ನಟಿ ಸಪ್ತಮಿ ಗೌಡ ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಅದರಲ್ಲಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ ಅವರು ಲೀಲಾ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಫಾರೆಸ್ಟ್ ಗಾರ್ಡ್ ಲೀಲಾ ಆಗಿ ಕಾಣಿಸಿಕೊಂಡಿರುವ ಸಪ್ತಮಿ ಗೌಡ ಕರಾವಳಿ ಚೆಲುವೆಯಾಗಿ ಮಿಂಚಿದ್ದಾರೆ. ಲುಕ್ ಟೆಸ್ಟ್ ಮಾಡಿದಾಗ ರಿಷಬ್ ಶೆಟ್ಟಿ ಅವರು ಲುಕ್ ಒಪ್ಪಿಕೊಂಡರು ಆದರೆ ಸಮಸ್ಯೆ ಇದ್ದದ್ದು ನನ್ನ ಭಾಷೆಯಲ್ಲಿ. ಸಪ್ತಮಿ ಮತ್ತು ಲೀಲಾಗೆ ತುಂಬಾ ವ್ಯತ್ಯಾಸವಿದೆ. ಲೀಲಾ ಪಾತ್ರವನ್ನು ನಾನು ಹೇಗೆ ಮಾಡಿದೆ ಎಂದು ಗೊತ್ತಿಲ್ಲ. ಲೀಲಾ ತುಂಬಾ ಸೈಲೆಂಟ್, ಜಾಸ್ತಿ ಮಾತನಾಡುವುದು ಇಷ್ಟ ಇದ್ದವರು ಸೇಫ್ ಇರುವವರ ಜೊತೆ ಮಾತ್ರ.ಈ ಪಾತ್ರವನ್ನು ನಾನು ಹೇಗೆ ಕ್ರ್ಯಾಕ್ ಮಾಡುತ್ತೀನಿ ಅನ್ನೋದು ಚಾಲೆಂಜ್ ಆಗಿತ್ತು’ ಎಂದು ಸಪ್ತಮಿ ಗೌಡ ಖಾಸಗಿ ಯೂಟ್ಯೂಬ್ವೊಂದರಲ್ಲಿ ಮಾತನಾಡಿದ್ದಾರೆ

ಹೆಣ್ಮಕ್ಕಳು ಮೂಗು ಚುಚ್ಚಿಸಿ, ಕಿವಿ ಚುಚ್ಚಿಸಿ ಇದ್ದರೆ ಚೆನ್ನಾಗಿರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಸಿನಿಮಾ ಮಾಡೋ ತನಕ ಸಪ್ತಮಿ ಗೌಡ ಅವರು ಮೂಗು ಚುಚ್ಚಿಸಿಕೊಂಡಿರಲಿಲ್ಲ.
ಸಿನಿಮಾಗೋಸ್ಕರ ಸಪ್ತಮಿ ಅವರಿಗೆ ಎರಡೂ ಸೈಡ್ ಮೂಗು ಚುಚ್ಚಿಸಲಾಗಿದೆ. ಎಲ್ಲಾ ಫೋಟೋಗಳಲ್ಲಿಯೂ ಸಪ್ತಮಿ ಅವರ ಮೂಗುತಿಯೇ ಹೈಲೈಟ್. ರಿಷಬ್ ಸರ್ ಮೇಲೆ ನನಗೆ 100% ನಂಬಿಕೆ ಇತ್ತು. ಸಪ್ತಮಿ ನೀನು ಇದನ್ನು ಮಾಡಬೇಕು ಅಂತ ರಿಷಬ್ ಸರ್ ಹೇಳಿದ್ರು ಅಂದ್ರೆ ಸಾಕು ನಾನು ಮಾಡ್ತೀನಿ.
ಮೂಗು ಚುಚ್ಚಿಸಬೇಕು ಅಂದ್ರು ನಾನು ಸರಿ ಚುಚ್ಚಿಸುತ್ತೀನಿ ಅಂತ ಹೇಳಿದೆ. ಪರ್ಸನಲ್ ಮತ್ತು ಪ್ರೊಫೆಷನ್ ಅಗಿ ನಾನು ರಿಷಬ್ ಸರ್ ಮೇಲೆ ನನಗೆ ನಂಬಿಕೆ ಇದೆ. ಎರಡು ಕಡೆ ಚುಚ್ಚಿಸಿದ್ದರೆ ಚೆನ್ನಾಗಿ ಕಾಣಿಸುತ್ತಾ ಇಲ್ವೋ ಅನ್ನೋದು ಭಯ ಇತ್ತು ಒಂದು ಸತಿ ಫೋಟೋಶಾಪ್ ಮಾಡಿ ನೋಡೋಣ ಅಂದಿದ್ದರು ಅದಿಕ್ಕೆ ರಿಷಬ್ ಸರ್ ಏನ್ ಟ್ರೈಯಲ್ ಮಾಡುವುದು ಬೇಡ ಚೆನ್ನಾಗಿ ಕಾಣಿಸುತ್ತದೆ ಅಂತ ಹೇಳಿದ್ದರು. ನಾನು ಹೋಗಿ ಚುಚ್ಚಿಸಿಕೊಂಡು ಬಂದೆ. ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ನೋಡಿ ಸುಮಾರು ಜನ ಇಷ್ಟ ಪಟ್ಟಿದ್ದಾರೆ.
ಈಗ ಪಬ್ಲಿಕ್ನಲ್ಲಿ ಜನರು ನಮಗೂ ಆಸೆ ಅಗುತ್ತಿದೆ ಚುಚ್ಚಿಸಿಕೊಳ್ಳಬೇಕು ಅಂತ ಹೇಳುತ್ತಿದ್ದಾರೆ ಇದರ ಅರ್ಥ ನನ್ನನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ ಸಪ್ತಮಿ ಗೌಡ. ಈ ಶೂಟಿಂಗ್ ಸಂದರ್ಭವೇ ಬಹಳಷ್ಟು ಜನ ಸೆಟ್ನಲ್ಲಿ ಕಿವಿ ಚುಚ್ಚಿಸಿಕೊಂಡಿದ್ದರು ಎನ್ನುವುದನ್ನು ರಿಷಬ್ ರಿವೀಲ್ ಮಾಡಿದ್ದಾರೆ. ರಿಷಬ್ ಅವರೂ ಇದೇ ಸಂದರ್ಭ ಕಿವಿ ಚುಚ್ಚಿಸಿಕೊಂಡಿದ್ದರು ಎಂದಿದ್ದಾರೆ.