ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಕರ್ನಾಟಕ ಇನ್ನೂ ಕೇವಲ 31 ವರ್ಷದೊಳಗೆ ಮೂರು ಭಾಗವಾಗುತ್ತದೆ. ಕರ್ನಾಟಕಕ್ಕೆ ಮೂರು ಮುಖ್ಯಮಂತ್ರಿ ಹಾಗೂ ಮೂರು ರಾಜ್ಯಪಾಲರಾಗುತ್ತಾರೆ. ಇದು ಶಿವನ ಸಾಕ್ಷಿಯಾಗಿಯೂ ಸತ್ಯ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದಾರೆ. ಹಾಸನಾಂಬೆ ದೇವಿಯ ದರ್ಶನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮಾಂಡ ಗುರೂಜಿ ದೇಶದ ಬಗ್ಗೆ ಮಾತನಾಡಿದರೆ ನಾವು ಟ್ರೋಲ್ ಆಗುತ್ತೀವಿ.
ಪಾರ್ಲಿಮೆಂಟ್ ಕಟ್ಟಿರುವುದು ಗೋಲ ಅಥವಾ ಚಂದ್ರ ಆಕಾರದಲ್ಲಿರಬೇಕು ತ್ರಿಕೋನ ಆಕಾರದಲ್ಲಿ ಇರಬಾರದು. ಇನ್ನೂ ಮುಂದೆ ದೇಶದಲ್ಲಿ ಸಾಕಷ್ಟು ಜನರಿಗೆ ತೊಂದರೆಯಾಗಲಿದೆ. ಡಿಸೆಂಬರ್ ಅಂತ್ಯದ ಸಮಯದಲ್ಲಿ ಐದು ಗ್ರಹಗಳು ಒಟ್ಟಿಗೆ ಇರುತ್ತದೆ,ಒಂಬತ್ತು ತಿಂಗಳು ಒಂದಾಗಲಿದ್ದು ಎರಡು ಗ್ರಹಣ ಈ ಬಾರಿ ಸಂಭವಿಸಲಿದೆ. ಈ ಕಾರಣಕ್ಕೆ ಈ ಬಾರಿ ಕರ್ನಾಟಕಕ್ಕೆ ಗಂಡಾತರ ಎದುರಾಗಲಿದ್ದು, ಜನರ ಪಾಲಿಗೆ ಸಂಕಷ್ಟ ದಿನಗಳು ಕಾಡಲಿದೆ. ನೀರಿನ ಕೊರತೆ, ಬೆಂಕಿ ಅವಘಡ, ಘರ್ಷಣೆ, ಗಲಾಟೆ ಇನ್ನಿತರ ಕಹಿ ಘಟನೆ ನಡೆಯಲಿದ್ದು, ದೇವರ ಮೇಲೆ ಆಣೆ ಮಾಡಿ ನಾನು ಹೇಳುತ್ತೇನೆ 31 ವರ್ಷದೊಳಗೆ ಕರ್ನಾಟಕ 3 ಭಾಗವಾಗುತ್ತದೆ. ಮೂರು ಮುಖ್ಯಮಂತ್ರಿ ಹಾಗೂ ಮೂರು ರಾಜ್ಯಪಾಲರ ಆಳ್ವಿಕೆ ಕರ್ನಾಟಕದಲ್ಲಿ ಪ್ರಾರಂಭವಾಗಲಿದೆ ಎಂದಿದ್ದಾರೆ.31 ವರ್ಷದ ನಂತರ ಹೇಗೆ ಆಗುತ್ತೆ ಎಂದು ನಾನು ಹೇಳುತ್ತಿರುವ ಮಾತಲ್ಲ ಕೈವಾರ ತಾತಯ್ಯ, ಮಂಟೆ ಸ್ವಾಮಿ, ವೀರ ಬ್ರಮ್ಮಯ್ಯ ಶಾಸನ ಬರೆದಿದ್ದಾರೆ. ಹಾಗಾಗಿ ಈ ವಿಚಾರಗಳು ನಡೆಯುವುದು ಸತ್ಯ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿಯ ಮುಖ್ಯಮಂತ್ರಿ ಸ್ಥಾನಕ್ಕೂ ಸಾಕಷ್ಟು ಗೊಂದಲ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಸದಾ ಒಂದಲ್ಲ ಒಂದು ವಿವಾದ ಮೂಲಕ ಸುದ್ದಿಯಾಗುತ್ತಿದ್ದ ಬ್ರಹ್ಮಾಂಡ ಗುರೂಜಿ ಈಗ ಭವಿಷ್ಯ ನುಡಿಯುವ ಮೂಲಕ ಇನ್ನಷ್ಟು ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿಯ ಚುನಾವಣೆಯಲ್ಲೂ ಕೂಡ ಸಾಕಷ್ಟು ಏರುಪೇರು ಆಗಲಿದ್ದು ಮುಖ್ಯಮಂತ್ರಿ ಆಯ್ಕೆ ಕೂಡ ಅಷ್ಟು ಸುಲಭದ ಮಾತಲ್ಲ ಎಂದು ಹೇಳಿಕೆ ಕೊಡುವ ಮುಖಾಂತರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದರೆ, ಈಗಾಗಲೇ ಕಾಂಗ್ರೆಸ್ ಸರ್ಕಾರ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಪಕ್ಷದವರು ಸಂಕಲ್ಪ ಯಾತ್ರೆ ಕೈಗೊಂಡಿರುವ ಬೆನ್ನಲ್ಲೇ ಬ್ರಹ್ಮಾಂಡ ಗುರೂಜಿಯ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ಸಿಎಂ ಯಾರಾಗುತ್ತಾರೆ ಎನ್ನುವ ಪ್ರಶ್ನೆ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ. ಅಷ್ಟೇ ಅಲ್ಲದೆ ಇನ್ನೂ 31 ವರ್ಷದ ಒಳಗೆ ಕರ್ನಾಟಕ 3 ಭಾಗವಾಗುತ್ತದೆ ಎನ್ನುವ ಸುದ್ದಿ ನಿಜಕ್ಕೂ ಜನರನ್ನ ಆಶ್ಚರ್ಯಗೊಳಿಸಿದೆ. ದೆಹಲಿಯಲ್ಲಿ ಪೊರಕೆ ಹಿಡಿದುಕೊಂಡು ಗುಡಿಸಿದ ಒಂದು ಪಾರ್ಟಿ ಇದೀಗ ಪಂಜಾಬ್,ಗುಜರಾತ್ ಒಂದಿಷ್ಟು ಗುಡಿಸಿದೆ ಈ ಪಾರ್ಟಿಗೆ ಮುಂದೊಂದು ದಿನ ಭವಿಷ್ಯವಿದೆ ಎನ್ನುವುದಾಗಿ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದು, ಮುಂಬರುವ ದಿನಗಳಲ್ಲಿ ಅನೇಕ ಪ್ರಕೃತಿ ವಿಕೋಪ ಸಂಭವಿಸಲಿದೆ ಎನ್ನುವ ಬಗ್ಗೆಯೂ ಈಗಾಗಲೇ ಮುನ್ಸೂಚನೆ ನೀಡಿದ್ದಾರೆ.
ಒಟ್ಟಾರೆ ಇಷ್ಟು ದಿನ ಸೈಲೆಂಟ್ ಆಗಿ ಕುಳಿತಿದ್ದ ಬ್ರಹ್ಮಾಂಡ ಗುರೂಜಿ ಇದೀಗ ಮತ್ತೆ ಭವಿಷ್ಯ ನುಡಿಯುವ ಮೂಲಕ ಅನೇಕ ಜನರಿಗೆ ಆಶ್ಚರ್ಯ ಮೂಡಿಸಿದ್ದು, ನೆಟ್ಟಿಗರು ಈ ಬಗ್ಗೆ ಸಾಕಷ್ಟು ಆಕ್ರೋಶಗಳನ್ನು ಹೊರ ಹಾಕಿದ್ದಾರೆ. ಹಾಗಾದ್ರೆ ಗುರೂಜಿ ಮಾತು ಸತ್ಯ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.