿಂದಲೇ ಆಂಟೋನಿ ಅವರನ್ನು ಕಂಡರೆ ಕೀರ್ತಿ ಅವರಿಗೆ ಇಷ್ಟವಿತ್ತು. ಕೀರ್ತಿ ಅವರೇ ಆಂಟೋನಿ ಅವರ ಬಳಿ ನಿನಗೆ ಧೈರ್ಯ ಇದ್ದರೆ ಪ್ರೊಪೋಸ್ ಮಾಡು ಎಂದು ಹೇಳಿದ್ದರಂತೆ, ಆ ಮಾತನ್ನು ಕೇಳಿ ಪ್ರೊಪೋಸ್ ಮಾಡಿದ್ದರಂತೆ ಆಂಟೋನಿ. 2010ರಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರಂತೆ. ಇವರಿಬ್ಬರು ಮಾತಾಡೋಕೆ ಶುರು ಮಾಡಿದ್ದು, ಆರ್ಕುಟ್ ನಲ್ಲಿ, ಒಂದು ತಿಂಗಳ ಕಾಲ ಆರ್ಕುಟ್ ನಲ್ಲಿ ಚಾಟ್ ಮಾಡಿದ ನಂತರ ಒಮ್ಮೆ ಅಚಾನಕ್ ಆಗಿ ಒಂದು ರೆಸ್ಟೋರೆಂಟ್ ನಲ್ಲಿ ಭೇಟಿಯಾದರಂತೆ. ಆಗ ಕೀರ್ತಿ ಸುರೇಶ್ ಅವರ ಫ್ಯಾಮಿಲಿ ಕೂಡ ಜೊತೆಗೆ ಇತ್ತಂತೆ.
ಬಳಿಕ ಕೀರ್ತಿ ಸುರೇಶ್ 12ನೇ ತರಗತಿಯಲ್ಲಿ ಓದುವಾಗ ಆಂಟೋನಿ ಅವರು ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದರಂತೆ, ಆಗಿನಿಂದಲೂ ಇಬ್ಬರು ಲವ್ ಮಾಡುತ್ತಿದ್ದರಂತೆ. ಇಬ್ಬರು ಅಧಿಕೃತವಾಗಿ ಡೇಟಿಂಗ್ ಅಂತ ಶುರು ಮಾಡಿದ್ದು 2016ರಲ್ಲಿ, ಆಂಟೋನಿ ಅವರು ತಮಗೆ ಕೊಟ್ಟ ಮೊದಲ ರಿಂಗ್ ಅನ್ನು ಇನ್ನು ಕೈಯಿಂದ ತೆಗೆದಿಲ್ಲ ಕೀರ್ತಿ ಅವರು. ಹಾಗೆಯೇ ಕೋವಿಡ್ ಸಮಯದಲ್ಲಿ ಇಬರಿಬ್ಬರ ನಡುವೆ ಇದ್ದ ಬಾಂಧವ್ಯ ಮತ್ತು ಇನ್ನು ಹೆಚ್ಚಾಯಿಯಂತೆ. ಈ ರೀತಿಯಾಗಿ ಇವರಿಬ್ಬರು ಲವ್ ಮಾಡಿ, ತಮ್ಮ ರಿಲೇಶನ್ಷಿಪ್ ಅನ್ನು ಮೆಚ್ಯುರ್ ಆಗಿ ಹ್ಯಾಂಡಲ್ ಮಾಡಿ, ಈ ವರ್ಷ ಮದುವೆಯಾಗಿದ್ದಾರೆ. ತಮ್ಮಿಬ್ಬರ ಕುಟುಂಬವನ್ನು ಒಪ್ಪಿಸಿ ಮದುವೆ ಆಗಿರುವುದು ವಿಶೇಷ..

ಡಿಸೆಂಬರ್ 12ರಂದು ಈ ಜೋಡಿಯ ಮದುವೆ ಗೋವಾದಲ್ಲಿ ನಡೆಯಿತು. ಒಂದು ಕನಸಿನ ಹಾಗೆ ಇವರ ಮದುವೆ ಇತ್ತು ಎಂದು ಹೇಳಿದರು ಸಹ ತಪ್ಪಲ್ಲ. ಕೀರ್ತಿ ಸುರೇಶ್ ಅವರು ತಂದೆ ಮನೆಯ ಹಾಗೆ ಹಿಂದೂ ಬ್ರಾಹ್ಮಣ ಸಂಪ್ರದಾಯದ ಅನುಸಾರ ಶಾಸ್ತ್ರೋಕ್ತವಾಗಿ ಮದುವೆ ನಡೆಯಿತು, ಬಳಿಕ ಆಂಟೋನಿ ಅವರ ಕುಟುಂಬದ ಅನುಸಾರ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಸಹ ಮದುವೆ ನಡೆಯಿತು. ಇವರಿಬ್ಬರ ಮದುವೆಗೆ ಚಿತ್ರರಂಗದ ಗಣ್ಯರು, ಇವರ ಸ್ನೇಹಿತರು ಎಲ್ಲರೂ ಬಂದು ವಿಶ್ ಮಾಡಿ, ಹೊಸ ದಂಪತಿಗಳನ್ನು ಹರಸಿ ಹಾರೈಸಿದ್ದಾರೆ. ಇದೀಗ ಮ್ಯಾರಿಡ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ ಕೀರ್ತಿ ಸುರೇಶ್.
ಪ್ರಸ್ತುತ ಕೀರ್ತಿ ಸುರೇಶ್ ಅವರು ಕೆಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಈ ಸಿನಿಮಾ ಕೆಲಸಗಳು ಮುಗಿದ ನಂತರ ಕೀರ್ತಿ ಸುರೇಶ್ ಅವರು ಸಿನಿಮಾ ಇಂದ ಕೆಲ ಸಮಯ ಬ್ರೇಕ್ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.. ಕೀರ್ತಿ ಸುರೇಶ್ ಅವರು ಸಂಸಾರದ ಬಗ್ಗೆ ಸಹ ಗಮನ ಹರಿಸಬೇಕು ಎಂದು ಹೇಳಲಾಗುತ್ತಿದೆ. ಇನ್ನು ಕೀರ್ತಿ ಸುರೇಶ್ ಅವರು ಸಿನಿಮಾ ವಿಚಾರದಲ್ಲಿ ಕೀರ್ತಿ ಸುರೇಶ್ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಗೆ ಸಹ ಎಂಟ್ರಿ ಕೊಟ್ಟಿದ್ದಾರೆ ಕೀರ್ತಿ. ಮುಂದಿನ ದಿನಗಳಲ್ಲಿ ಇವರ ಕೆರಿಯರ್ ಇನ್ನು ಯಾವ ಹೈಟ್ ತಲುಪುತ್ತದೆ ಎಂದು ಕಾದು ನೋಡಬೇಕಿದೆ.