ಬೆಂಗಳೂರಿನ ಸುಪ್ರಸಿದ್ಧ ಫುಡ್ ಬ್ರಾಂಡ್ ಎಂದೇ ಹೆಸರುವಾಸಿರುವಾಸಿಯಾಗಿರುವ ಮಾವಳ್ಳಿ ಟಿಫನ್ ರೂಮ್ಸ್-ಎಂಟಿಆರ್ ಅನ್ನು ಖರೀದಿಸಲು ಐಟಿಸಿ ಲಿಮಿಟೆಡ್ ಮುಂದಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಛಾಪು ಮೂಡಿಸುವುದರ ಜೊತೆಗೆ ದೇಶವ್ಯಾಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಐಟಿಸಿಗೆ ಇದು ಮೈಲಿಗಲ್ಲಾಗಲಿದೆ ಎಂದರೆ ಸುಳ್ಳಲ್ಲಾ.
ಎಂಟಿಆರ್ನೊಟ್ಟಿಗೆ ಈಸ್ಟರ್ನ್ ಖರೀದಿಗೂ ಮುಂದು
ಅಷ್ಟೇ ಅಲ್ಲದೆ ಪ್ರಮುಖ ಮಸಾಲೆ ತಯಾರಕ ಕಂಪನಿಯಾದ ಈಸ್ಟರ್ನ್ ಕಾಂಡಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಖರೀದಿ ಮಾತುಕತೆ ಚಾಲ್ತಿಯಲ್ಲಿದ್ದು, ಎಂಟಿಆರ್ ಹಾಗೂ ಈಸ್ಟರ್ನ್ ಕಂಪನಿಯನ್ನು ಖರೀದಿಸುವ ಮೂಲಕ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಭದ್ರವಾಗಿ ನೆಲೆಯೂರಲು ಐಟಿಸಿ ಮಹತ್ವದ ಹೆಜ್ಜೆಯಿಟ್ಟಿದೆ.
ನಾರ್ವೆ ಮೂಲದ ಓರ್ಕ್ಲಾ ಎಎಸ್ಎ, ಭಾರತದ ಈ ಎರಡು ಉದ್ಯಮಗಳ ಮಾಲೀಕತ್ವ ಹೊಂದಿದ್ದು, ಅದರಿಂದ ಎರಡು ಬ್ರಾ 0ಡ್ಗಳನ್ನು ಖರೀದಿಸಲು ಪ್ರಾರಂಭಿಕ ಮಾತುಕತೆ ನಡೆಯುತ್ತಲ್ಲಿದೆ ಎಂದು ವರದಿಯಾಗಿದೆ. ಅಂದಾಜು ೧.೪ ಬಿಲಿಯನ್ ಎಂದರೆ ರೂಪಾಯಿ ಮೌಲ್ಯದಲ್ಲಿ ೧೨,೧೬೩ ಕೋಟಿ ರೂಪಾಯಿಗೆ ಎರಡು ಕಂಪನಿಯನ್ನು ಖರೀದಿಸುವ ಸಾಧ್ಯತೆಯಿದೆ.

ಇನ್ನೂ ೨೦೦೭ರಲ್ಲಿ ಎಂಟಿಆರ್ ಹಾಗೂ ೨೦೨೦ರಲ್ಲಿ ಈಸ್ಟರ್ನ್ ಬ್ರಾಂಡ್ಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಓರ್ಕ್ಲಾ ಕಂಪನಿಯು ಭಾರತೀಯ ಆಹಾರ ಮಾರುಕಟ್ಟೆಗೆ ಕಾಲಿಟ್ಟಿತ್ತು. ಇದೀಗ ಇಂಡಿಯನ್ ಟೊಬ್ಯಾಕೋ ಕಂಗ್ಲೊಮೆರೆ Oಟ್ ಕಂಪನಿ-ಐಟಿಸಿ ಕಂಪನಿ ಈ ಬ್ರಾಂಡ್ಗಳನ್ನು ಸ್ವಾಧೀನ ಪಡಿಸಿಕೊಂಡರೆ ಭಾರತೀಯ ಮೂಲದ ಕಂಪನಿಯೇ ಮರಳಿ ಇವುಗಳ ಮಾಲೀಕತ್ವ ಪಡೆದುಕೊಂಡಂತಾಗುತ್ತದೆ.

ಎ0ಟಿಆರ್ನ ಹಿನ್ನೆಲೆ
ಪರಮೇಶ್ವರ ಮೈಯಾ ಎಂಬುವವರಿAದ ೧೯೨೪ರಲ್ಲಿ ಸಣ್ಣ ಉಪಹಾರ ಗೃಹವಾಗಿ ಸ್ಥಾಪಿತವಾದ ಎಂಟಿಆರ್ ಹಲವು ವರ್ಷಗಳ ನಂತರ ಪರಮೇಶ್ವರ ಅವರ ಸಹೋದರ ಯಜ್ಞ ನಾರಾಯಣ ಮೈಯಾ ಅವರಿಂದ ಮಾವಳ್ಳಿ ಟಿಫನ್ ರೂಮ್ಸ್-ಎಂಟಿಆರ್ ಎಂದು ಮರುನಾಮಕರಣಗೊಂಡಿತು. ಶತಮಾನಗಳಿಂದ ದಕ್ಷಿಣ ಭಾರತದ ಪಾಕಪದ್ಧತಿಯನ್ನು ಜೀವಂತಗೊಳಿಸಿರುವ ಎಂಟಿಆರ್ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದೆ. ಸರಳ ಹಾಗೂ ಶುಚಿ-ರುಚಿ ಆಹಾರವನ್ನು ಜನರಿಗೆ ಒದಗಿಸುವಲ್ಲಿ ಎಂಟಿಆರ್ದೇ ಮೇಲುಗೈಯಾಗಿದ್ದು, ಮೊದಲ ಬಾರಿಗೆ ಬೆಂಗಳೂರಿನ ಲಾಲಬಾಗ್ ರಸ್ತೆಯಲ್ಲಿ ಸ್ಥಾಪಿತಗೊಂಡಿತ್ತು ಎಂಬುದು ಇತಿಹಾಸ. ಪ್ರಸ್ತುತ ಹಲವು ಉಪಹಾರ ಗೃಹಗಳು ಎಲ್ಲೆಡೆ ತಲೆ ಎತ್ತಿದ್ದು, ಪ್ರಸ್ತುತ ಉತ್ತರ ಅಮೆರಿಕಾ, ಪಶ್ಚಿಮ ಏಷ್ಯಾ, ಜಪಾನ್ ಹಾಗೂ ಆಗ್ನೇಯ ಏಷ್ಯಾದ ಕೆಲವು ಭಾಗಗಳಿಗೂ ಎಂಟಿಆರ್ ಉತ್ಪನ್ನ ರಫ್ತಾಗುವ ಮೂಲಕ ಅಂತಾರಾಷ್ಟ್ರೀಯ ಮಾರಾಟವನ್ನು ಹೊಂದಿದೆ.