ಹೆಣ್ಣು ಮಕ್ಕಳು ಸಾಮಾನ್ಯವಾಗಿ ಮನೆಯಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಹಲ್ಲಿಗಳನ್ನು ಕಂಡರೆ ಸಾಕು ಹೌಹಾರಿ ದೂರ ನಿಲ್ಲುತ್ತಾರೆ. ಏನು ಮಾಡಬೇಕೆಂದು ತಿಳಿಯದೇ ಕೈ-ಕೈ ಹಿಸುಕಿಕೊಳ್ಳುತ್ತಾರೆ. ಮನೆಯ್ಲಲಿಯೇ ಇರುವ ಕೆಲವು ವಸ್ತುಗಳ ಮೂಲಕ ಹಲ್ಲಿಯನ್ನು ಮನೆಯಿಂದ ಹೊರಗೋಡಿಸಲು ಇಲ್ಲೊಂದಿಷ್ಟು ಸರಳ ಉಪಾಯಗಳಿವೆ. ಒಮ್ಮೆ ಬಳಸಿ ನೋಡಿ……

ಅನಗತ್ಯವಾಗಿ ಮನೆಗೆ ನುಗ್ಗುವ ಹಲ್ಲಿಗಳನ್ನು ಕೀಟನಾಶಕ ಬಳಸಿ ಹೊರಗಿಡುವುದು ಸಾಮಾನ್ಯವಾಗಿ ಎಲ್ಲರೂ ಮಾಡುವ ಕೆಲಸವೇ ಅಗಿದೆ. ಆದರೆ, ಇದರಿಂದ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಕೀಟನಾಶಕದಲ್ಲಿರುವ ಹಾನಿಕಾರಕ ರಾಸಾಯನಿಕಗಳು ಚರ್ಮದ ಕಿರಿಕಿರಿ, ಉಸಿರಾಟದ ಸಮಸ್ಯೆ, ಕ್ಯಾನ್ಸರ್ನಂತಹ ಗಂಭೀರ ಪರಿಸ್ಥಿತಿಗಳನ್ನು ತಂದೊಡ್ಡುತ್ತವೆ. ಆದ್ದರಿಂದ ರಾಸಯನಿಕಗಳನ್ನು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೇ ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದ್ದು ಅನಿವಾರ್ಯ.
ಹಾಗಾದರೆ, ಹಲ್ಲಿಯನ್ನು ಹೇಗೆ ಮನೆಗೆ ಸೇರದಂತೆ ಮಾಡುವುದು ಎಂದು ಯೋಚಿಸುತ್ತದ್ದೀರಾ….ಅದಕ್ಕೆ ಇಲ್ಲಿದೆ ಕೆಲವು ಉಪಾಯಗಳು. ನಿಮ್ಮ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಂಡು ಹಲ್ಲಿಗಳು ಮನೆಗೆ ಬರದಂತೆ ಗಮನವಹಿಸಬಹುದು.

ಘಾಡ ಪರಿಮಳ ಬೀರುವ ಪುದೀನಾ:
ಹೌದು ಹಲ್ಲಿಗಳನ್ನು ದೂರವಿಡಲು ಪುದೀನಾ ಉತ್ತಮ ಆಯ್ಕೆ. ಪುದೀನಾದ ಘಮದಿಂದಲೇ ಯಾವ ಸೊಪ್ಪೆಂದು ಹೇಳಬಹುದು. ರಿಫ್ರೆಶಿಂಗ್ ಫ್ರಾಗ್ರೆನ್ಸ್ನಂತೆ ಕೆಲಸ ಮಾಡುವ ಪುದೀನಾ, ಹಲ್ಲಿಗಳಿಗೆ ತಲೆನೋವು ತರುತ್ತವೆಯಂತೆ. ಸೂಕ್ಷ್ಮ ವಾಸನೆಯನ್ನು ಮೆಚ್ಚುವ ಹಲ್ಲಿಗಳಿಗೆ, ಪುದೀನಾದ ಘಾಡ ಪರಿಮಳ ಕಿರಿಕಿರಿಯನ್ನುಂಟು ಮಾಡುತ್ತವೆ. ಆದ್ದರಿಂದ ಕಿಟಕಿಗಳ ಬಳ ಪುದೀನಾ ಗಿಡವನ್ನು ಇಡುವುದರಿಂದ ಹಲ್ಲಿಗಳಿಗೆ ಮನೆ ಪ್ರವೇಶಿಸಲು ನೋ ಎಂಟ್ರಿ ಬೋರ್ಡ್ ಹಾಕಿದಂತೆ. ಪುದೀನಾ ಗಿಡ ಎಲ್ಲಿಂದ ತರಲಿ ಎಂದು ಯೋಚಿಸುತ್ತಿರುವವರು, ಅದರ ಬದಲಾಗಿ ನೀರಿನೊಂದಿಗೆ ಪುದೀನಾ ಎಣ್ಣೆಯನ್ನು ಬೆರೆಸಿ ಹಲ್ಲಿಗಳು ಅಡಗಿರುವ ಸ್ಥಳಗಳಲ್ಲಿ ಸಿಂಪಡಿಸಿದರೂ ಸಾಕು. ಇನ್ನು ಬೋನಸ್ ಗಿಡ ಜೇಡಗಳು ಹಾಗೂ ಇರುವೆಯನ್ನು ದೂರವಿರುಸುತ್ತದೆ.

