2019ರಲ್ಲಿ ಬಿಡುಗಡೆಯಾದ ‘ಕಬೀರ್ ಸಿಂಗ್’ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿಯಾದ ಬ್ಯೂಟಿ ನಿಕಿತಾ ದತ್ತ ಅವರಿಗೆ ಆ ನಂತರ ಸಾಕಷ್ಟು ಅವಕಾಶಗಳು ಲಭಿಸಿದವು. ಹಲವು ಸಿನಿಮಾಗಳು ಸೂಪರ್ ಹಿಟ್ ಆದವು. ಇದೀಗ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿರುವ ನಿಕಿತಾ ವೆಕೇಷನ್ ಮೂಡ್ ನಲ್ಲಿದ್ದಾರೆ. ಬೀಚ್ ಸಮೀಪ ಬಿಕಿನಿ ತೊಟ್ಟು ತೆಗೆಸಿಕೊಂಡಿರುವ ಬೋಲ್ಡ್ ಫೋಟೋಗಳು ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಸಿಬಿಸಿ ಫೋಟೋಗಳನ್ನು ಕಂಡ ನೆಟ್ಟಿಗರು ನಿಂತಲ್ಲೇ ಕರಗಿ ನೀರಾಗಿದ್ದಾರೆ.


‘ಲೇಕರ್ ಹಮ್ ದಿವಾನ ದಿಲ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಬೋಲ್ಡ್ ನಟನೆಯಿಂದ ಜನಪ್ರಿಯತೆ ಗಳಿಸಿರುವ ನಿಕಿತಾ ಕೇವಲ ಹಿಂದಿ ಮಾತ್ರವಲ್ಲದೆ ಮರಾಠಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಿರುತೆರೆ ಧಾರವಾಹಿಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಇದೀಗ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿನ ಬೀಚ್ ಸಮೀಪ ಇರುವ ಸ್ವಿಮ್ಮಿಂಗ್ ಫೂಲ್ ನಲ್ಲಿ ಬಿಕಿನಿ ತೊಟ್ಟು ಫೋಟೋಶೂಟ್ ನಡೆಸಿರುವ ನಿಕಿತಾ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಬಿಕಿನಿಯಲ್ಲಿ ನಿಕಿತಾ ಅವರನ್ನು ಕಂಡು ನೆಟ್ಟಿಗರು ಫುಲ್ ಥ್ರಿಲ್ ಆಗಿದ್ದಾರೆ. ಭಿನ್ನ ವಿಭಿನ್ನ ಕಮೆಂಟ್ ಮೂಲಕ ನೆಚ್ಚಿನ ನಟಿಯ ಸೌಂದರ್ಯವನ್ನು ಕೊಂಡಾಡಿದ್ದಾರೆ. ಒಬ್ಬ, ‘ಅಬ್ಬಬ್ಬಾ ನೀವು ಇಷ್ಟು ಬೋಲ್ಡ್ ಮತ್ತು ಹಾಟ್ ಆಗಿ ಕಾಣಿಸುತ್ತೀರ ಎಂದು ನನಗೆ ಇವತ್ತೇ ಗೊತ್ತಾಗಿದ್ದು. ಬಿಕಿನಿಯಲ್ಲಿ ಸೂಪರ್ ಆಗಿ ಕಾಣಿಸುತ್ತೀರ’ ಎಂದರೆ, ಮತ್ತೊಬ್ಬ ‘ನಿಕಿತಾ ಬಿಕಿನಿಯಲ್ಲಿ ನಿಮ್ಮಷ್ಟು ಬೋಲ್ಡ್ ಆಗಿ ಮತ್ಯಾರನ್ನೂ ನಾನು ನೋಡಿಲ್ಲ’ ಎಂದಿದ್ದಾನೆ.