ನಟಿ ಮೀನಾ ಅವರು ಸೌತ್ ಇಂಡಿಯನ್ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಟಿ. ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಮೀನಾ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಆದರೆ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ನಟಿ ಮೀನಾ ಅವರು ಎರಡನೇ ಮದುವೆ ಆಗುವುದಕ್ಕೆ ರೆಡಿ ಆಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಈ ಬಗ್ಗೆ ಇಷ್ಟು ದಿವಸಗಳ ವರೆಗು ಯಾವುದೇ ಸುದ್ದಿ ಕೇಳಿಬಂದಿರಲಿಲ್ಲ ಆದರೆ ಇದೀಗ ಖುದ್ದು ನಟಿ ಮೀನಾ ಅವರೇ ಸ್ಪಷ್ಟನೆ ನೀಡಿದ್ದಾರೆ..

ಹೌದು, ನಟಿ ಮೀನಾ ಅವರು ಮತ್ತೆ ಮದುವೆ ಆಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗುವುದಕ್ಕೆ, ಒಂದು ಮುಖ್ಯವಾದ ಕಾರಣ ಇದೆ. ಅದು ಅವರ ಪತಿ ವಿದ್ಯಾಸಾಗರ್ ಅವರ ಮರಣ. ಹೌದು, ಒಂದೆರಡು ವರ್ಷಗಳ ಹಿಂದೆ ನಟಿ ಮೀನಾ ಅವರ ಗಂಡ ವಿದ್ಯಾಸಾಗರ್ ಅವರು ಇದ್ದಕ್ಕಿದ್ದಂತೆ ವಿಧಿವಶರಾದರು. ಈ ಒಂದು ಘಟನೆ ನಡೆದ ಬಳಿಕ ಮೀನಾ ಅವರು ಮಾನಸಿಕವಾಗಿ ನೋವಿನಲ್ಲಿ ಇದ್ದರು, ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸಿನಿಮಾಗಳಿಂದ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಎಲ್ಲದರಿಂದಲು ದೂರವೇ ಇದ್ದರು. ಆದರೆ ಇತ್ತೀಚೆಗೆ ಮೀನಾ ಅವರು ಮತ್ತೊಮ್ಮೆ ಸಾಬೀತಾಗಿದೆ ಆಕ್ಟಿವ್ ಆಗಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಮೀನಾ ಅವರು ಈಗ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಕೆಲವು ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ವೆಬ್ ಸೀರೀಸ್ ನಲ್ಲಿ ಕೂಡ ನಟಿಸುತ್ತಿದ್ದಾರೆ. ಗಂಡ ತೀರಿ*ಹೋದ ನಂತರ ಮಗಳು ನೈನಿಕಾ ಅವರ ಜೊತೆಗೆ ಮೀನಾ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಎಲ್ಲರಿಗು ಗೊತ್ತೇ ಇದೆ. ಈ ಕಾರಣಕ್ಕೆ ಮೀನಾ ಅವರು ಇನ್ನೊಂದು ಮದುವೆ ಆಗುತ್ತಾರೆ ಅಥವಾ ಇನ್ನೊಂದು ಮದುವೆಗೆ ರೆಡಿ ಆಗಿದ್ದಾರೆ ಎನ್ನುವಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಕೆಲವು ಸಮಯದಿಂದ ಕೇಳಿ ಬರುತ್ತಲೇ ಇದೆ. ಇಷ್ಟು ದಿವಸಗಳ ಕಾಲ ಮೀನಾ ಅವರು ಈ ಬಗ್ಗೆ ಏನನ್ನೂ ಮಾತನಾಡಿರಲಿಲ್ಲ..

ಆದರೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮೀನಾ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದು, ತಾವು ಈಗ ತೃಪ್ತಿಯಿಂದ ಜೀವನ ನಡೆಸುತ್ತಿದ್ದು, ಎರಡನೇ ಮದುವೆ ಆಗುವ ಬಗ್ಗೆ ಅವರಿಗೆ ಯಾವುದೇ ಯೋಚನೆ ಇಲ್ಲ. ಎರಡನೇ ಮದುವೆ ಆಗುವ ಬಗ್ಗೆ ಯಾವುದೇ ಪ್ಲಾನ್ ಕೂಡ ಇಲ್ಲ ಎಂದು ಹೇಳಿದ್ದಾರೆ. ಈ ರೀತಿ ಹೇಳಿಕೆ ಕೊಡುವ ಮೂಲಕ ನಟಿ ಮೀನಾ ಅವರು ಎಲ್ಲಾ ಬಗೆಯ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ. ಮೀನಾ ಅವರು ಮಗಳ ಜೊತೆಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಮೀನಾ ಅವರ ಫ್ಯಾಮಿಲಿ ಸಹ ಅವರ ಜೊತೆಗೆ ನಿಂತು ಸಪೋರ್ಟ್ ಮಾಡುತ್ತಿದೆ. ಮೀನಾ ಅವರು ಈಗ ನೆಮ್ಮದಿ ಆಗಿದ್ದಾರೆ.
ಇನ್ನು ಮೀನಾ ಅವರ ಪಾಪ್ಯುಲಾರಿಟಿ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತಮಿಳು ಭಾಷೆಯಲ್ಲಿ ನಟಿಸುವ ಮೂಲಕ ಕೆರಿಯರ್ ಶುರು ಮಾಡಿದ ನಟಿ ಮೀನಾ ಅವರು, ಮುಂದಿನ ದಿನಗಳಲ್ಲಿ ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿ ಎಲ್ಲಾ ಭಾಷೆಯ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಸ್ಟಾರ್ ನಟಿ ಆಗಿದ್ದಾರೆ. ಇವತ್ತಿಗೂ ಇವರಿಗೆ ಇರುವ ಕ್ರೇಜ್ ಹಾಗೂ ಅಭಿಮಾನಿಗಳ ಬಳಗ ಕಡಿಮೆ ಅಂತೂ ಆಗಿಲ್ಲ. ಮೀನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಹ ಆಕ್ಟಿವ್ ಆಗಿದ್ದು, ತಮ್ಮ ಬದುಕಿನ ಹಲವು ಮುಖ್ಯ ವಿಚಾರವನ್ನು ಶೇರ್ ಮಾಡಿಕೊಳ್ಳುತ್ತಾರೆ.