ಸ್ಟಾರ್ ಹೀರೋಯಿನ್ ಸಮಂತಾ ಅವರ ‘ಯಶೋದಾ’ ಟ್ರೈಲರ್ ನೋಡಿದ ಅಭಿಮಾನಿಗಳು ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಕಳೆದ ಶನಿವಾರ ಮಧ್ಯಾಹ್ನ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಚಿತ್ರರಂಗದವರಿಗೆ ಮಾತ್ರವಲ್ಲದೆ, ಸ್ಯಾಮ್ ಅಭಿಮಾನಿಗಳು ಮತ್ತು ನೆಟ್ಟಿಗರಿಗೆ ಶಾಕ್ ನೀಡಿದೆ. ಹೌದು, ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ಸಮಂತಾ ರುತ್ ಪ್ರಭು ಅವರು, ತಾವು ಸ್ವಯಂ ನಿರೋಧಕ (ಆಟೋ ಇಮ್ಯೂನ್) ಕಾಯಿಲೆಯಾದ ಮೈಯೋಸಿಟಿಸ್’ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಈ ಸುದ್ದಿಯನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನಟ ನಾಗಾರ್ಜುನ ಅವರ ಮಗ ಮತ್ತು ಸಮಂತಾ ಅವರ ಮಾಜಿ ಪತಿ ನಾಗ ಚೈತನ್ಯ ಅವರ ಸಹೋದರ ಅಖಿಲ್ ಅಕ್ಕಿನೇನಿ ಮತ್ತು ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಸಮಂತಾಗೆ ಧೈರ್ಯ ತುಂಬಿದರು.

ಸಮಂತಾ ಪೋಸ್ಟ್ ನೋಡಿದಾಗಿನಿಂದ ಅವರ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸ್ಯಾಮ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪೋಸ್ಟ್’ಗಳನ್ನು ಮಾಡುತ್ತಿದ್ದಾರೆ. ಜೂನಿಯರ್ ಎನ್’ಟಿಆರ್ ಮತ್ತು ರಾಮ್ ಅವರಂತಹ ಸ್ಟಾರ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಸದ್ಯ ಸಮಂತಾ ಅವರ ಮೈಯೋಸಿಟಿಸ್ ಕಾಯಿಲೆಯ ಬಗ್ಗೆ ಸರ್ಚ್ ಮಾಡಲು ಪ್ರಾರಂಭಿಸಿದ್ದಾರೆ. ಆ ಕಾಯಿಲೆ ಯಾವುದು? ಅದರ ಗುಣಲಕ್ಷಣಗಳೇನು? ಎಂದು ವಿವರವಾಗಿ ಹುಡುಕುತ್ತಿದ್ದಾರೆ. ಹಾಗಾದರೆ “ಮಯೋಸಿಟಿಸ್” ಎಂದರೇನು?
ಮೈಯೋಸಿಟಿಸ್ ಎಂಬುದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದ ಉಂಟಾಗುವ ಸೋಂಕು. ಮಯೋಸಿಟಿಸ್ನಲ್ಲಿ ಎರಡು ವಿಧಗಳಿವೆ. ಆದರೆ ಸಮಂತಾ ಕೆಲ ದಿನಗಳಿಂದ ಈ ಖಾಯಿಲೆಯಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಸೂಚನೆ ಮೇರೆಗೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತೆಲುಗು ಅಲ್ಲದೆ ಬಾಲಿವುಡ್, ಹಾಲಿವುಡ್ ಸಿನಿಮಾಗಳಿಗೂ ಕಮಿಟ್ ಆಗಿದ್ದಾರೆ ಸಮಂತಾ. ಸ್ಯಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಯಶೋದಾ’ ಮತ್ತು ‘ಶಾಕುಂತಲಂ’ ಚಿತ್ರಗಳು ಅವರ ಸ್ಟಾರ್’ಡಮ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ನಿರ್ಮಾಪಕರು ಸಹ ಹೇಳುತ್ತಿದ್ದಾರೆ. ಈಗ ಈ ಎಲ್ಲದರ ಮಧ್ಯೆ ಕೆಲವು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಾಗ ಚೈತನ್ಯ ಅವರನ್ನು ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಮದುವೆಯಾದ ಸಮಂತಾ, ಮೂರು ವರ್ಷಗಳ ಕಾಲ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದರು. ಆದರೆ ಕೆಲವು ಕಾರಣಗಳಿಗಾಗಿ ದಂಪತಿಗಳು ವಿ*ಚ್ಛೇ*ದನ ಪಡೆದರು. ಇದುವರೆಗೂ ಅವರ ವಿಚ್ಛೇದನಕ್ಕೆ ಕಾರಣಗಳು ಇನ್ನೂ ತಿಳಿದಿಲ್ಲ. ಆದರೆ ವಿಚ್ಛೇದನದ ನಂತರ ಸಮಂತಾ ಸರಣಿ ಚಿತ್ರಗಳಲ್ಲಿ ಬ್ಯುಸಿಯಾದರು. ಇತ್ತೀಚೆಗೆ ಸಮಂತಾ ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದರು. ಸಮಂತಾ ಈ ಖಾಯಿಲೆಯಿಂದ ಬಳಲುತ್ತಿರುವುದರಿಂದ ಕೆಲವರು ಇದೀಗ ಆಕೆಯ ವಿಚ್ಛೇದನಕ್ಕೂ ಈ ಕಾಯಿಲೆಗೂ ತಳುಕು ಹಾಕುತ್ತಿದ್ದಾರೆ.
ವಿ*ಚ್ಛೇ*ದನಕ್ಕೂ ಮುನ್ನವೇ ಸಮಂತಾ ಅವರಿಗೆ ಈ ಕಾಯಿಲೆ ಇರುವುದು ತಿಳಿದಿತ್ತು. ಹಾಗಾಗಿ ಅವರು ನಾಗ ಚೈತನ್ಯ ಅವರಿಂದ ವಿ*ಚ್ಛೇ*ದನ ಪಡೆದಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವು ವರ್ಷಗಳಿಂದ ಸಮಂತಾ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಮೂಲಕ ನೆಟ್ಟಿಗರು ಸ್ಯಾಮ್ ಮತ್ತು ನಾಗ ಚೈತನ್ಯ ವಿಚ್ಛೇದನವನ್ನು ಪ್ರಸ್ತುತ ಈ ಕಾಯಿಲೆಗೆ ಲಿಂಕ್ ಮಾಡುತ್ತಿದ್ದಾರೆ.