ಕೀಟ ನಿರೋಧಕ ಬೆಳ್ಳುಳ್ಳಿ:
ಇದು ವಿಚಿತ್ರವೆನಿಸಿದರು ಸತ್ಯ. ಬೆಳ್ಳುಳ್ಳಿ ಕೇವಲ ಒಗ್ಗರಣೆಗೆ ಮಾತ್ರವಲ್ಲ, ಕೀಟಗಳನ್ನು ತಡೆಯಲು ಉಪಯಕ್ತ. ನಿಮಗೆ ಹಲ್ಲಿಗಳು ಅಲರ್ಜಿಯಾದರೆ, ಹಲ್ಲಿಗಳಿಗೆ ಬೆಳ್ಳುಳ್ಳಿ ಅಲರ್ಜಿಯಂತೆ. ಕಟು ವಾಸನೆಯುಳ್ಳ ಬೆಳ್ಳುಳ್ಳಿ ಹಲ್ಲಿಯನ್ನು ಮನೆಯಿಂದ ಹೊರದಬ್ಬುತ್ತವೆ. ಬೆಳ್ಳುಳ್ಳಿ ಎಸಳನ್ನು ಬಾಗಿಲು, ಕಿಟಕಿಗಳ ಬಳಿ ಇರಿಸಿದರೆ ಸಾಕು ಅವು ಹಲ್ಲಿಯನ್ನು ಮನೆಗೆ ಪ್ರವೇಸಿಸದಂತೆ ತಡೆಯುತ್ತವೆ.

ಈರುಳ್ಳಿಗೆ ಹೇಳಿ ಹಾಯ್, ಹಲ್ಲಿಗೆ ಹೇಳಿ ಬಾಯ್ ಬಾಯ್:
ಇದೇನು ಒಗ್ಗರೆಣೆ ಐಟಮ್ಗಳು ಹಲ್ಲಿ ಓಡಿಸಲು ಬಳಕೆಯಾಗುತ್ತವೆಯೇ ಎಂದು ಯೋಚಿಸುತ್ತಿದ್ದರೆ. ಉತ್ತರ ಹೌದು. ಬೆಳ್ಳುಳ್ಳಿಯಂತೆ ಈರುಳ್ಳಿ ಸಹ ಕಟು ವಾಸನೆಯನ್ನು ಹೊಂದಿದೆ. ಇದರ ಘಾಡ ವಾಸನೆ ಹಲ್ಲಿಗೆ ಒಗ್ಗದ ಕಾರಣ ಅದು ಆ ಸ್ಥಳಗಳಲ್ಲಿ ಹರಿಯಲು ಹಿಂದೇಟಾಕುತ್ತದೆ. ಆದ್ದರಿಂದ ಈರುಳ್ಳಿಯನ್ನು ಸಣ್ಣ ಹೋಳುಗಳನ್ನಾಗಿ ಮಾಡಿಕೊಂಡು ಬಾಗಿಲು, ಕಿಟಕಿ, ವೆಂಟಿಲೇಟರ್ಗಳ ಸಂಧಿಯಲ್ಲಿ ಇರಿಸಿದರೆ ಹಲ್ಲಿಗಳು ಮನೆಗೆ ನುಸುಳುವುದು ಕಡಿಮೆಯಾಗುತ್ತದೆ.

ಸಿಟ್ರೆಸ್ ಘಮ ಹೊಮ್ಮಿಸುವ ನಿಂಬೆ:
ನಿಂಬೆ ಹುಲ್ಲು ಪರಿಮಳಯುಕ್ತವಾಗಿದ್ದು ಮನುಷ್ಯರಿಗೆ ಇದು ಸಹ ರಿಫ್ರೆಶಿಂಗ್ ಘಮವಾಗಿದೆ. ಆದರೆ, ನಿಂಬೆಯಲ್ಲಿರುವ ಸಿಟ್ರಸ್ ಪರಿಮಳ ಹಲ್ಲಿಗಳಿಗೆ ಅಹಿತಕರವಾಗಿದೆ. ಆದ್ದರಿಂದ ಪಾಟ್ಗಳಲ್ಲಿ ನಿಂಬೆ ಹುಲ್ಲು ನೆಟ್ಟು, ಬಾಗಿಲುಗಳಲ್ಲಿ ಇದನ್ನು ಸ್ಥಾಪಿಸಬಹುದು. ಇಲ್ಲದಿದ್ದರೆ ಡಿಫ್ಯೂಸರ್ನಲ್ಲಿ ನಿಂಬೆ ಹುಲ್ಲು ತೈಲ ಹಾಕಿ ಮನೆಯಲ್ಲಿಡಿ.
ಪೈರೆಥ್ರಿನ್ ಹೊಂದಿರುವ ಚೆಂಡು ಹೂ:
ಸುಂದರವಾಗಿರುವ ಚೆಂಡು ಹೂ ಹಲ್ಲಿಗಳನ್ನು ಹಿಮ್ಮೆಟ್ಟಿಸುವ ಫೈರೆಥ್ರಿನ್ ಅಂಶ ಹೊಂದಿದೆ. ಇದು ಕೀಟಗಳು ಹಾಗೂ ಹಲ್ಲಿಗಳನ್ನು ಹಿಮ್ಮೆಟ್ಟಿಸುವ ಪರಿಣಾಮಕಾರಿ ನೈಸರ್ಗಿಕ ಅಂಶ ಒಳಗೊಂಡಿದೆ. ಬಾಲ್ಕನಿಯಲ್ಲಿ ಚೆಂಡು ಹೂಗಳನ್ನು ನೆಟ್ಟಿ ಬೆಳೆಸುವುದರಿಂದ ಮನೆಯ ಅಂಗಳವನ್ನು ಸುಂದರಗೊಳಿಸುವ ಜೊತೆಗೆ ನೈಸರ್ಗಿಕವಾಗಿ ಹಲ್ಲಿಗಳನ್ನು ಮನೆಗೆ ಪ್ರವೇಶಿಸುವುದನ್ನು ತಡೆಯುತ್ತವೆ.