ನಟಿ ಸೌಂದರ್ಯ ಅವರು ಹೆಸರಿಗೆ ತಕ್ಕ ಹಾಗೆ ಅತ್ಯಂತ ರೂಪವತಿ, ಸುಂದರವಾದ ನಟಿ. ಅವರನ್ನು ಇಂದಿಗೂ ಕೂಡ ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವ ಹಾಗಿಲ್ಲ. ಸೌಂದರ್ಯ ಅವರು ವಿಧಿವಶರಾಗಿ 21 ವರ್ಷವಾಗುತ್ತಿದೆ. ಆದರೆ ಇವತ್ತಿಗೂ ಕೂಡ ಅಭಿಮಾನಿಗಳು ಇವರ ಬಗ್ಗೆ ಮಾತನಾಡುವುದನ್ನು ಬಿಟ್ಟಿಲ್ಲ, ಇವರ ನೆನಪು ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ನಟಿ ಸೌಂದರ್ಯ ಅವರು ನಮ್ಮನ್ನಗಲಿದ್ದರು ಸಹ ಅವರ ಬಗ್ಗೆ ಅನೇಕ ವಿಚಾರಗಳು ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಅವರು ಇದ್ದಾಗ ಹೇಗಿದ್ದರೂ ಎನ್ನುವ ಚರ್ಚೆ ಅಂತೂ ನಡೆಯುತ್ತಲೇ ಇರುತ್ತದೆ. ಇನ್ನು ಸೌಂದರ್ಯ ಅವರು ಹೋದ ಸಮಯದಲ್ಲಿ ಆಪ್ತಮಿತ್ರ ಚಿತ್ರದಿಂದಲೇ ಹೀಗೆಲ್ಲಾ ಆಯ್ತು, ಸೌಂದರ್ಯ ಅವರು ಆ ಸಿನಿಮಾ ಮಾಡಬಾರದಿತ್ತು, ಆ ಫ್ಲೈ ಓವರ್ ಮೇಲೆ ಅವರ ಆತ್ಮ ಇನ್ನು ಇದೆ ಎಂದೆಲ್ಲ ಸುದ್ದಿಗಳು ಕೇಳಿ ಬಂದಿದ್ದವು. ಅದಕ್ಕೆಲ್ಲಾ ಅವರ ಅತ್ತಿಗೆ ಇತ್ತೀಚೆಗೆ ಉತ್ತರ ಕೊಟ್ಟಿದ್ದಾರೆ.

ನಟಿ ಸೌಂದರ್ಯ ಅವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಅಪ್ಪಟ ಕನ್ನಡದ ಹುಡುಗಿ ಆಗಿದ್ದ ಸೌಂದರ್ಯ ಅವರು ಕನ್ನಡಕ್ಕಿಂತ ಹೆಚ್ಚು ಮಿಂಚಿದ್ದು ತೆಲುಗು ಮತ್ತು ತಮಿಳು ಭಾಷೆಯಲ್ಲಿ. ತೆಲುಗಿನಲ್ಲಿ ಇವರು ಸ್ಟಾರ್ ಹೀರೋಯಿನ್ ಆಗಿ ಮೆರೆದವರು ಎಂದು ಹೇಳಿದರೂ ತಪ್ಪಲ್ಲ. ಸೌಂದರ್ಯ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಸುಮಾರು 100 ಸಿನಿಮಾಗಳಲ್ಲಿ ನಟಿಸಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾದಲ್ಲಿ ಕೂಡ ನಟಿಸಿದ ಹೆಗ್ಗಳಿಕೆ ಇವರಿಗೆ ಸೇರುತ್ತದೆ. ನಟಿ ಸೌಂದರ್ಯ ಅವರ ಸಾ*ವು ಬಹಳ ನೋವು ತರುವಂಥ ವಿಚಾರ. ಕೇವಲ 28 ವಯಸ್ಸಿಗೆ ಸೌಂದರ್ಯ ಅವರು ಇಹಲೋಕ ತ್ಯಜಿಸಿದರು. ಸೌಂದರ್ಯ ಅವರು ಮತ್ತು ಅವರ ಅಣ್ಣ ಅಮರನಾಥ್ ಇಬ್ಬರು ಸಹ ಒಂದೇ ಸಾರಿ ಪ್ರಾಣ ಬಿಟ್ಟರು. ಈ ಘಟನೆಯನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ.
