ಸಾವಿರದ ಎಂಟು ದ್ರವ್ಯಗಳಲ್ಲಿ ಏಳು ದ್ರವ್ಯದಿಂದ ಹೋಮ ಮಾಡಿಕೊಂಡರೆ ತುಂಬಾ ಒಳ್ಳೆಯದು.ಅಮೃತ,ವತ,ತಿಲ, ಪಾಯಸ, ಕ್ಷೀರಾ,ಅಜ್ಯ, ದುರ್ವಬಿಹಿ ಈ ಏಳು ದ್ರವ್ಯಗಳಿಂದ ಹೋಮ ಮಾಡಿಕೊಳ್ಳಬೇಕು. 144 ಸಂಖ್ಯೆಯಲ್ಲಿ ಗುಣಿಸಿ ಏಳು ಮಾಡಿದರೆ ಸಾವಿರದ ಎಂಟು ಸಂಖ್ಯೆಯಲ್ಲಿ ಹೋಮ ಮಾಡಿದರೆ ಸಂಜೀವಿನಿಯಿಂದ ಒಳ್ಳೆಯದಾಗುತ್ತದೆ. ಈ ಸಂಜೀವಿನಿ ಹೋಮದಲ್ಲಿ ಈ ಏಳು ದ್ರವ್ಯವನ್ನು ಉಪಯೋಗಿಸಿಕೊಂಡು 8000 ಜಪದೊಂದಿಗೆ, ಸಂಜೀವಿನಿ ಯಂತ್ರದೊಂದಿಗೆ ಜಪವನ್ನು ಮಾಡಬೇಕು. ಈ ಸಂಜೀವಿನಿ ಮಂತ್ರದ ವಿಶೇಷತೆ ಪರಮೇಶ್ವರ ಸಾಕ್ಷಾತ್ ಶುಕ್ರ ಆಚಾರ್ಯನಿಗೆ ಹೇಳುವಂತಹದು. ಸಂಜೀವಿನಿ ಮಂತ್ರಕ್ಕೆ ಅಧಿಪತಿಯೇ ಶುಕ್ರ. ಶಿವನೇ ದೇವರಾಗಿರುವಂತಹದು.
ಈ ಸಂಜೀವಿನಿ ಹೋಮ ಮಾಡುವುದರಿಂದ ರೋಗ ನಿವಾರಣೆ, ಭಾದೆ ನಿವಾರಣೆ, ಇವೆಲ್ಲವೂ ಸಾಧ್ಯ. ಋಷಿಮುನಿಗಳು ಅನುಭವಕ್ಕೆ ತಕ್ಕಂತೆ ತಂದುಕೊಂಡು ಹೇಳಿರುವಂತಹದ್ದಾಗಿದೆ. ಇದರಲ್ಲಿ ಋಷಿಮುನಿಗಳು ಹಾಕಿ ಕೊಟ್ಟದ್ದೆ ಹೆಚ್ಚಾಗಿದೆ. ಸಂಜೀವಿನಿ ಹೋಮ ಮಾಡಿಕೊಳ್ಳುವುದರಿಂದ ಗುರು ಮುಖದಿಂದ ಯಂತ್ರವನ್ನು ಅಥವಾ ಉಪದೇಶ ಪಡೆದಾಗಲೇ ಅದು ಫಲವನ್ನು ಕೊಡುವಂತಹದ್ದು, ಇಲ್ಲದಿದ್ದರೆ ಫಲವನ್ನು ಕೊಡುವುದಿಲ್ಲ.
ಸಂಜೀವಿನಿ ಯಂತ್ರ, ಸಂಜೀವಿನಿ ಹೋಮ ಮಾಡುವುದರಿಂದ ರೋಗಗಳು ಭಾದೆಗಳು ನಿವಾರಣೆಯಾಗುತ್ತದೆ. ಸಂಜೀವಿನಿ ಒಂದು ರೀತಿಯಲ್ಲಿ ಚೈತನ್ಯವನ್ನು ಕೊಡುತ್ತದೆ. ಒಂದು ಶಕ್ತಿಯನ್ನು ಕೊಡುತ್ತದೆ. ಈ ಸಂಜೀವಿನಿ ಯಂತ್ರವನ್ನು ಧಾರಣೆ ಮಾಡುವುದರಲ್ಲಿ ಆರೋಗ್ಯ ಪ್ರಾಪ್ತಿಯಾಗುತ್ತದೆ. ರೋಗಿಷ್ಟರನ್ನಾಗಿ ಮಾಡುವುದಿಲ್ಲ. ಹಾಸಿಗೆಯಲ್ಲಿ ಮಲಗಿದವರನ್ನು ಎದ್ದು ಕೂರಿಸುವ ವಿಶೇಷತೆಗಳು ಇದೆ. ಸಂಜೀವಿನಿ ಯಂತ್ರದಾರಣೆ ಸಂಜೀವಿನಿ ಹೋಮ ಮಾಡಿಕೊಳ್ಳಿ. ಇದರಿಂದ ಬಹಳ ಉಪಯೋಗವಾಗುತ್ತದೆ.
ಧನ್ಯವಾದಗಳು