ಕಿರುತೆರೆ ಹಾಗೂ ಹಿರಿತೆರೆ ಎರಡು ಕಡೆ ಗುರುತಿಸಿಕೊಂಡ ಕಲಾವಿದರು ನಟ ಕಾರ್ತಿಕ್ ಮಹೇಶ್ ಮತ್ತು ನಟಿ ನಮ್ರತಾ ಗೌಡ. ಇವರಿಬ್ಬರು ಕೂಡ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಇಬ್ಬರ ನಡುವೆ ಯಾವುದೇ ಸ್ನೇಹ ಇರಲಿಲ್ಲ. ಆದರೆ ಕೊನೆಯ ವೇಳೆಗೆ ಸಂಗೀತ ಅವರಿಂದ ದೂರವಾಗಿದ್ದ ಕಾರ್ತಿಕ್ ಅವರು ಕ್ಲೋಸ್ ಆಗಿದ್ದು, ನಮ್ರತಾ ಅವರ ಜೊತೆಗೆ. ಇಬ್ಬರು ಬಹಳ ಸಲುಗೆ ಇಂದ ಇರುತ್ತಿದ್ದರು. ಇವರಿಬ್ಬರ ಫೋಟೋಸ್ ಗಳನ್ನು ಟ್ರೋಲ್ ಪೇಜ್ ಗಳಲ್ಲಿ ಹಾಕಿ ಟ್ರೋಲ್ ಮಾಡಲಾಗಿತ್ತು. ಇದೀಗ ಈ ಜೋಡಿ ಮತ್ತೆ ಸುದ್ದಿಯಾಗಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಕಾರ್ತಿಕ್ ಮತ್ತು ನಮ್ರತಾ ಇಬ್ಬರು ಲವ್ವಿ ಡವ್ವಿ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು, ಟ್ರೋಲ್ ಸಹ ಆಗಿದ್ದರು. ಕಾರ್ತಿಕ್ ಹುಡುಗಿಯರ ಹಿಂದೆ ಬಿದ್ದಿದ್ದಾರೆ ಎಂದು ಕೂಡ ಹೇಳಲಾಗುತ್ತಿತ್ತು. ಇನ್ನು ನಮ್ರತಾ ಅವರು ಸಹ ಟ್ರೋಲ್ ಆಗಿದ್ದರು. ಹೊರಗಡೆ ಬಂದ ಮೇಲೆ ಇವರಿಬ್ಬರ ಸ್ನೇಹ ಅದೇ ರೀತಿ ಮುಂದುವರೆದಿತ್ತು. ಕಾರ್ತಿಕ್ ಮತ್ತು ನಮ್ರತಾ ಇಬ್ಬರು ಸಹ ಬಿಗ್ ಬಾಸ್ ಬೇರೆ ಸ್ಪರ್ಧಿಗಳ ಜೊತೆಗೆ ಹೊರಗಡೆ ಸಹ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರು ಜೊತೆಯಾಗಿ ಒಂದು ಜಾಹೀರಾತಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈಗ ಇಬ್ಬರು ಭುರ್ಜ್ ಖಲೀಫಾ ಎದುರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ನಮ್ರತಾ ಇಬ್ಬರು ಒಂದೇ ಜಾಗದಲ್ಲಿ ಬೇರೆ ಬೇರೆಯಾಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಒಂದೇ ಸಮಯಕ್ಕೆ ಪೋಸ್ಟ್ ಮಾಡಿದ್ದಾರೆ ಕೂಡ. ಹಾಗೆಯೇ ಭುರ್ಜ್ ಖಲೀಫಾದಲ್ಲಿ ಒಂದೇ ಬಣ್ಣದ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದಾರೆ ಕಾರ್ತಿಕ್ ಮತ್ತು ನಮ್ರತಾ. ನಮ್ರತಾ ಅವರು ಫೋಟೋಸ್ ಪೋಸ್ಟ್ ಮಾಡಿದ್ದರೆ, ಕಾರ್ತಿಕ್ ಅವರು ರೀಲ್ಸ್ ಅಪ್ಲೋಡ್ ಮಾಡಿದ್ದಾರೆ. ಇಬ್ಬರ ಭುರ್ಜ್ ಖಲೀಫಾ ಫೋಟೋ ಮತ್ತು ವಿಡಿಯೋ ನೋಡಿರುವ ಫ್ಯಾನ್ಸ್, ಇಬ್ಬರು ಜೊತೆಯಾಗಿ ಫೋಟೋ ಪೋಸ್ಟ್ ಮಾಡಬೇಕಿತ್ತು ಎಂದು ಬಯಸುತ್ತಿದ್ದಾರೆ.
