ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಮಂತಾ ಅವರು ಹಲವು ಶೋಗಳು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಾರೆ, ಇವರ ಸಿಟಾಡೆಲ್ ವೆಬ್ ಸೀರೀಸ್ ಸೂಪರ್ ಹಿಟ್ ಆಗಿ, ಸಮಂತಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇದೆಲ್ಲ ಒಂದು ಕಡೆಯಾದರೆ, ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಆಗುವ ಚರ್ಚೆಗಳು ಮತ್ತೊಂದು ಕಡೆ. ಸಮಂತಾ ಅವರು ವಿಚ್ಛೇದನ ಪಡೆದು 3 ವರ್ಷದ ಮೇಲಾಗಿದೆ. ಅವರ ಮಾಜಿ ಪತಿ ನಾಗಚೈತನ್ಯ ಈಗಾಗಲೇ ಮತ್ತೊಂದು ಮದುವೆ ಆಗಿದ್ದಾರೆ. ಆದರೆ ಇವರಿಬ್ಬರ ಬಗ್ಗೆ ಈಗಲು ಚರ್ಚೆಗಳು ನಡೆಯುತ್ತದೆ.
ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಸಹ ಪ್ರೀತಿಸಿ ಮದುವೆಯಾದರು. ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ, ಹೆಚ್ಚು ಸಮಯ ಜೊತೆಯಾಗಿ ಇರಲಿಲ್ಲ. ಮದುವೆಯಾಗಿ 4 ವರ್ಷ ತುಂಬುವುದರ ಒಳಗೆ ಇಬ್ಬರು ವಿಚ್ಛೇದನ ಪಡೆದರು. ಇವರಿಬ್ಬರು ದೂರವಾಗಲು ಕಾರಣ ಏನು ಎಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಇದಕ್ಕೆ ಕಾರಣ ಏನಿರಬಹುದು ಎಂದು ಚರ್ಚೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯ ಸಮಂತಾ ಅವರ ಜೊತೆಗೆ ಇದ್ದಾಗಲೇ ಶೋಭಿತಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು, ಅದೇ ಕಾರಣಕ್ಕೆ ಇಬ್ಬರು ದೂರ ಆಗಿರೋದು ಎನ್ನಲಾಗುತ್ತಿದೆ.

ಆದರೆ ಅಸಲಿ ವಿಷಯ ಏನು ಎನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಇಬ್ಬರು ಬೇರೆ ಆಗಿದ್ದು ಆಯಿತು, ಶೋಭಿತಾ ಅವರ ಜೊತೆಗೆ ನಾಗಚೈತನ್ಯ ಮದುವೆ ಆಗಿದ್ದು ಆಯಿತು. ಅವರಿಬ್ಬರು ಈಗ ಚೆನ್ನಾಗಿಯೇ ಇದ್ದಾರೆ. ಆದರೆ ಸಮಂತಾ ಅವರು ನೋವಿನಲ್ಲೇ ಇದ್ದಾರೆ. ಸಮಂತಾ ಅವರು ತಂದೆಯನ್ನು ಕಳೆದುಕೊಂಡರು, ಅವರ ಆರೋಗ್ಯದಲ್ಲಿ ಕೂಡ ಕೆಲ ಸಮಸ್ಯೆ ಇದೆ. ಏನೇ ಆದರು ಅವರವರ ಜೀವನವನ್ನು ಅವರವರೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಚೈತನ್ಯ ಏನೋ ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ಶೋಭಿತಾ ಅವರನ್ನು ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಫೋಟೋಶೂಟ್ ಕೂಡ ಮಾಡಿಸಿದರು.
ಆದರೆ ಸಮಂತಾ ಅವರು ಇನ್ನೂ ಅದೇ ನೋವಿನಲ್ಲಿ ಇದ್ದಾರೆ, ಸಮಂತಾ ಅವರು ಇನ್ನು ಅದರಿಂದ ಹೊರಬಂದಿಲ್ಲ ಎನ್ನುವ ಸುದ್ದಿಗಳು ಇತ್ತೀಚೆಗೆ ಕೇಳಿಬಂದಿದ್ದವು. ಆದರೆ ಇದೀಗ ಸಮಂತಾ ಅವರ ಬಗ್ಗೆ ಬೇರೆಯದೇ ವಿಚಾರ ಕೇಳಿಬರುತ್ತದೆ. ಕೆಲವು ತಿಂಗಳುಗಳಿಂದ ಈ ಸುದ್ದಿ ಕೂಡ ವೈರಲ್ ಆಗುತ್ತಿತ್ತು. ಆದರೆ ಅದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ, ಈಗ ಅದೇ ರೀತಿಯ ಮತ್ತೊಂದು ಸುದ್ದಿ ಸಹ ಕೇಳಿಬಂದಿದ್ದು, ಸಮಂತಾ ಮೂವ್ ಆನ್ ಆಗಿದ್ದಾರೆ, ಮತ್ತೊಬ್ಬರನ್ನು ಡೇಟ್ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಇದಾಗಿದೆ. ಹೌದು, ಅಷ್ಟಕ್ಕೂ ಸಮಂತಾ ಅವರು ಈಗ ಡೇಟಿಂಗ್ ಮಾಡುತ್ತಿರುವುದು ಯಾರ ಜೊತೆಗೆ ಎಂದು ಎಲ್ಲರಲ್ಲಿ ಕುತೂಹಲ ಇದೆ, ಅದರ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ.

