ಕನ್ನಡ ಸಿನಿಮಾ ರಂಗದ ನಟಿಯರಿಗೆ ತೆಲುಗು ಚಿತ್ರರಂಗ ಹಾಗೂ ಅಲ್ಲಿನ ನಟರ ಮೇಲೆ ಅದ್ಯಾಕೋ ವ್ಯಾಮೋಹ ಹೆಚ್ಚಾದಂತಿದೆ. ವರ್ಷಗಳ ಹಿಂದೆ ಕನ್ನಡ ನಟಿ ಪವಿತ್ರಾ ಲೋಕೇಶ್ ತೆಲುಗು ನಟ ನರೇಶ್ ಅವರನ್ನು ಮದುವೆಯಾಗಿ ಭಾರೀ ಸುದ್ದಿಯಾಗಿದ್ದರು. ಇದೀಗ, ಮದುವೆಯಾಗಿ ಮಗು ಇರುವ ಮತ್ತೊಬ್ಬ ಕನ್ನಡದ ನಟಿ ತೆಲುಗು ಡೈರೆಕ್ಟರ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ. ನಟಿ ಹಾಗೂ ಡೈರೆಕ್ಟರ್ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿವೆ.

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಂದೇ ಬರುತಾವ ಕಾಲ’ ಎಂಬ ಸಿರಿಯಲ್ ಮೂಲಕ ನಟನೆಗಿಳಿದ ಜ್ಯೋತಿ ರೈ ಆ ಬಳಿಕ ಕಿನ್ನರಿ, ಕಸ್ತೂರಿ ನಿವಾಸ, ಮೂರು ಗಂಟು, ಗೆಜ್ಜೆ ಪೂಜೆ, ಜೋ ಜೋ ಲಾಲಿ ಸೇರಿದಂತೆ ಹಲವಾರು ಧಾರವಾಹಿಗಳ ಮೂಲಕ ಹೆಸರು ಮಾಡಿದರು. ಬಳಿಕ ಸಿನಿಮಾಗಳಲ್ಲೂ ಅವಕಾಶ ಪಡೆದ ಈಕೆ ನಿಖಿಲ್ ಕುಮಾರ ಸ್ವಾಮಿ ನಟಿನೆಯ ‘ಸೀತಾರಾಮ ಕಲ್ಯಾಣ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡದ ಹಲವು ಧಾರವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ ಜ್ಯೋತಿ ‘ಗುಪ್ಪೆಡೆಂತ ಮನಸ್ಸು’ ಎಂಬ ಸಿರಿಯಲ್ ಮೂಲಕ ತೆಲುಗಿಗೆ ಪರಿಚಯವಾದರು. ಇದರ ನಂತರ ಇನ್ನಷ್ಟು ಅವಕಾಶಗಳು ಅಲ್ಲಿ ದೊರೆತವು. ಇದೀಗ ಪತಿಯಿಂದ ದೂರವಾಗಿರುವ ಜ್ಯೋತಿ ತೆಲುಗಿನ ಶುಕ್ರ, ,ಮಾತರಾನಿ ಮೌನಮಿದಿ, ಎ ಮಾಸ್ಟರ್ ಪೀಸ್’ ಚಿತ್ರಗಳ ನಿರ್ದೇಶಕ ಸುರೇಶ್ ಕುಮಾರ್ ಜೊತೆಗೆ ಡೆಟಿಂಗ್ ನಲ್ಲಿದ್ದಾರೆ.
ಧಾರವಾಹಿ ಮತ್ತು ಸಿನಿಮಾ ನಟಿಯಾಗಿ ಗುರುತಿಸಿಕೊಂಡಿರುವ ಜ್ಯೋತಿ ರೈ 20ನೇ ವಯಸ್ಸಿಗೆ ಪದ್ಮನಾಭ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಓರ್ವ ಮಗನಿದ್ದಾನೆ. ಆದರೆ ಇದೀಗ ಜ್ಯೋತಿ ಪತಿಯಿಂದ ದೂರವಾಗಿದ್ದು, ತೆಲುಗು ಡೈರೆಕ್ಟರ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ. ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿವೆ.



