ಮಹಾಕುಂಭಮೇಳ ವಿಜೃಂಭಣೆಯಿಂದ ನಡೆಯುತ್ತಿದೆ. ನಮ್ಮ ಸನಾತನ ಧರ್ಮದ ಬಗ್ಗೆ ತಿಳಿಯಲು, ತಮ್ಮನ್ನು ತಾವು ಕಂಡುಕೊಳ್ಳಲು ದೇಶ ವಿದೇಶಗಳಿಂದ ಮಹಾಕುಂಭಮೇಳಕ್ಕೆ ಬರುತ್ತಿದ್ದಾರೆ. ಅಲ್ಲಿಗೆ ಬರುತ್ತಿರುವ ಹಲವು ಭಕ್ತರು ಅವರ ಜೀವನದ ಕಥೆಗಳು ಇದೆಲ್ಲವೂ ವೈರಲ್ ಆಗುತ್ತಿದೆ. ಮಹಾಕುಂಭಮೇಳದಲ್ಲಿ ವೈರಲ್ ಆದ ಮತ್ತೊಬ್ಬ ಸುಂದರಿ ಮೊನಾಲಿಸಾ. ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದ ಈ ಹುಡುಗಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈಕೆಯ ಮಾತುಗಳು ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜನರು ಈಕೆಯ ಕಣ್ಣುಗಳನ್ನು ತುಂಬಾ ಇಷ್ಟಪಟ್ಟರು.
ಮೊನಾಲಿಸಾ ಆಕೆಯ ಹೆಸರಿಗೆ ತಕ್ಕ ಹಾಗೆ ಸುಂದರವಾಗಿದ್ದಾಳೆ. ನೆಟ್ಟಿಗರು ಇವರನ್ನು ಐಶ್ವರ್ಯ ರೈ ಅವರಿಗೆ ಹೋಲಿಕೆ ಮಾಡುತ್ತಿದ್ದರು. ಐಶ್ವರ್ಯ ರೈ ಅವರ ಕಣ್ಣುಗಳು ಜನರಿಗೆ ತುಂಬಾ ಇಷ್ಟ, ವಿಶ್ವದ ಅತ್ಯಂತ ಸುಂದರ ಮಹಿಳೆಯರ ಪೈಕಿ ಇವರು ಇದ್ದವರು. ಮೊನಾಲಿಸಾ ಅವರ ಸರಳ ಸೌಂದರ್ಯ, ಆಕೆಯ ಮುಗ್ಧತೆ ಇದೆಲ್ಲವನ್ನು ಜನರು ತುಂಬಾ ಇಷ್ಟಪಟ್ಟರು. ಈಕೆಯ ಫೋಟೋಸ್ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಶುರುವಾದವು. ಹಲವು ಯೂಟ್ಯೂಬ್ ಚಾನೆಲ್ ಗಳು ಇವರ ಸಂದರ್ಶನ ಸಹ ಪಡೆದವು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರೋ ಮೊನಾಲೀಸಾ ತನ್ನ ತಂದೆ ತಾಯಿಯ ಜೊತೆಗೆ ಹುಟ್ಟುಹಬ್ಬದ ಆಚರಣೆ ಮಾಡಿರುವ ಫೋಟೋಸ್ ಸಹ ವೈರಲ್ ಆಗಿವೆ. ಹಾಗೆಯೇ ಈ ಹುಡುಗಿಗೆ ಬಾಲಿವುಡ್ ಇಂದ ಆಫರ್ ಬಂದಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕರು ಇವರ ಜೊತೆಗೆ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿ ನಟ ರಾಮ್ ಚರಣ್ ಹಾಗೂ ನಮ್ಮ ಶಿವಣ್ಣ ಜೊತೆಯಾಗಿ ಅಭಿನಯಿಸುತ್ತಿರುವ ಆರ್.ಸಿ16 ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಈಕೆಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಶಿವಣ್ಣನ ಜೊತೆ ಈಕೆ ನಟಿಸಿದರೆ ಚೆನ್ನಾಗಿರುತ್ತದೆ ಅಂತಿದ್ದಾರೆ ಫ್ಯಾನ್ಸ್.