2004ರ ಏಪ್ರಿಲ್ 17ರಂದು ರಾಜಕೀಯ ವಿಚಾರಕ್ಕೆ, ಪ್ರಚಾರಕ್ಕಾಗಿ ಕರೀಂ ನಗರಕ್ಕೆ ಅಣ್ಣನ ಜೊತೆಗೆ ಸೌಂದರ್ಯ ಅವರು ತೆರಳಬೇಕಿತ್ತು. ಹೆಲಿಕಾಪ್ಟರ್ ನಲ್ಲಿ ಇಬ್ಬರು ಹೊರಟ ಕೆಲವೇ ಸಮಯಕ್ಕೆ ಕ್ರಾಶ್ ಆಗಿ, ಸೌಂದರ್ಯ ಅವರು ಮತ್ತು ಅವರ ಅಣ್ಣ ಅಮರನಾಥ್ ಇಬ್ಬರು ಸಹ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ನೋಡಲು ಅಷ್ಟು ಸೌಂದರ್ಯವತಿ ಆಗಿದ್ದ ಸೌಂದರ್ಯ ಅವರಿಗೆ ಆ ರೀತಿಯ ಅಂತ್ಯ ಆಗುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಸೌಂದರ್ಯ ಅವರಿಗೆ ಈ ರೀತಿ ಆಗಿ, ಅವರು ಎಲ್ಲರನ್ನು ಬಿಟ್ಟು ಹೋಗಿ 21 ವರ್ಷ ಕಳೆದಿವೆ. ಈ ಘಟನೆ ನಡೆದು 21 ವರ್ಷ ಕಳೆದು ಹೋಗಿದೆ, ಆದರೆ ಇವತ್ತಿಗೂ ಯಾರು ಕೂಡ ಸೌಂದರ್ಯ ಅವರನ್ನು ಮರೆತಿಲ್ಲ. ಸೌಂದರ್ಯ ಅವರ ಸಿನಿಮಾಗಳು ಇವತ್ತಿಗೂ ಎಲ್ಲರ ಫೇವರೆಟ್ ಆಗಿದೆ. ಅಭಿಮಾನಿಗಳು ಅವರ ಬಗ್ಗೆ ಪೋಸ್ಟ್ ಮಾಡುತ್ತಾರೆ.

ಇನ್ನು ಸೌಂದರ್ಯ ಅವರ ದುರಂತ ಅಂತ್ಯದ ಬಗ್ಗೆ ಅನೇಕ ವಿಚಾರಗಳು ತಳುಕು ಹಾಕಿಕೊಂಡಿದೆ. ಅದಕ್ಕೆಲ್ಲಾ ಇತ್ತೀಚೆಗೆ ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಅಮರನಾಥ್ ಅವರು ಉತ್ತರ ಕೊಟ್ಟಿದ್ದಾರೆ. ಈ ಒಂದು ಘಟನೆ ಇಂದ ಪತಿ ಮತ್ತು ನಾದಿನಿ ಇಬ್ಬರನ್ನು ಕಳೆದುಕೊಂಡರು ನಿರ್ಮಲಾ ಅವರು. ಈಗಲೂ ಅವರು ಅವರಿಬ್ಬರ ನೆನಪಿನಲ್ಲಿ ಬದುಕುತ್ತಿದ್ದಾರೆ, ಅಮರ ಸೌಂದರ್ಯ ಫೌಂಡೇಶನ್ ಸಂಸ್ಥೆ ಶುರು ಮಾಡಿ, ವಿಶೇಷ ಮಕ್ಕಳಿಗೆ ವಿದ್ಯೆ ಕೊಡುತ್ತಿದ್ದಾರೆ. ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇವರು ಸಂದರ್ಶನ ಕೊಡುವುದು ಅಪರೂಪ. ಇತ್ತೀಚೆಗೆ ಸಂದರ್ಶನದಲ್ಲಿ ಅನೇಕ ವಿಚಾರಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ ನಿರ್ಮಲಾ ಅವರು. ಸೌಂದರ್ಯ ಮತ್ತು ನಿರ್ಮಲಾ ಅವರ ಮನೆ ಒಂದೇ ಕಡೆ ಇತ್ತು, ಹಾಗಾಗಿ ಎರಡು ಕುಟುಂಬಕ್ಕೆ ಬಹಳ ವರ್ಷಗಳ ಪರಿಚಯ. ಚಿಕ್ಕಂದಿನಿಂದ ಗೊತ್ತಿದ್ದರೂ, ಅವರ ಮನೆ ಸೊಸೆ ಆಗ್ತೀನಿ ಅಂತ ನಿರ್ಮಲಾ ಅವರು ಊಹೆ ಕೂಡ ಮಾಡಿರಲಿಲ್ಲವಂತೆ.