ಹಾಗೆಯೇ ಇವರಿಬ್ಬರ ಮಧ್ಯೆ ಲವ್ ಏನಾದರು ನಡೆಯುತ್ತಿದೆಯಾ? ಇಬ್ಬರು ಜೊತೆಯಾಗಿ ಭುರ್ಜ್ ಖಲೀಫಾಗೆ ಹೋಗಿದ್ದಾರಾ? ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ. ಆದರೆ ಈ ಬಗ್ಗೆ ನಮ್ರತಾ ಅವರಾಗಲಿ, ಕಾರ್ತಿಕ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರು ತಮ್ಮ ಪಾಡಿಗೆ ಲೈಫ್ ಎಂಜಾಯ್ ಮಾಡುತ್ತಾ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ನಮ್ರತಾ ಅವರೊಡನೆ ಹೆಚ್ಚಾಗಿ ಸಮಯ ಕಳೆಯುತ್ತಾ, ಫ್ಲರ್ಟ್ ಮಾಡುವುದಕ್ಕೂ ಪ್ರಯತ್ನ ಪಡುತ್ತಿದ್ದರು ಕಾರ್ಥಿಕ್. ಇಬ್ಬರು ಆ ರೀತಿ ಮಾತನಾಡುವುದನ್ನ ವೀಕ್ಷಕರು ಸಹ ನೋಡಿದ್ದರು. ಇಬ್ಬರ ಫೋಟೋಸ್ ಹಾಕಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದು ಕೂಡ ತುಂಬಾ ಇದೆ.
ಹಾಗಾಗಿ ಈ ಫೋಟೋಸ್ ನೋಡಿದ ನೆಟ್ಟಿಗರು ಮತ್ತೆ ಅದೇ ಥರ ಗಾಸಿಪ್ ಶುರು ಮಾಡುತ್ತಿದ್ದಾರೆ. ಇದರಲ್ಲಿ ಎಷ್ಟು ನಿಜವಿದೆಯೋ, ಎಷ್ಟು ಸುಳ್ಳಿದೆಯೋ ಗೊತ್ತಿಲ್ಲ.. ಜೊತೆಗೆ ಕಾರ್ತಿಕ್ ಮತ್ತು ನಮ್ರತಾ ಇಬ್ಬರು ಸಹ ತಮ್ಮ ಸ್ನೇಹದ ಬಗ್ಗೆ ಅಥವಾ ಇನ್ಯಾವುದೇ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದು ಇಲ್ಲ. ಇನ್ನು ಕಲಾವಿದರು ಎಂದಮೇಲೆ ಅವರ ಬಗ್ಗೆ ಈ ಥರ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತದೆ. ಹಾಗಾಗಿ ಅವರುಗಳೇ ತಮ್ಮ ನಡುವೆ ಏನಿದೆ ಎಂದು ಬಹಿರಂಗವಾಗಿ, ಎಲ್ಲರ ಜೊತೆಗೆ ಹಂಚಿಕೊಳ್ಳುವ ವರೆಗು ಕೂಡ ಅಭಿಮಾನಿಗಳು ಮತ್ತು ನೆಟ್ಟಿಗರು ಎಲ್ಲರೂ ಕೂಡ ಕಾಯಬೇಕಿದೆ.