ಈಕೆಯ ಬಗ್ಗೆ ವೈರಲ್ ಆಗುತ್ತಿರುವ ಮತ್ತೊಂದು ವಿಷಯ ಏನು ಎಂದರೆ, ಮೊನಾಲಿಸಾ ನಿಜಕ್ಕೂ ರುದ್ರಾಕ್ಷಿ ಮಾರುವ ಹುಡುಗಿ ಅಲ್ಲ, ಆಕೆ ಐಎಎಸ್ ಆಫೀಸರ್, ಕುಂಭಮೇಳಕ್ಕೆ ಮಾರುವೇಶದಲ್ಲಿ ಬಂದು ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಕೆಲವು ಮೊನಾಲಿಸಾ ಐಎಎಸ್ ಆಫೀಸರ್ ಹಾಗಿರುವ ಫೋಟೋಸ್ ಸಹ ವೈರಲ್ ಆಗುತ್ತಿದೆ. ಇದೆಲ್ಲವೂ ನಿಜಾನ? ಈಕೆ ಐಎಎಸ್ ಅಧಿಕಾರಿ ಆಗಿದ್ದು ಮಾರುವೇಶದಲ್ಲಿ ಬಂದಿದ್ದಾರಾ? ಈ ಎಲ್ಲಾ ಪ್ರಶ್ನೆಗಳು ಕೇಳಿಬಂದಿದೆ. ಇದು ನಿಜವೇ ಅಥವಾ ಏನು ಎಂದು ಫ್ಯಾಕ್ಟ್ ಚೆಕ್ ಮಾಡುವುದಕ್ಕೆ ಶುರು ಮಾಡಿದಾಗ ಅಸಲಿ ವಿಷಯ ತಿಳಿದುಬಂದಿದೆ..

ಮೊನಾಲಿಸಾ ನಿಜಕ್ಕೂ ಐಎಎಸ್ ಆಫೀಸರ್ ಅಲ್ಲ. ಆಕೆಗೆ ಈಗ 16 ವರ್ಷ ಅಷ್ಟೇ, ಹಾಗಾಗಿ ಐಎಎಸ್ ಆಗಿರುವುದಕ್ಕೂ ಸಾಧ್ಯವಿಲ್ಲ. ಇದೆಲ್ಲವೂ ಎಐ ಎಡಿಟ್ಸ್ ಗಳು ಎಂದು ಹೇಳಲಾಗುತ್ತಿದೆ. ಯಾರೋ ಈ ರೀತಿ ಎಡಿಟ್ ಮಾಡಿ, ಆ ಫೋಟೋಗಳನ್ನು ವೈರಲ್ ಮಾಡಲಾಗಿದೆ. ಇದೆಲ್ಲವೂ ಸುಳ್ಳು ಎಂದು ಸ್ಪಷ್ಟನೆ ಸಿಕ್ಕಿದೆ. ಈ ಹುಡುಗಿಗೆ ಈಗ ಮಾಡೆಲಿಂಗ್ ನಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಗುವುದಕ್ಕೆ ಶುರುವಾಗಿದ್ದು, ಈಕೆ ಭವಿಷ್ಯ ಚೆನ್ನಾಗಿರಲಿ ಎಂದು ನಾವುಗಳು ಸಹ ಹಾರೈಸೋಣ. ಸಿಗುವ ಅವಕಾಶಗಳನ್ನು ಇವರು ಸರಿಯಾದ ಸದುಪಯೋಗ ಪಡಿಸಿಕೊಂಡು ಒಳ್ಳೆಯ ರೀತಿಯಲ್ಲಿ ಹೋದರೆ ಒಳ್ಳೆಯದು..