ಸೌಂದರ್ಯ ಅವರು ಚಿಕ್ಕವರಿದ್ದಾಗಿನಿಂದಲೂ ನಿರ್ಮಲಾ ಅವರು ನೋಡಿದ್ದರು, ಬಹಳ ಮುದ್ದಿನಿಂದ ಬೆಳೆದ ಮಗಳು ಸೌಂದರ್ಯ ಅವರು, ಸಿನಿಮಾ ಕಾರ್ಯಕ್ರಮ ಇದ್ದಾಗ ಮಾತ್ರ ಮೇಕಪ್ ಮಾಡಿಕೊಳ್ಳುತ್ತಿದ್ದರಂತೆ, ಮನೆಯಲ್ಲಿದ್ದಾಗ ಬಹಳ ಸಿಂಪಲ್ ಆಗಿರುತ್ತಿದ್ದರಂತೆ. ಬಹಳ ಮುದ್ದು, ಇನ್ನೊಸೆಂಟ್ ಹುಡುಗಿ ಅಂತೆ ಸೌಂದರ್ಯ ಅವರು. ಅವರಿಗೆ ಬಟ್ಟೆಗಳು ಅಂದ್ರೆ ತುಂಬಾ ಕ್ರೇಜ್, ವಾರ್ಡ್ ರೋಬ್ ತುಂಬಾ ಬಟ್ಟೆ ಇರುತ್ತಿತ್ತು, ಆದರೂ ಕೆಲವೊಮ್ಮೆ ಬಟ್ಟೆ ಇಲ್ಲ ಅಣ್ಣ ಎಂದು ಮಗುವಿನ ಹಾಗೆ ಹೇಳುತ್ತಿದ್ದರಂತೆ. ತುಂಬಾ ಒಳ್ಳೆಯ ಮನಸ್ಸಿನ ಸೌಂದರ್ಯ ಅವರಿಗೆ ಮದುವೆಯಾದ ನಂತರ ಎಲ್ಲರ ಹಾಗೆ ಅಡಿಗೆ ಮಾಡಿ, ಗಂಡನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಇತ್ತಂತೆ. ಅದಕ್ಕಾಗಿ ಆದಷ್ಟು ಸಮಯವನ್ನು ಸಹ ಕೊಡುತ್ತಿದ್ದರಂತೆ. ಬದುಳಿ ಬಾಳಬೇಕಿದ್ದ ಅವರ ಜೀವನದಲ್ಲಿ ಅಂಥದ್ದೊಂದು ಘಟನೆ ನಡೆದು. ಅದರ ಸುತ್ತ ತಳುಕು ಹಾಕಿರುವ ವಿಚಾರಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.

