ಸಿನಿಮಾ, ಸಿರಿಯಲ್ ತಾರೆಗಳು ಏನೇ ಮಾಡಿದ್ರೂ ಅದು ಟ್ರೆಂಡಿಂಗ್. ಸೆಲೆಬ್ರಿಟಿಗಳು ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ, ಖಾಸಗಿ ವಾಹಿನಿಯೊಂದರಲ್ಲಿ ನಾಗಿಣಿ ಎಂಬ ಹಿಟ್ ಧಾರವಾಹಿಯಲ್ಲಿ ನಾಗಿಣಿ ಪಾತ್ರಧಾರಿಯಾಗಿದ್ದ ಹಾಗೂ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ತಂಗಿ ದೀಪಿಕಾ ದಾಸ್ ಹದ್ದಿಗೆ ಮುತ್ತಿಟ್ಟು ಸಕ್ಕತ್ ಸುದ್ದಿಯಲ್ಲಿದ್ದಾರೆ.

ಪ್ರವಾಸದಲ್ಲಿರುವ ನಾಗಿಣಿ!
ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮನ್ನ ಮಗಳು ಹಾಗೂ ನಟಿ ದೀಪಿಕಾ ದಾಸ್ ಹಲವಾರು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ, ವಿದೇಶಿ ಪ್ರವಾಸದಲ್ಲಿರುವ ದೀಪಿಕಾ ದಾಸ್ ಮರುಭೂಮಿಯೊಂದರಲ್ಲಿ ನಿಂತು ಹದ್ದಿಗೆ ಮುತ್ತಿಟ್ಟಿದ್ದಾರೆ. ಜೊತೆಗೆ ಹದ್ದನ್ನು ಕೈ ಮೇಲೆ ಇಟ್ಟುಕೊಂಡು ಖುಷಿಪಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಕಾಮೆಂಟ್ ಸುರಿಮಳೆ!
ದೀಪಿಕಾ ದಾಸ್ ಹದ್ದಿಗೆ ಚುಂಬನ ನೀಡುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ನಾಗಿಣಿ ಅಭಿಮಾನಿಗಳು ಕಮೆಂಟ್ ಸುರಿಮಳೆ ಸುರಿಸಿದ್ದಾರೆ. ಕೆಲವರು, ‘ರಾಕಿಂಗ್ ಸ್ಟಾರ್ ತಂಗಿ ಅಂದ್ರೆ ಸುಮ್ನೇನಾ. ಇದಪ್ಪಾ ತಾಕತ್ತು ಅಂದ್ರೆ’ ಎಂದಿದ್ದಾರೆ. ಇನ್ನೂ ಕೆಲವರು, ‘ನಾಗಿಣಿ ಹಾಗೂ ಗರುಡ ಒಂದೇ ಫ್ರೇಮ್ ನಲ್ಲಿರುವ ಅಪರೂಪದ ವಿಡಿಯೋ ಇದು’ ಎಂದಿದ್ದಾರೆ.ವೆಕೇಷನ್ ಮೂಡ್ ನಲ್ಲಿರುವ ನಾಗಿಣಿ ಯಾವಾಗ ಹಿಂತಿರುಗುತ್ತಾರೋ ಗೊತ್ತಿಲ್ಲ!