ಕೆಲವೊಮ್ಮೆ ಬದುಕಿನ ದುರಂತಗಳು ನಮಗೆ ಗೊತ್ತಿಲ್ಲದೇ ನಡೆದು ಹೋಗಿ ಬಿಡುತ್ತವೆ. ಹುಡುಗಾಟಿಕೆ ಮಾಡಲು ಹೋದ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವೇ ಹತ್ತಿರ ಸುಳಿದಿದೆ ಅನ್ನೋದು ಗೊತ್ತಿಲ್ಲದೇ ಪ್ರಾಣ ಚೆಲ್ಲಿರುತ್ತಾರೆ. ಇತ್ತೀಚಿಗಂತೂ ರೀಲ್ಸ್ ಹುಚ್ಚಿನಿಂದ ಎಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರೀಲ್ಸ್ ಮಾಡಿ ವೀವ್ಸ್ ಗಿಟ್ಟಿಸಿಕೊಳ್ಳುವ ಹುಚ್ಚಿನಿಂದ ತಾವೇ ಸುದ್ದಿಯಾಗಿದ್ದಾರೆ. ಇಂಥಹ ಸುದ್ದಿಗಳ ಪೈಕಿ ಈಗ ಮತ್ತೊಂದು ಯುವತಿಯ ಸಾವು ಕರುಳು ಹಿಂಡುತ್ತಿದೆ.
ಆಕೆ ವೃತ್ತಿಯಲ್ಲಿ ವೈದ್ಯೆ, ಜೊತೆಗೆ ಭರತ ನಾಟ್ಯ ಕಲಾವಿದೆ, ಸ್ವಿಮ್ಮರ್ ಹೀಗೆ ಅನೇಕ ಹೆಸರು ಪಡೆದುಕೊಂಡಿದ್ದಳು. ಎಲ್ಲೋ ಹುಟ್ಟಿ ಈಗ ಇನ್ನೆಲ್ಲೋ ಬಂದು ಸಾವನ್ನಪ್ಪಿದ್ದಾಳೆ ದುರಾದೃಷ್ಟವಂತೆ. ನಾವು ಹೇಳಲು ಹೊರಟಿರೋದು ಯುವತಿಯ ದುರಂತ ಅಂತ್ಯವಾದ ವೈದ್ಯೆ ಅನನ್ಯಾಳ ಬಗ್ಗೆ. ವೈದ್ಯಯಾಗಿ ನೂರಾರು ಜನರ ಪ್ರಾಣ ಉಳಿಸಿಬೇಕಿದ್ದ ಈಕೆ ಈಗ ಹೆಣವಾಗಿ ಮಲಗಿದ್ದಾಳೆ. ಅವಳ ಈ ದು*ರಂತ ಅಂತ್ಯಕ್ಕೆ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಹೌದು, ಹೈದರಾಬಾದ್ನ ನ್ಯಾಮಪಲ್ಲಿಯ ನಿವಾಸಿ ಅನನ್ಯ ಮೋಹನ್ ರಜಾ ದಿನ ಕಳೆಯಲು ಬಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅನನ್ಯ ಸ್ನೇಹಿತರ ಜೊತೆಗೆ ತಾಣಗಳಾದ ಅಂಜನಾದ್ರಿ, ಪಂಪಾಸರೋವರ, ಸಣಾಪೂರ ಕೆರೆಗೆ ಭೇಟಿ ನೀಡಿ, ತುಂಗಭದ್ರ ನದಿಯ ದಡದಲ್ಲಿಯೇ ಇದ್ದ ರೆಸಾರ್ಟ್ವೊಂದರಲ್ಲಿ ಮಂಗಳವಾರ ರಾತ್ರಿ ಉಳಿದುಕೊಂಡಿದ್ದರು. ಮಾರನೇ ದಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಅನನ್ಯ ನೀರಿನಲ್ಲಿ ಮುಳುಗಿ ಮೃ*ತ ಪಟ್ಟಿರುವ ಘಟನೆ ನಡೆದಿದೆ.
ಮುಂಜಾನೆ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ಕಲ್ಲು ಬಂಡೆಯ ಮೇಲಿಂದ ನದಿಗೆ ಜಿಗಿದಿದ್ದಾರೆ. ನದಿಯಲ್ಲಿ ಕಲ್ಲು ಬಂಡೆ ಹಾಗೂ ನದಿಯ ನೀರಿನ ರಭಸಕ್ಕೆ ಅನನ್ಯ ನೀರಿನಲ್ಲಿ ಮುಳುಗಿದ್ದಾರೆ. ಇನ್ನು ಈಕೆ ಇಬ್ಬರು ಸ್ನೇಗಿತರ ಜೊತೆ ಹೋಗಿದ್ದರು. ಆಕೆ ಮೇಲಿನಿಂದ ಜಿಗಿಯೋ ವಿಡಿಯೋ ವೈರಲ್ ಆಗಿದ್ದು, ಎಂಥವರಿಗೂ ಮೈ ಜುಮ್ಮೆನಿಸುವಂತೆ ಮಾಡುತ್ತದೆ. ಮೇಲಿನಿಂದ ಜಿಗಿದ ಅನನ್ಯ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿದ್ದಾರೆ.