ಹೌದು, ನಮಗೆಲ್ಲ ಗೊತ್ತಿರುವ ಹಾಗೆ ಸಮಂತಾ ಅವರು ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಲ್ಲಿ ನಟಿಸಿದ ನಂತರ ವಿಚ್ಛೇದನ ಪಡೆದರು. ಈ ವೆಬ್ ಸೀರೀಸ್ ನ ಡೈರೆಕ್ಟರ್ ರಾಜ್ ನಿಡುಮೋರಿ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕೆಲವು ತಿಂಗಳುಗಳ ಹಿಂದೆ ಕೇಳಿ ಬಂದಿತ್ತು, ಇಬ್ಬರೂ ಪಿಕಲ್ ಬಾಲ್ ಲಾಂಚ್ ಈವೆಂಟ್ ಗೆ ಕೈ ಕೈ ಹಿಡಿದುಕೊಂಡು ಬಂದಿದ್ದರು, ಆಗಿನಿಂದ ಇವರಿಬ್ಬರು ಜೊತೆಯಾಗಿ ಇರಬಹುದು, ಡೇಟಿಂಗ್ ಮಾಡುತ್ತಿರಬಹುದು ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಆದರೆ ಆ ವಿಚಾರಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಇವರಿಬ್ಬರು ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡಿದ್ದು, ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಈಗ ಆಗಿರುವುದು ಏನು ಎಂದು ಫುಲ್ ಡೀಟೇಲ್ಸ್ ಇಲ್ಲಿದೆ.

ನಟಿ ಸಮಂತಾ ಅವರು ಈಗ ತಮ್ಮದೇ ಆದ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಟ್ರಲಾಲ ಮೂವಿಂಗ್ ಪಿಕ್ಚರ್ಸ್ ಇವರ ಸಂಸ್ಥೆಯ ಹೆಸರು. ಸಮಂತಾ ಅವರು ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಬೇಕು, ಅವಕಾಶ ಕೊಡಬೇಕು ಹಾಗೆಯೇ ಒಳ್ಳೆಯ ಕಥೆಗಳನ್ನು ಚಿತ್ರಪ್ರೇಮಿಗಳಿಗೆ ನೀಡಬೇಕು ಎಂದು ಆಶಯ ಹೊಂದಿದ್ದಾರೆ. ಇದೇ ನಿಟ್ಟಿನಲ್ಲಿ ಮೊದಲ ಸಿನಿಮಾವನ್ನು ತಮ್ಮ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದು, ಆ ಸಿನಿಮಾ ಹೆಸರು ಶುಭಂ. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿ, ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮುಂದಿನ ವಾರ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೊಮೋಷನ್ ಗಳು ಜೋರಾಗಿಯೇ ನಡೆಯುತ್ತಿದೆ. ಈ ಸಿನಿಮಾದ ಎಲ್ಲಾ ಕಲಾವಿದರಿಗೆ ಒಂದೇ ರೀತಿಯ ಸಂಭಾವನೆ ನೀಡಿ ಸುದ್ದಿಯಾಗಿದ್ದರು ಸಮಂತಾ.

ಇದರ ಜೊತೆಗೆ ಈಗ ಮತ್ತೊಂದು ವಿಚಾರ ಸಿಕ್ಕಾಪಟ್ಟೆ ಹೈಲೈಟ್ ಆಗಿದೆ. ತಾವು ನಿರ್ಮಾಣ ಮಾಡಿರುವ ಮೊದಲ ಸಿನಿಮಾಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಸಮಂತಾ ಅವರು ತಿರುಪತಿಗೆ ಹೋಗಿ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ಇಲ್ಲಿ ಮತ್ತೊಂದು ಪ್ರಮುಖವಾದ ವಿಚಾರ ಏನು ಎಂದರೆ, ತಿರುಪತಿಗೆ ಇವರು ನಿರ್ದೇಶಕ ರಾಜ್ ಅವರ ಜೊತೆಗೆ ಬಂದಿದ್ದರು, ಹಾಗಾಗಿ ಇವರಿಬ್ಬರ ಡೇಟಿಂಗ್ ವದಂತಿಗಳು ಜೋರಾಗಿಯೇ ಕೇಳಿ ಬರುತ್ತಿದೆ. ಇಬ್ಬರು ಡೇಟಿಂಗ್ ಮಾಡುತ್ತಿರುವುದರಿಂದಲೇ ಜೊತೆಯಾಗಿ ಬಂದಿದ್ದಾರೆ ಎನ್ನಲಾಗಿದ್ದು, ಆದರೆ ಈ ಬಗ್ಗೆ ಸಮಂತಾ ಅವರಾಗಲಿ, ರಾಜ್ ಅವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ತಿಳಿಸುತ್ತಾರಾ ಎಂದು ಕಾದು ನೋಡಬೇಕಿದೆ.