ಕೆಜಿಎಫ್ ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದ ಕನ್ನಡಿಗರ ಹೆಮ್ಮೆಯ ಚಿತ್ರ. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಇಡೀ ವಿಶ್ವದೇಲ್ಲೆಡೆ ಸಾಕಷ್ಟು ಹೆಸರು ಗಳಿಸಿತ್ತು. ರಾಕಿಂಗ್ ಸ್ಟಾರ್ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಈ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರವಿ ಬಸ್ರೂರು ಅದ್ಭುತ ಮ್ಯೂಸಿಕ್ ಮೂಲಕ ಕೆಜಿಎಫ್ ದಾಖಲೆಯ ಹಣ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಕೆಜಿಎಫ್ ಚಾಪ್ಟರ್ ಒಂದು ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರ ಇದೀಗ ಜಪಾನ್ ಭಾಷೆಗೆ ಡಬ್ ಆಗಲಿದೆ. ಇದೆ ಬರುವ ಜುಲೈ 14 ರಂದು ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಜಪಾನ್ ಭಾಷೆಗೆಯಲ್ಲಿ ಬಿಡುಗಡೆಯಾಗಲಿದೆ.

ಹಾಗೇ ಈ ರೀತಿ ಡಬ್ ಆಗೋ ಮುಖಾಂತರ ಜಪಾನ್ ಭಾಷೆಯಲ್ಲಿ ಏಕಕಾಲಕ್ಕೆ ಸರಣಿ ಚಿತ್ರ ಡಬ್ಬಿಂಗ್ ಆಗುತ್ತಿರುವುದು ವಿಶೇಷ ಸಂಗತಿಯಾಗಿದೆ. ಈ ಚಿತ್ರದ ಡಬ್ಬಿಂಗ್ ಸಂಬಂಧಪಟ್ಟಂತೆ ಈಗಾಗಲೇ ಪ್ರಚಾರ ಕಾರ್ಯ ಕೂಡ ಜಪಾನ್ ನಲ್ಲಿ ಶುರುಮಾಡಲಿದೆ. ಕೆಜಿಎಫ್ ಚಿತ್ರ ಮಾಡುವ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಕನ್ನಡ ಚಿತ್ರ ಹೆಸರು ಮಾಡಿತ್ತು. ಇದೀಗ ಪ್ರಶಾಂತ್ ನೀಲ್ ಸಲಾರ್ ಚಿತ್ರದಲ್ಲಿ ತೊಡಗಿದ್ದು, ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಅಪಡೇಟ್ ಇನ್ನೂ ಸಿಕ್ಕಿಲ್ಲ. ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕಾತುರ ಕೂಡ ಅಭಿಮಾನಿಗಳನ್ನ ಕಾಡುತ್ತಿದೆ.
ಹೊಂಬಳೆ ಬ್ಯಾನರ್ ಅಡಿ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಬಹುಭಾಷೆಯಲ್ಲಿ ಬಿಡುಗಡೆಯನ್ನ ಕಂಡು ಬಾಲಿವುಡ್, ಟಾಲಿವುಡ್ ಅಂಗಳದಲ್ಲೂ ತನ್ನದೇಯಾದಂತ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ರಾಕಿಂಗ್ ಸ್ಟಾರ್ ಯಶ್ ಆಕ್ಷನ್ ಸಿಕ್ವೆನ್ಸ್ ಈ ಚಿತ್ರದ ಪ್ರಮುಖ ಹೈಲೈಟ್ಸ್ ಆಗಿದ್ದು, ವಿಶ್ವದಾದ್ಯಂತ ಸಾಕಷ್ಟು ಸದ್ದು ಮಾಡುವಲ್ಲಿ ಈ ಚಿತ್ರ ಯಶಸ್ಸನ್ನ ಕಂಡಿತ್ತು. ಬಿಗ್ ಬಜೆಟ್ ನಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ತಾನು ಹೂಡಿದ ಸಂಪೂರ್ಣ ಬಂಡವಾಳವನ್ನ ತೆಗೆಯುವಲ್ಲಿ ಯಶಸ್ವಿಯಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಪ್ರಯೋಗ ಮಾಡಲು ಮುಂದಾಗಿ ಯಶಸ್ಸು ಕಂಡ ಪ್ರಶಾಂತ್ ನೀಲ್ ಇದೀಗ ಸಲಾರ್ ಚಿತ್ರದಲ್ಲಿ ತೊಡಗಿದ್ದು, ಸಲಾರ್ ಚಿತ್ರ ಕೂಡ ಒಂದು ಒಳ್ಳೆಯ ಸಿನಿಮಾವಾಗಿ ಹೊರಹೊಮ್ಮುವ ನಿರೀಕ್ಷೆ ಅಭಿಮಾನಿ ಬಳಗದಲ್ಲಿ ಮೂಡಿದೆ. ಇದೀಗ ಕನ್ನಡದ ಒಂದು ಸಿನಿಮಾ ಜಪಾನ್ ಭಾಷೆಯಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಗೊಳ್ಳುತ್ತಿದೆ ಎನ್ನುವ ವಿಷಯ ಕನ್ನಡಿಗರಿಗೆ ತಿಳಿಯುತ್ತಿದ್ದಂತೆ ಕನ್ನಡ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.
ಡಬ್ಬಿಂಗ್ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಒಟ್ಟಾರೆ ಭಾರತ ಚಿತ್ರರಂಗದ ಬಹು ಬೇಡಿಕೆಯ ಸಿನಿಮಾ ಕೆಜಿಎಫ್ ಬಿಡುಗಡೆಯ ನಂತರವು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಭಾರತದ ಒಂದು ಸಿನಿಮಾ ಜಪಾನ್ ಭಾಷೆಗೆ ಡಬ್ಬಿಂಗ್ ಆಗುವ ಮುಖಾಂತರ ಕೆಜಿಎಫ್ ಚಿತ್ರಕ್ಕೂ ಕೂಡ ಅಂತಾರಾಷ್ಟ್ರೀಯ ಮಟ್ಟದ ಗೌರವ ಸಿಕ್ಕಂತಾಗಿದೆ. ಜುಲೈ 14 ಕ್ಕೆ ಬಿಡುಗಡೆಯಾಗುವ ಕೆಜಿಎಫ್ ಜಪಾನ್ ಭಾಷಾ ಆವೃತ್ತಿಯ ಅವತರಣಿಕೆ ಕಣ್ ತುಂಬಿಕೊಳ್ಳಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗ ಇದೀಗ ದೇಶದೇಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಪ್ರಪಂಚದೇಲ್ಲೆಡೆ ಇನ್ನಷ್ಟು ಪ್ರಸಿದ್ದಿ ಪಡೆಯಲಿ ಎನ್ನುವುದೇ ನಮ್ಮ ಆಶಯ.