ಇನ್ನು ಅನನ್ಯಾಗೆ ಈಜು ಬರಲ್ಲ ಅಂತೇನಿಲ್ಲ. ಈಕೆ ಎಕ್ಸ್ಪರ್ಟ್ ಸ್ವಿಮ್ಮರ್ ಅಂತ ಕುಟುಂಬಸ್ಥರು ಹೇಳುತ್ತಿದ್ದಾರೆ. ೨೦ ಅಡಿ ಎತ್ತರದಿಂದ ಜಿಗಿತ ಈಕೆ ನೀರಿಗೆ ಧುಮುಕಿದ ಬಳಿಕ ನೀರಿನಿಂದ ಮೇಲೇಳಲೇ ಇಲ್ಲ ಅನ್ನೋದೇ ಅನುಮಾನ ಮೂಡುತ್ತಿದೆ. ಯಾಕಂದ್ರೆ ಈಜು ಬಂದರೂ ಆಕೆ ಬಿದ್ದ ತಕ್ಷಣ ಈಜಿಲ್ಲ. ಹಾಗೆ ಮುಳುಗಿದ್ದಾಳೆ. ಹೀಗಾಗಿ ಸಹಸವಾಗಿ ಅನುಮಾನ ಮೂಡುವಂತೆ ಮಾಡಿದೆ.
ಈಜು ಬರುತ್ತೆ ಅನ್ನೋ ಕಾರಣಕ್ಕೆ ವಿರುದ್ಧವಾಗಿ ಹರಿಯುವ ನದಿಯಲ್ಲಿ ಬಿದ್ದರೆ ನದಿಗೆ ಸವಾಲಾಕೋದುಂಟೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಾಡೋದೆ ಬೇರೆ, ನದಿಯಲ್ಲಿ ಈಜಾಡೋದೆ ಬೇರೆ. ಈ ವಿಚಾರ ಅನನ್ಯಾಗೆ ಗೊತ್ತಾಗಲಿಲ್ವಾ ಅನ್ನೋದೆ ಸದ್ಯದ ಪ್ರಶ್ನೆ. ನದಿಗೆ ಈಡಾಜಲು ಬಿದ್ದ ಬಳಿಕ ದಡ ಸೇರುತ್ತೇನೆ ಅಂದುಕೊಂಡ ಅನನ್ಯಾಗೆ ವಿಧಿ ಸಾವಿನ ದಾರಿ ತೋರಿತ್ತು. ಪ್ರಕೃತಿ ವಿರುದ್ದವಾಗಿ ಮಾಡುವ ಯಾವುದೇ ಕೆಲಸ ಕೈ ಗೂಡೋದಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ.

ಇನ್ನು ಅನನ್ಯ ಸಾವಿನಿಂದ ಅವರ ಕುಟುಂಬ ಕಣ್ಣೀರಿಡುತ್ತಿದೆ. ಟ್ರಿಪ್ ಗೆ ಅಂತ ಹೋದ ಮಗಳು ಮನೆಗೆ ಹೆಣವಾಗಿ ಬಂದಿದ್ದು ಆ ಹೆತ್ತ ಕರುಳುಗಳನ್ನ ಹಿಂಡುತ್ತಿದೆ. ಇನ್ನು ಅನನ್ಯ ತಂದೆ ಕೂಡ ಹೈದ್ರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ೨೬ ವರ್ಷದ ಮಗಳು ಮುಂದೆ ಸಾವಿರಾರು ಜನರಿಗೆ ಆಸರೆಯಾಗಬೇಕಿತ್ತು. ಕಷ್ಟಪಟ್ಟು ಓದಿಸಿ, ಬೆಳೆಸಿದ್ದ ಮಗಳು ಈಗ ವಿಧಿಯಾಟಕ್ಕೆ ಬ*ಲಿಯಾಗಿರೋದು ಆ ಕುಟುಂಬಕ್ಕೆ ತಡೆಯಲಾದ ನೋವುಂಟು ಮಾಡಿದೆ.
ಇನ್ನು ಆಕೆ ನದಿಗೆ ಹಾರಿದ ದಿನದಿಂದಲೂ ಆಕೆಯ ಹುಡುಕಾಟ ನಡೆಸಲಾಗುತ್ತಿತ್ತು. ತೀವ್ರ ಶೋಧನ ಕಾರ್ಯಾಚರಣೆಯ ಬಳಿಕ ಮೃತದೇಹ ಸಿಕ್ಕಿದೆ. ವೈದ್ಯಳಾಗಿ ಸಾಧನೆ ಮಾಡಬೇಕು ಅಂದುಕೊಂಡಿದ್ದ ಯುವತಿ ಬಾಳಲ್ಲಿ ವಿಧಿ ಆಟವಾಡಿದೆ. ರೀಲ್ಸ್ ಮಾಡುವ ಹುಚ್ಚಿಗೆ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಯುವತಿಯದ್ದು ನಿಜಕ್ಕೂ ದುರಂತ ಅಂತ್ಯವೇ.