ಸೌಂದರ್ಯ ಅವರಿಗೆ ಆ ರೀತಿ ಆಗುವುದಕ್ಕೆ ಆಪ್ತಮಿತ್ರ ಸಿನಿಮಾದ ನಾಗವಲ್ಲಿಯೇ ಕಾರಣ ಎನ್ನುವ ಅಭಿಪ್ರಾಯ ಶುರುವಾಗಿತ್ತು, ಅದರ ಬಗ್ಗೆ ನಿರ್ಮಲಾ ಅವರು ಮಾತನಾಡಿ, ಅದೆಲ್ಲವು ಸುಳ್ಳು. ಸಿನಿಮಾ ಶೂಟಿಂಗ್ ನಡೆಯುವಾಗ ನಾನು ಕೂಡ ಹೋಗಿದ್ದೇ, ಕಹಿ ಅನುಭವ ಏನೂ ಆಗಿರಲಿಲ್ಲ ಎಂದಿದ್ದಾರೆ ನಿರ್ಮಲಾ ಅವರು. ಬೆಂಗಳೂರು ಪ್ಯಾಲೇಸ್ ನಲ್ಲಿ ರಾ ರಾ ಹಾಡಿನ ಚಿತ್ರೀಕರಣ ನಡೆಯುವಾಗ ಕೂಡ ನಿರ್ಮಲಾ ಅವರು ಹೋಗಿದ್ದರಂತೆ, ಆ ರೀತಿ ಯಾವುದೇ ತೊಂದರೆ ಆಗಿರಲಿಲ್ಲ, ಇದೆಲ್ಲವೂ ಕಾಕತಾಳೀಯ ಎಂದಿದ್ದಾರೆ. ಒರಿಜಿನಲ್ ಸಿನಿಮಾ ಮಣಿಚಿತ್ರತಾಳ್ ನಲ್ಲಿ ಅಭಿನಯಿಸಿದ ಶೋಬನ ಅವರು ಇನ್ನು ಇದ್ದಾರಲ್ಲ ಎಂದು ಹೇಳಿದ್ದಾರೆ ನಿರ್ಮಲ ಅವರು. ಇನ್ನು ಆ ಘಟನೆ ನಡೆದ ವೇಳೆ ಮಾಧ್ಯಮದಲ್ಲಿ ಕೆಟ್ಟದಾಗಿ ಮಾತನಾಡಿ, ಆ ಫ್ಲೈ ಓವರ್ ಮೇಲೆ ಸೌಂದರ್ಯ ಅವರ ಆತ್ಮ ಇನ್ನು ಇದೆ ಎಂದು ಹೇಳುತ್ತಿದ್ದರಂತೆ.
ಆ ವಿಷಯದ ಬಗ್ಗೆ ಸಹ ಮಾತನಾಡಿರುವ ನಿರ್ಮಲಾ ಅವರು, “ಮಾಧ್ಯಮದಲ್ಲಿ ಆ ರೀತಿ ಹೇಳಿದಾಗ ತುಂಬಾ ದುಃಖ ಆಗ್ತಿತ್ತು, ಮನಸ್ಸು ಕಲುಕುತ್ತಿತ್ತು. ಯಾಕೆ ಹೀಗೆಲ್ಲಾ ಸುಳ್ಳು ಸುದ್ದಿಗಳನ್ನ ಹೇಳ್ತಾರೆ, ಅಂಥದ್ದೇನು ಇಲ್ಲವಲ್ಲ, ಹೀಗೆಲ್ಲಾ ಹೇಳೋಕೆ ಹೇಗಾದರೂ ಇವರಿಗೆ ಮನಸ್ಸು ಬರುತ್ತೆ..” ಎಂದು ನಿರ್ಮಲಾ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಸೌಂದರ್ಯ ಅವರ ವಿಷಯದಲ್ಲಿ ಇದ್ದ ಎಲ್ಲಾ ಊಹಾಪೋಹಗಳಿಗೆ ಅವರ ಅತ್ತಿಗೆಯೇ ಉತ್ತರ ಕೊಟ್ಟಿದ್ದಾರೆ. ಇನ್ನು ಇಷ್ಟು ವರ್ಷಗಳಾಗಿದ್ದರು ಸಹ ಸೌಂದರ್ಯ ಅವರ ಅಭಿಮಾನಿಗಳು ಕಾಲ್ ಮಾಡಿ ನಿರ್ಮಲಾ ಅವರ ಜೊತೆ ಮಾತನಾಡುತ್ತಾರಂತೆ, ನಿಮ್ಮ ಜೊತೆ ಮಾತನಾಡಿದರೆ ಅವರ ಜೊತೆ ಮಾತನಾಡಿದ ಹಾಗೆ ಸಂತೋಷ ಆಗುತ್ತದೆ ಎನ್ನುತ್ತಾರಂತೆ. ಅಭಿಮಾನಿಗಳಿಂದ ತಮಗೆ ಬಹಳ ಸಂತೋಷ ಇದೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.



