ಬಿಗ್ ಬಾಸ್ ಕನ್ನಡ ಶೋ ಬಹಳ ಜನಪ್ರಿಯತೆ ಶೋ, ಇಡೀ ಕರ್ನಾಟಕದಲ್ಲಿ ಬಿಗ್ ಬಾಸ್ ಶೋಗೆ ಇರುವಷ್ಟು ಕ್ರೇಜ್ ಬೇರೆ ಧಾರಾವಾಹಿಗಳಿಗೆ ಅಥವಾ ರಿಯಾಲಿಟಿ ಶೋಗಳಿಗೆ ಇಲ್ಲ. ಟಿಆರ್ಪಿಯಲ್ಲಿ ಸಹ ಬಿಗ್ ಬಾಸ್ ಶೋ ಯಾವಾಗಲೂ ಮುಂದಿರುತ್ತದೆ. ಪ್ರತಿ ವಾರದ ರೇಟಿಂಗ್ ಅದ್ಭುತವಾಗಿ ಮೂಡಿ ಬರುತ್ತಿದೆ. ಇನ್ನು ಬಿಗ್ ಬಾಸ್ ಶೋ ಎಂದರೆ ಹಲವು ವಿಚಾರಗಳು ಚರ್ಚೆಗೆ ಒಳಗಾಗುತ್ತದೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಅತೀ ಕಡಿಮೆ ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಯಾರು ಎಂದು ಗೊತ್ತಾಗಿದ್ದು, ಇದನ್ನು ಕೇಳಿ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಹಾಗಿದ್ರೆ ಆ ಸ್ಪರ್ಧಿ ಯಾರು? ತಿಳಿಯೋಣ ಬನ್ನಿ..

ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ 8 ವಾರಗಳು ಕಳೆದು ಹೋಗಿದೆ. ಈ ಶೋಗೆ ಇರುವ ಬೇಡಿಕೆ ಕಡಿಮೇ ಆಗುತ್ತಲೇ ಇಲ್ಲ. ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದು ಧರ್ಮ ಕೀರ್ತಿರಾಜ್ ಅವರು. ಕಳೆದ ವಾರ ಅನುಷಾ ಅವರು ಎಲಿಮಿನೇಟ್ ಆಗಿ ಹೊರಬಂದರು. ಇವರಿಬ್ಬರು ಬಹಳ ಒಳ್ಳೆಯ ಸ್ಪರ್ಧಿಗಳು, ಯಾರ ವಿಷಯಕ್ಕೂ ಹೋಗುತ್ತಿರಲಿಲ್ಲ. ಗಾಸಿಪ್ ಮಾಡುತ್ತಿರಲಿಲ್ಲ, ತಮ್ಮ ಪಾಡಿಗೆ ತಾವಿದ್ದರು, ಎಲ್ಲರ ಜೊತೆಗೆ ಹೊಂದಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದರು. ಆದರೆ ಇವರಿಬ್ಬರೇ ಬೇಗ ಎಲಿಮಿನೇಟ್ ಆಗಿದ್ದು ಬೇಸರ ವಿಷಯ. ಇದು ಅಭಿಮಾನಿಗಳಿಗೂ ಬೇಸರ ಆಗಿತ್ತು.

ಇನ್ನು ಈ ಸೀಸನ್ ನಲ್ಲಿ ಹಂಸ, ಲಾಯರ್ ಜಗದೀಶ್, ಗೌತಮಿ ಜಾಧವ್, ತ್ರಿವಿಕ್ರಂ, ಉಗ್ರಂ ಮಂಜು, ಮೋಕ್ಷಿತಾ, ಚೈತ್ರ, ಧನರಾಜ್ ಇವರೆಲ್ಲರು ಸಹ ಸ್ಪರ್ಧಿಗಳಾಗಿ ಬಂದಿದ್ದಾರೆ. ಸರಿಗಮಪ ಖ್ಯಾತಿಯ ಹನುಮಂತ, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಶೋಭಾ ಶೆಟ್ಟಿ, ರಜತ್ ಕಿಶನ್ ಈ ಮೂವರು ಸಹ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದ ನಂತರ, ಮನೆಯಲ್ಲಿ ಒಂದು ರೀತಿ ಎಲ್ಲವೂ ಬದಲಾಗಿದೆ. ಸ್ಪರ್ಧಿಗಳು ಇನ್ನು ಆಕ್ಟಿವ್ ಆಗಿದ್ದಾರೆ. ಜೋಶ್ ಕೂಡ ಹೆಚ್ಚಾಗಿ, ಟಾಸ್ಕ್ ಗಳಲ್ಲಿ ಉತ್ತಮವಾಗಿ ಪಾಲ್ಗೊಳ್ಳುತ್ತಿದ್ದಾರೆ..
ಇದೆಲ್ಲವೂ ಒಂದು ಕಡೆಯಾದರೆ, ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳ ಪೈಕಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವುದು ಯಾರು, ಅತೀ ಕಡಿಮೆ ಸಂಭಾವನೆ ಪಡೆಯುತ್ತಿರುವುದು ಯಾರು ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ. ಇದಕ್ಕೆ ಉತ್ತರ ಕೂಡ ಸಿಕ್ಕಿದೆ. ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಬರುವ ಪ್ರತಿಯೊಬ್ಬ ಸ್ಪರ್ಧಿಗೆ ವಾರಕ್ಕೆ ಇಂತಿಷ್ಟು ಎಂದು ಸಂಭಾವನೆ ನಿಗದಿ ಮಾಡಲಾಗಿರುತ್ತದೆ. ಗೆದ್ದವರಿಗೆ ಈ ಸಂಭಾವನೆಯ ಜೊತೆಗೆ 50 ಲಕ್ಷ ರೂಪಾಯಿ ಪ್ರೈಜ್ ಮನಿ ಕೂಡ ಸಿಗುತ್ತದೆ. ಹಾಗಾಗಿ ಯಾರಿಗೆ ಎಷ್ಟು ಸಂಭಾವನೆ ಸಿಗುತ್ತದೆ ಎನ್ನುವ ಕುತೂಹಲ ಜನರಲ್ಲಿ ಸಹ ಶುರುವಾಗಿದ್ದು, ಇದೀಗ ಒಂದು ಮಾಹಿತಿ ಸಿಕ್ಕಿದೆ.

ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ನಟಿ ಗೌತಮಿ ಜಾಧವ್ ಎಂದು ಹೇಳಲಾಗುತ್ತಿದೆ. ಇನ್ನು ಅತೀಕಡಿಮೆ ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಧನರಾಜ್ ಎಂದು ಹೇಳಲಾಗುತ್ತಿದೆ. ಇವರಿಗೆ ವಾರಕ್ಕೆ 30 ಸಾವಿರ ರೂಪಾಯಿ ಸಂಭಾವನೆ ನಿಗದಿ ಆಗಿದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಸಿಕ್ಕಿರುವುದು ಸೋಶಿಯಲ್ ಮೀಡಿಯಾ ಇಂದ, ಧನರಾಜ್ ಅವರ ಕುಟುಂಬ ಆಗಲಿ ಅಥವಾ ಗೌತಮಿ ಅವರ ಕುಟುಂಬ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಅಭಿಮಾನಿಗಳು ತಿಳಿಸಿರುವ ವಿಚಾರ ಇದಾಗಿದೆ.